ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Fashion 2025: ಮಾನ್ಸೂನ್‌ನಲ್ಲಿ ಟ್ರೆಂಡಿಯಾದ ಬಣ್ಣಬಣ್ಣದ ಲಾಂಗ್ ಸ್ಲಿಮ್ ಫಿಟ್ ಬ್ಲೇಜರ್ ಫ್ಯಾಷನ್

Monsoon Fashion 2025: ಮಾನ್ಸೂನ್‌ನಲ್ಲಿ ಕಲರ್‌ಫುಲ್ ಲಾಂಗ್ ಸ್ಲಿಮ್ ಫಿಟ್ ಬ್ಲೇಜರ್ ಫ್ಯಾಷನ್ ಟ್ರೆಂಡಿಯಾಗಿದೆ. ಮಾನಿನಿಯರು ಧರಿಸಿದಾಗ ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಬ್ಲೇಜರ್‌ನಲ್ಲಿ ಯಾವುದು ಟ್ರೆಂಡಿಯಾಗಿದೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಕಲರ್‌ಫುಲ್ ಸ್ಲಿಮ್ ಫಿಟ್ ಲಾಂಗ್ ಬ್ಲೇಜರ್ ಫ್ಯಾಷನ್ ಈ ಬಾರಿಯ ಮಾನ್ಸೂನ್ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಹೌದು, ಈ ಬಾರಿಯ ಮಾನ್ಸೂನ್‌ನಲ್ಲಿ, ಕಾರ್ಪೋರೇಟ್ ಕ್ಷೇತ್ರದವರು ಮಾತ್ರವಲ್ಲ, ಬಿಸ್‌ನೆಸ್ ವುಮೆನ್‌ಗಳು, ಮಾರ್ಕೆಟಿಂಗ್ ಕ್ಷೇತ್ರದವರು ಫ್ಯಾಷೆನಬಲ್ ಆಗಿ ಧರಿಸಬಹುದಾದ ನಾನಾ ಬಗೆಯ ಲಾಂಗ್ ಸ್ಲಿಮ್ ಫಿಟ್ ಕಲರ್‌ಫುಲ್ ಬ್ಲೇಝರ್‌ಗಳು ಚಾಲ್ತಿಯಲ್ಲಿವೆ.

2/5

ಕಲರ್‌ಫುಲ್ ಲಾಂಗ್ ಬ್ಲೇಜರ್ ವಿನ್ಯಾಸ

ನಮಗೆಲ್ಲರಿಗೂ ಗೊತ್ತಿರುವಂತೆ, ಲಾಂಗ್ ಬ್ಲೇಜರ್ ಫ್ಯಾಷನ್ ಹೊಸತೇನಲ್ಲ! ಆದರೆ, ಇದು ಇದುವರೆಗೂ ಇವು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಮಾತ್ರವಲ್ಲ, ಬಿಸ್‌ನೆಸ್ ವುಮೆನ್ ಮಾನಿನಿಯರನ್ನು ಸೆಳೆದಿವೆ. ಇದಕ್ಕೆ ಕಾರಣ, ನಾನಾ ಕಲರ್‌ಗಳಲ್ಲಿ ಇವು ದೊರಕುತ್ತಿರುವುದು ಹಾಗೂ ಸ್ಲಿಮ್ ಫಿಟ್ ವಿನ್ಯಾಸದಲ್ಲಿ ಬಂದಿರುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

3/5

ಮಾನ್ಸೂನ್‌ನಲ್ಲಿ ಲಾಂಗ್ ಬ್ಲೇಜರ್ಸ್ ಜಾದೂ

ಮಳೆಗಾಲದಲ್ಲಿ ಲಾಂಗ್ ಬ್ಲೇಜರ್‌ಗಳು ಲೇಯರ್ ಲುಕ್ ನೀಡುತ್ತವೆ ಅಲ್ಲದೇ, ಕಾರ್ಪೋರೇಟ್ ಹಾಗೂ ಬಿಸ್‌ನೆಸ್ ಮತ್ತು ಮಾರ್ಕೆಟಿಂಗ್ ಕ್ಷೇತ್ರದ ಯುವತಿಯರಿಗೆ ದಿನನಿತ್ಯದ ಮೀಟಿಂಗ್ ಹಾಗೂ ವರ್ಕ್‌ಶಾಪ್‌ಗಳಿಗೆ ಮ್ಯಾಚ್ ಆಗುತ್ತವೆ. ಅಲ್ಲದೇ, ಸದಾ ಎಸಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಇವು ಬೆಚ್ಚಗಿಡುತ್ತವೆ ಕೂಡ. ಇನ್ನು, ಹೈ ಫ್ಯಾಷನ್ ಲಿಸ್ಟ್‌ನಲ್ಲಿರುವ, ಇವು ಹೈ ಕ್ಲಾಸ್ ಲುಕ್ ನೀಡುವುದರೊಂದಿಗೆ ಧರಿಸುವ ಯುವತಿಯರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಧನ್ಯಾ.

4/5

ಟ್ರೆಂಡಿಯಾಗಿರುವ ಲಾಂಗ್ ಬ್ಲೇಜರ್‌ಗಳು

ವೂಲ್, ಚೆಕ್ಡ್, ಗಿಂಗ್ನಂ ಶೈಲಿಯ ಬ್ಲೇಜರ್‌ಗಳು ಈ ಜನರೇಷನ್ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಲೈಟ್‌ವೇಟ್ ಲಾಂಗ್ ಬ್ಲೇಜರ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ಎನ್ನುತ್ತಾರೆ ಮಾರಾಟಗಾರರು.

5/5

ಲಾಂಗ್ ಬ್ಲೇಜರ್ ಸ್ಟೈಲಿಂಗ್‌ಗೆ 5 ಸಲಹೆ

  • ಸಾಮಾನ್ಯ ಜೀನ್ಸ್ ಪ್ಯಾಂಟ್‌ಗೂ ಧರಿಸಿ ಕ್ಯಾಶುವಲ್ ಲುಕ್ ನೀಡಬಹುದು.
  • ಮಾಡರ್ನ್ ಲುಕ್ ಬೇಕಿದ್ದಲ್ಲಿ, ಕ್ರಾಪ್ ಟಾಪ್ ಅಥವಾ ಕ್ರಾಪ್ ಬ್ಲೌಸ್‌ ಮ್ಯಾಚ್ ಮಾಡಬಹುದು.
  • ನಾನಾ ವಿನ್ಯಾಸದ ಸ್ಕರ್ಟ್ ಜತೆಗೂ ಮ್ಯಾಚ್ ಮಾಡಬಹುದು.
  • ಬ್ಲೇಜರ್‌ಗೆ ಶೂಗಳನ್ನು ಧರಿಸಲೇಬೇಕು.
  • ಆಕ್ಸೆಸರೀಸ್ ಮಿನಿಮಲ್ ಆಗಿರಬೇಕು.

ಶೀಲಾ ಸಿ ಶೆಟ್ಟಿ

View all posts by this author