Narada Sanchara: ಹೀಗೊಬ್ಬ ಸೂತ್ರಧಾರಿ
ಅಮಿತ್ ಶಾ ಅವರು, ಅಹಮದಾಬಾದ್‌ನಲ್ಲಿ ಉತ್ತರಾ ಯಣ ಆಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು
Source : Vishwavani Daily News Paper
ನಾರದ ಸಂಚಾರ
ಗಾಳಿಪಟಗಳು ತಮ್ಮ ವಿವಿಧ ಬಣ್ಣ ಮತ್ತು ಆಕಾರಗಳಿಂದಾಗಿ ಆಗಸದಲ್ಲಿ ಅದೆಷ್ಟೇ ನಲಿದರೂ ನುಲಿದರೂ, ನೆಲದ ಮೇಲೆ ನಿಂತಿರುವಾತನ ಕೈಯಲ್ಲಿ ಅವುಗಳ ಸೂತ್ರವಿರುತ್ತದೆ ಎಂಬುದು ವಾಸ್ತವ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಚೆನ್ನಾಗಿ ಒಪ್ಪುವ ಮಾತು ಎನ್ನುತ್ತಾರೆ ಬಲ್ಲವರು.
ಇದರ ಪ್ರದರ್ಶನ ರೂಪವೋ ಎಂಬಂತೆ ಅಮಿತ್ ಶಾ ಅವರು, ಅಹಮದಾಬಾದ್‌ನಲ್ಲಿ ಉತ್ತರಾ ಯಣ ಆಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಂದುಕೊಂಡಷ್ಟು ಸುಲಭವಲ್ಲದ ಈ ಚಟುವಟಿಕೆಯನ್ನು ಅಮಿತ್ ಶಾ ಅವರು ಅತೀವ ಚಾತುರ್ಯದಿಂದ ಮತ್ತು ಸಂತಸದಿಂದ ನಿರ್ವಹಿಸಿದ್ದನ್ನು, ಸಾಮಾ ಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳೇ ಹೇಳುತ್ತಿವೆ.
ಅಮಿತ್ ಶಾ ಅವರ ಈ ಉತ್ಸಾಹ ಮತ್ತು ಸಂತಸಗಳು ಸಹಜವೇ ಎನ್ನಿ! ಏಕೆಂದರೆ, ಇತ್ತೀಚಿನ ಕೆಲ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಎದುರಾಳಿಗಳ ‘ಗಾಳಿಪಟ’ಗಳನ್ನು ಲಕ್ಷಣವಾಗಿ ಕೆಡವಿ ಹಾಕುವಲ್ಲಿ ಅವರು ಮೆರೆದ ತಂತ್ರಗಾರಿಕೆಯನ್ನು ಬಲ್ಲವರೇ ಬಲ್ಲರು. ಆದ್ದರಿಂದಲೇ, “ರಾಜಕೀಯದ ಗಾಳಿಪಟಗಳನ್ನು ಹೀಗೆ ಯಶಸ್ವಿಯಾಗಿ ನಿರ್ವಹಿಸಿದವರಿಗೆ, ಕಾಗದದ ಗಾಳಿಪಟವನ್ನು ‘ಹ್ಯಾಂಡ್ಲ್’ ಮಾಡೋದು ಕಷ್ಟವೇನಲ್ಲ" ಎಂದು ಸಂಭ್ರಮಿಸುತ್ತಿದ್ದಾರಂತೆ ಅವರ ಹಿಂ‘ಬಾಲಕರು’.
ಇದನ್ನು ಕಂಡ ರಾಜಕೀಯ ವೀಕ್ಷಕರು, “ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆಯವರಂಥ ಮಹಾ ರಾಷ್ಟ್ರದ ರಾಜಕಾರಣಿಗಳು ಅಮಿತ್ ಶಾ ಅವರಿಂದ ಕಲಿಯಬೇಕಾದ ಪಾಠಗಳು ಇನ್ನೂ ಸಾಕಷ್ಟಿವೆ" ಎಂದು ಷರಾ ಬರೆದರಂತೆ!
ಅವಧಿಪೂರ್ವ ಆಟೋಗ್ರಾಫ್!
ರಾಷ್ಟ್ರಕವಿ ಕುವೆಂಪು ಅವರ ‘ದೋಣಿ ಸಾಗಲಿ, ಮುಂದೆ ಹೋಗಲಿ, ದೂರತೀರವ ಸೇರಲಿ’ ಎಂಬ ಗೀತೆಯಲ್ಲಿ, ‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬ ಒಂದು ಸಾಲಿದೆ. ಇದನ್ನು ಸಾಹಿತ್ಯಿಕವಾಗಿ ಅಥವಾ ತಾತ್ವಿಕವಾಗಿ ಗ್ರಹಿಸುವುದು ಒತ್ತಟ್ಟಿಗಿರಲಿ; ಒಂದು ‘ಬಸ್‌ಸ್ಟಾಪ್’ ಮುಂದೆ ಹೋಗಿ ‘ವಿಪರೀತವಾಗಿ’ ಗ್ರಹಿಸಿದವರ ಕಥೆಯನ್ನು ಲೋಕಾಯುಕ್ತ ಅಧಿಕಾರಿಗಳು ಬೆಂಗ ಳೂರಿನಲ್ಲಿ ಬಯಲು ಮಾಡಿದ್ದಾರೆ.
ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ಸಂಬಂಧವಾಗಿ ಸಾರ್ವಜನಿಕರಿಂದ ಮೂಟೆಗಟ್ಟಲೆ ದೂರು ಗಳು ಬಂದ ಹಿನ್ನೆಲೆಯಲ್ಲಿ ಸರಕಾರಿ ಇಲಾಖೆಗಳ ಮೇಲಿನ ಪರಿಶೀಲನಾ ಕಾರ್ಯವನ್ನು ಮುಂದು ವರಿಸಿದ ಲೋಕಾಯುಕ್ತರು ಮತ್ತು ಅಧಿಕಾರಿಗಳ ತಂಡವು ಸೋಮವಾರ ಮಾಪನ ಇಲಾಖೆಯ ಕೆಲ ಕಚೇರಿಗಳ ಮೇಲೆ ದಾಳಿ ನಡೆಸಿತಂತೆ. ಈ ವೇಳೆ ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದಾಗ, ಕೆಲವು ಭೂಪರು ಇವತ್ತಿನ ಜತೆಗೆ, ನಾಳಿನ ದಿನಕ್ಕೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದ್ದು ಕಂಡು ಬಂತಂತೆ!
‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬ ಸಾಲನ್ನು ಇವರು, ‘ಇಂದು ಇಂದಿಗೆ, ನಾಳೆಯದ್ದೂ ಇಂದಿಗೇ...’ ಅಂತ ಬದಲಿಸಿಕೊಂಡು ಹೀಗೆ ಸಹಿಯನ್ನು ಜಡಿದು ಬಿಟ್ಟಿ ದ್ದಾರಾ ಎನಿಸುತ್ತಿದೆ ನಾರದರಿಗೆ. ಅಬ್ಬಾ! ಎಂತೆಂಥಾ ಕಲಾವಿದರು ಇದ್ದಾರಪ್ಪಾ ನಮ್ಮಲ್ಲಿ?!!
ನಾರಾಯಣ ನಾರಾಯಣ!
ರಾಜ್ಯದ ‘ಮದ್ಯಪ್ರಿಯ’ರಿಗೆ ಶಾನೇ ಬೇಜಾರಾಗಿದೆಯಂತೆ. ಅದರಲ್ಲೂ ನಿರ್ದಿಷ್ಟವಾಗಿ ‘ಬಿಯರ್-ಬಲ್’ಗಳಂತೂ “ಇದು ‘ಅನ್-ಬಿಯರಬಲ್’ ಕಣ್ರೀ" ಎನ್ನು ತ್ತಾ ಸ್ವತಃ ‘ಭುಸುಭುಸು’ ನೊರೆಕೋಪ ವನ್ನು ಚಿಮ್ಮುತ್ತಿದ್ದಾರಂತೆ. ಕಳೆದ ವರ್ಷದಲ್ಲಿ ಮದ್ಯದ ದರವನ್ನು ಎರಡು ಬಾರಿ ಏರಿಸಿದ್ದ ರಾಜ್ಯ ಸರಕಾರವು, ಈಗ ಮತ್ತೊಂದಾವರ್ತಿ ದರ ಏರಿಕೆಗೆ ಮುಂದಾಗಿದ್ದಕ್ಕೆ ಸದರಿ ‘ಬಿಯರ್-ಬಲ್’ಗಳಿಂದ ಹೊಮ್ಮಿರುವ ವರಸೆಯಿದು ಎಂಬುದು ನಿಮ್ಮ ಗಮನಕ್ಕೆ. ರಾಜ್ಯದಲ್ಲಿ ಮಾರಾಟವಾಗುವ ಬಿಯರ್ ಗಳ ಮೇಲೆ 10ರಿಂದ 45 ರುಪಾಯಿವರೆಗೆ ಬೆಲೆ ಯೇರಿಸಲು ಸರಕಾರ ತೀರ್ಮಾನಿಸಿದ್ದು ಪರಿಷ್ಕೃತ ದರ ಈಗಾಗಲೇ ಜಾರಿಯಾಗಿದೆ. ಛೇ! ನೆಮ್ಮದಿ ಯಾಗಿ ಎಣ್ಣೆ ಹಾಕಂಗೂ ಇಲ್ಲ!!
ಇದನ್ನೂ ಓದಿ: Narada Sanchara Column: ಅಪಾರ್ಥ ಮಾಡ್ಕೋಬೇಡಿ