Naxals: ಇಂದು ಉಡುಪಿ ಜಿಲ್ಲಾಡಳಿತದ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಉಡುಪಿ ಜಿಲ್ಲಾಡಳಿತ ಎದುರು ಶರಣಾಗಲಿದ್ದಾಳೆ. ಇಂದು ಈ ಪ್ರಕ್ರಿಯೆ ನಡೆಯಲಿದೆ.
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ 6 ನಕ್ಸಲರು ಬೆಂಗಳೂರಿನ ಗೃಹಕಛೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಿದ್ದರು. ಹಲವು ದಿನಗಳಿಂದ ಭೂಗತನಾಗಿದ್ದ ರವಿ ಕೋಟೆ ಹೊಂಡ ನಿನ್ನೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ ಉಡುಪಿ ಜಿಲ್ಲಾಡಳಿತ ಎದುರು ಶರಣಾಗಲಿದ್ದಾಳೆ. ಇಂದು ಭಾನುವಾರ ಈ ಪ್ರಕ್ರಿಯೆ ನಡೆಯಲಿದೆ.
2006ರ ಮಾರ್ಚ್.6ರಿಂದ ಲಕ್ಷ್ಮೀ ತೊಂಬಟ್ಟು ನಾಪತ್ತೆಯಾಗಿದ್ದಳು. ಕರ್ನಾಟಕದಿಂದ ನಾಪತ್ತೆಯಾಗಿದ್ದಂತ ಲಕ್ಷ್ಮೀ ತೊಂಬಟ್ಟು ಆಂಧ್ರಪ್ರದೇಶದಲ್ಲಿ ನಕ್ಸಲರಾಗಿ ಸಕ್ರೀಯರಾಗಿದ್ದಳು. ನಂತರ ಮಾಜಿ ನಕ್ಸಲ್ ಆಗಿದ್ದ ಸಂಜೀವ್ ಎಂಬಾತನನ್ನು ವಿವಾಹವಾಗಿದ್ದಳು. ಆ ಬಳಿಕ ನಕ್ಸಲ್ ತೊರೆದು, ಆಂಧ್ರದಲ್ಲಿ ಸಂಸಾರಿಕ ಜೀವನ ನಡೆಸುತ್ತಿದ್ದರು.
ಸದ್ಯ ಸಂಜೀವ್ ಆಲಿಯಾಸ್ ಸಲೀಂ ಹಾಗೂ ಲಕ್ಷ್ಮೀ ನಕ್ಸಲ್ ತೊರೆದು, ಮುಖ್ಯವಾಹಿನಿಗೆ ಬಂದಿದ್ದರು. ಇದೀಗ ಕರ್ನಾಟಕ ಸರ್ಕಾರದ ಎದುರು ಆಕೆ ಶರಣಾಗಲಿದ್ದಾಳೆ.ಇಂದು ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತದ ಬದಲಾಗಿ ಉಡುಪಿ ಜಿಲ್ಲಾಡಳಿತ ಮುಂದೆ ಶರಣಾಗುವುದಾಗಿ ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Kote Honda Ravindra: ಇನ್ನುಮುಂದೆ ರಾಜ್ಯ ನಕ್ಸಲ್ ಮುಕ್ತ; ಭೂಗತನಾಗಿದ್ದ ನಕ್ಸಲ್ ಕೋಟೆಹೊಂಡ ರವಿ ಶರಣಾಗತಿ
ಶನಿವಾರ 18 ವರ್ಷಗಳಿಂದ ಭೂಗತನಾಗಿದ್ದ ರವಿ ಕೋಟೆ ಹೊಂಡ ನಿನ್ನೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದ. ಶೃಂಗೇರಿಯಿಂದ 4 ಕಿ.ಮೀ ದೂರದಲ್ಲಿರುವ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ಪೊಲೀಸರ ಮುಂದೆ ಶರಣಾಗತರಾಗಿದ್ದಾನೆ. ಈ ಮೂಲಕ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತವಾಗಿದೆ. ನಕ್ಸಲ್ ಶರಣಾಗತಿ ಆಪರೇಷನ್‌ನಲ್ಲಿ ಭಾಗವಹಿಸಿದ್ದ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ.