ನಾರದ ಸಂಚಾರ
“ಮಹಾ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿಬಿಟ್ಟರೆ ದೇಶದ ಬಡತನ ನಿವಾರಣೆಯಾಗು ತ್ತದೆಯೇ? ದೇಶದಲ್ಲಿ ಬಡತನ ತಾಂಡವವಾಡುತ್ತಿರುವಾಗ, ಮಕ್ಕಳು ಹಸಿವಿನಿಂದ ಸಾಯುತ್ತಿರು ವಾಗ ಹೀಗೆ ಕೋಟಿಗಟ್ಟಲೆ ಹಣ ಖರ್ಚುಮಾಡಿ ಇಂಥ ಮೇಳವನ್ನು ನಡೆಸುವ ಅಗತ್ಯವಿತ್ತೇ?" ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ ಹಿರಿಯ ಕಾಂಗ್ರೆಸ್ಸಿಗರೊಬ್ಬರು!
ಈ ಮಾತನ್ನು ಕೇಳಿಸಿಕೊಂಡ ‘ಕೇಶವಕೃಪಾ’ಪೋಷಿತರೊಬ್ಬರು, “ಅಬ್ಬಾ, ಏನ್ ಮಾತು ಏನ್ ಕಥೆ, ಎಂಥಾ ‘ಪನ್ನು’ ಎಂಥಾ ‘ಫನ್ನು’?! ಕಾಂಗ್ರೆಸ್ಸಿಗರು ದಶಕಗಳ ಹಿಂದೆಯೇ ‘ಗರೀಬಿ ಹಟಾವೊ’ ಎಂಬ ಮಂತ್ರವನ್ನು ಕಂಠಪಾಠ ಮಾಡಿಕೊಂಡು, ಸಿಕ್ಕ ಸಿಕ್ಕ ಸಾರ್ವಜನಿಕ ವೇದಿಕೆಗಳಲ್ಲೆಲ್ಲಾ ಅದೇ ತೌಡನ್ನು ಕುಟ್ಟುತ್ತಿದ್ದರು.
ಇದನ್ನೂ ಓದಿ: Narada Sanchara: ಹೀಗೊಬ್ಬ ಸೂತ್ರಧಾರಿ
ಇದರಿಂದ ಮೂಟೆಗಟ್ಟಲೆ ಹೊಟ್ಟು ಸಿಕ್ಕಿತೇ ವಿನಾ, ದೇಶಸ್ಥರ ‘ಗರೀಬಿ’ ಯಂತೂ ‘ಹಟಾವ್’ ಆಗ ಲಿಲ್ಲ. ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ಸಿಗರಿಂದಲೇ ನಿವಾರಣೆ ಯಾಗದ ಬಡತನವು, ಈಗೊಂದು ಹನ್ನೊಂದು ವರ್ಷದಿಂದ ಗದ್ದುಗೆಯಲ್ಲಿ ಕೂತಿರೋರು ನೀರಲ್ಲಿ ಮುಳುಗೇಳುತ್ತಿದ್ದಂತೆ ನಿರ್ನಾಮವಾಗಿಬಿಡುವುದೇ?!!" ಎಂದು ವಿಶಿಷ್ಟ ಶೈಲಿಯಲ್ಲಿ ‘ಟಾಂಗ್’ ನೀಡಿ, ಗೊಜ್ಜವಲಕ್ಕಿಯನ್ನು ಬಾಯಾಡಿಸಿದರಂತೆ!!
ವಿಪಕ್ಷದವರೇ ಕಾರಣ!
“ರಾಜ್ಯದಲ್ಲಿ ಏನೇ ನಡೆದರೂ, ಹಿಂದಿನ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರದ ಮೇಲೆ ಹಾಕು ತ್ತಾರೆ; ಮಳೆ ಹೆಚ್ಚಾದರೂ ಕಡಿಮೆಯಾದರೂ ಇದಕ್ಕೆ ಬಿಜೆಪಿಯೇ ಕಾರಣ ಅಂತಾರೆ. ಇಂಥ ಬಾಲಿಶ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು" ಎಂದಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಹೋಶಿಯ ವರು. ಸರ್, ನಿಮ್ಮ ಮಾತು 200% ನಿಜ. ನಿಮ್ಮ ಎದುರಾಳಿ ಪಕ್ಷದ ಯುವನಾಯಕರೊಬ್ಬರು ತಮ್ಮ ‘ವೈ-’ ಅನ್ನು ಹೆರಿಗೆಗೆಂದು ನರ್ಸಿಂಗ್ ಹೋಮ್‌ಗೆ ಸೇರಿಸಿ, ತಾವು ಅಲ್ಲಿನ ಪಡಸಾಲೆಯ ಬೆಂಚ್ ಮೇಲೆ ಉಗುರು ಕಚ್ಚುತ್ತಾ ಕೂತಿದ್ದರು.
ಕೆಲ ಹೊತ್ತಿನ ನಂತರ ಅವರಿದ್ದಲ್ಲಿಗೆ ಓಡಿಬಂದ ‘ಮಲಯಾಳಿ ಮಿಡ್‌ವೈ-’, “ಸರ್, ನಿಂಗಳುಡೆ ಭಾರ್ಯ ಒರು ಪೆಣ್‌ಕುಂಜಿನೆ ಪ್ರಸವಿಚ್ಚು" (ಸರ್, ನಿಮ್ಮ ಹೆಂಡತಿಗೆ ಹೆಣ್ಣುಮಗು ಆಯ್ತು) ಎಂದು ಸುದ್ದಿಮುಟ್ಟಿಸಿದಳು. ಗಂಡುಮಗುವಿನ ನಿರೀಕ್ಷೆಯಲ್ಲಿದ್ದ ಆ ಯುವಪುಢಾರಿ ಕೆರಳಿ ಕೆಂಡವಾಗಿ ‘ಢಣ್’ ಅಂತ ಎದ್ದು ನಿಂತು, “ವಾಟ್...? ಇದರ ಹಿಂದೆ ವಿಪಕ್ಷದವರ ಸಂಚು ಇದೆ, ಇದನ್ನು ಉಗ್ರ ವಾಗಿ ಖಂಡಿಸ್ತೇನೆ.." ಅಂತ ಅಡ್ಡಜ್ಞಾನದಲ್ಲಿ ಅಬ್ಬರಿಸಿ, ನರ್ಸಿಂಗ್ ಹೋಮ್‌ನ ಪಡಸಾಲೆಯಲ್ಲಿ ಅತ್ತಿಂದಿತ್ತ ಶತಪಥ ಹಾಕತೊಡಗಿದರು!!
ನಾರಾಯಣ ನಾರಾಯಣ!
“ರಾಜ್ಯ ಕಾಂಗ್ರೆಸ್‌ನಲ್ಲಿ ‘ಗೊಂದಲ’ವಿದೆ. ಶ್ರೀರಾಮುಲು-ಜನಾರ್ದನ ರೆಡ್ಡಿ ನಡುವಿನ ಸಂಘರ್ಷ ದಿಂದಾಗಿ ಬಿಜೆಪಿಯಲ್ಲೂ ‘ಗೊಂದಲ’ಗಳಿವೆ. ಒಟ್ಟಾರೆ ಕರ್ನಾಟಕದ ರಾಜಕಾರಣವೇ ಈಗ ‘ಗೊಂದಲ ’ದಲ್ಲಿದೆ" ಎಂದಿದ್ದಾರೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರು. ಈ ಮಾತುಗಳನ್ನು ಕೇಳಿಸಿಕೊಂಡ ಕವಿ ಎಂ.ಗೋಪಾಲಕೃಷ್ಣ ಅಡಿಗರ ಅಭಿಮಾನಿಗಳು, “ಸರ್, ಹಾಗಿದ್ದಲ್ಲಿ ‘ಗೊಂದಲ’ ಹುಟ್ಟುಹಾಕೋ ರಾಜಕಾರಣಿಗಳು ಓಡಾಡೋ ಪ್ರದೇಶಕ್ಕೆ ‘ಗೊಂದಲಪುರ’ ಅಂತ ನಾಮಕರಣ ಮಾಡಿದರೆ ಹೇಗಿರುತ್ತೆ? ಬರೋಬ್ಬರಿ 420 ಸಾಲುಗಳಿರುವ ‘ಗೊಂದಲಪುರ’ ಹೆಸರಿನ ಕವನ ವೊಂದನ್ನು ನಮ್ ಅಡಿಗರು 1953ರಲ್ಲೇ ಬರೆದಿದ್ದಾರೆ" ಎಂದು ಸಲಹೆ ನೀಡಲು ಬಯಸಿದ್ದಾ ರಂತೆ!!