Jamboo Savari 2026: ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಆರಂಭ; ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಪ್ರಶಾಂತ- Video
Mysuru Dasara 2026: ಜಂಬೂಸವಾರಿ ಮೆರವಣಿಗೆ ಮೈಸೂರು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು, ಕೆ.ಆರ್. ವೃತ್ತ ಮತ್ತು ದೇವರಾಜ ಮಾರುಕಟ್ಟೆ ದಾಟಿ ಸಯ್ಯಾಜಿ ರಾವ್ ರಸ್ತೆಗೆ ತಿರುಗಿ, ಉತ್ತರಕ್ಕೆ ಬನ್ನಿಮಂಟಪ ಮೈದಾನದವರೆಗೆ ಸಾಗುತ್ತದೆ.
-
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಬುಧವಾರ ಸಂಜೆ ಐತಿಹಾಸಿಕ ಜಂಬೂ ಸವಾರಿ ಆರಂಭಗೊಂಡಿದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಆನೆ ಪ್ರಶಾಂತ ಸಾಗುತ್ತಿದೆ. ನಾಡದೇವಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸಿದ್ದಾರೆ.
ಮೆರವಣಿಗೆಗೆ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಧ್ಯಾಹ್ನ 1:36ಕ್ಕೆ ನಂದಿ ಧ್ವಜ ಪೂಜೆ ನೆರವೇರಿಸಿ, ಗಣ್ಯರೊಂದಿಗೆ ಸಂಜೆ 4:10ಕ್ಕೆ ಅಂಬಾರಿಯಲ್ಲಿನ ದೇವಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಆರಂಭವಾಯಿತು.
ಜಂಬೂಸವಾರಿ ಮೆರವಣಿಗೆ ಮೈಸೂರು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು, ಕೆ.ಆರ್. ವೃತ್ತ ಮತ್ತು ದೇವರಾಜ ಮಾರುಕಟ್ಟೆ ದಾಟಿ ಸಯ್ಯಾಜಿ ರಾವ್ ರಸ್ತೆಗೆ ತಿರುಗಿ, ಉತ್ತರಕ್ಕೆ ಬನ್ನಿಮಂಟಪ ಮೈದಾನದವರೆಗೆ ಸಾಗುತ್ತದೆ.
ನಿಶಾನೆ ಆನೆ ಅಭಿಮನ್ಯು ಈ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾನೆ. ಈತನ ಹಿಂದೆ ಸಾಲಾನೆಗಳು, ಕಲಾತಂಡಗಳು, ಸ್ತಬ್ಧ ಚಿತ್ರಗಳು ಹಾಗೂ ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಪ್ರಕಾರದ ತಂಡಗಳು ಮೆರವಣಿಗೆ ಸಾಗುತ್ತಿವೆ.