SL Bhyarappa: ಸಾಹಿತಿ ಭೈರಪ್ಪ ಅವರ ಅಂತ್ಯಕ್ರಿಯೆಗೆ ಕೇಂದ್ರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ ಜೋಶಿ
Prahlad Joshi: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಿದ್ಧ ಲೇಖಕ, ಪದ್ಮವಿಭೂಷಣ, ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಭೈರಪ್ಪ ಅವರ ಒಡನಾಡಿ, ಕೇಂದ್ರ ಸಂಪುಟದ ಹಿರಿಯ ಸಚಿವ ಪ್ರಲ್ಹಾದ ಜೋಶಿ ಅವರನ್ನು ನಿಯೋಜಿಸಿದ್ದಾರೆ.

-

ನವದೆಹಲಿ: ನಾಡಿನ ದಿಗ್ಗಜ ಸಾಹಿತಿ, ಕಾದಂಬರಿಕಾರ, ಸಂಶೋಧಕರಾದ ಪದ್ಮಭೂಷಣ ಡಾ.ಎಸ್. ಎಲ್ ಭೈರಪ್ಪನವರ (SL Bhyarappa) ಅಂತ್ಯಸಂಸ್ಕಾರದಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಸಚಿವ ಪ್ರಲ್ಹಾದ ಜೋಶಿ (Prahlad Joshi) ಅವರನ್ನು ನಿಯೋಜಿಸಿದೆ. ಈ ನಾಡಿನ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಮೇರು ಸಾಹಿತಿ ಇಂದು ಪಂಚಭೂತಗಳಲ್ಲಿ ಲೀನರಾಗಲಿದ್ದು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಬೆಳಗ್ಗೆ 11 ಗಂಟೆ ವೇಳೆಗೆ ಭೈರಪ್ಪ ಅವರ ಪಾರ್ಥೀವ ಶರೀರಕ್ಕೆ ಕೇಂದ್ರ ಸರ್ಕಾರದ ಪರವಾಗಿ ಅಂತಿಮ ನಮನ, ಗೌರವಾರ್ಪಣೆ ಸಲ್ಲಿಸಲಿದ್ದಾರೆ.
ʼಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಧೀಮಂತ ಸಾಹಿತಿ, ಸಂಶೋಧಕರನ್ನು ಕಳೆದುಕೊಂಡಂತಾಗಿದೆʼ ಎಂದು ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಿದ್ಧ ಲೇಖಕ, ಪದ್ಮವಿಭೂಷಣ, ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಭೈರಪ್ಪ ಅವರ ಒಡನಾಡಿ, ಕೇಂದ್ರ ಸಂಪುಟದ ಹಿರಿಯ ಸಚಿವ ಪ್ರಲ್ಹಾದ ಜೋಶಿ ಅವರನ್ನು ನಿಯೋಜಿಸಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಮೈಸೂರಿನಲ್ಲಿರುವ ಭೈರಪ್ಪ ಅವರ ಸ್ವಗೃಹಕ್ಕೆ ತೆರಳಿ ಅವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶವನ್ನು ತಲುಪಿಸುವುದರೊಂದಿಗೆ ಕೇಂದ್ರ ಸರ್ಕಾರದ ಪರವಾಗಿ ಅಂತಿಮ ನಮನಗಳನ್ನು ಸಮರ್ಪಿಸಲಿದ್ದಾರೆ. ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿಸಲು ಉದ್ದೇಶಿಸಿರುವ ಅಂತ್ಯಕ್ರಿಯೆ ವೇಳೆ ಸಹ ಸಚಿವರು ಭಾಗಿಯಾಗಿ ಅಂತಿಮ ಶೃದ್ಧಾಂಜಲಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: SL Bhyrappa: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಗಣ್ಯರಿಂದ ಎಸ್.ಎಲ್. ಭೈರಪ್ಪ ಅಂತಿಮ ದರ್ಶನ