ಬೆಂಗಳೂರು, ಜ. 25: ಬಹುನಿರೀಕ್ಷಿತ, ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ (Padma Awards 2026). ಭಾರತದ 2, 3 ಮತ್ತು 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಜನವರಿ 25ರಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೂರು ವಿಭಾಗಗಳಲ್ಲಿ ಒಟ್ಟು 131 ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಪೈಕಿ 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮಶ್ರೀ ಸೇರಿದೆ. ಕರ್ನಾಟಕಕ್ಕೆ ಒಟ್ಟು 8 ಅವಾರ್ಡ್ ಲಭಿಸಿದ್ದು, ಅದರಲ್ಲಿ 1 ಪದ್ಮ ಭೂಷಣ, 7 ಪದ್ಮಶ್ರೀ ಸೇರಿದೆ. ಶತಾವಧಾನಿ ಆರ್. ಗಣೇಶ್ (Shatavadhani R Ganesh) ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ.
ಅಂಕೇಗೌಡ ಎಂ., ಎಸ್.ಜಿ. ಸುಶೀಲಮ್ಮ, ಶಶಿಶೇಖರ್ ವೆಂಪತಿ, ಶುಭಾ ವೇಂಕಟೇಶ್ ಐಯ್ಯಂಗಾರ್, ಡಾ. ಸುರೇಶ್ ಹನಗವಾಡಿ, ಟಿ.ಟಿ. ಜಗನ್ನಾಥನ್, ಪ್ರಭಾಕರ್ ಕೋರೆ ಪದ್ಮಶ್ರೀ ಪ್ರಶಸ್ತಿ ಪಡೆದ ಗಣ್ಯರು. ವಿವಿಧ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
ಪದ್ಮಶ್ರೀ ಪ್ರಶಸ್ತಿ ಪಡೆದ ಕನ್ನಡಿಗರು
ಕರುನಾಡಿನ ಸಪ್ತ ಸಾಧಕರು
| ಹೆಸರು | ಕ್ಷೇತ್ರ |
|---|---|
| ಅಂಕೇಗೌಡ ಎಂ. | ಸಾಮಾಜ ಸೇವೆ |
| ಎಸ್.ಜಿ. ಸುಶೀಲಮ್ಮ | ಸಾಮಾಜ ಸೇವೆ |
| ಶಶಿಶೇಖರ್ ವೆಂಪತಿ | ಸಾಹಿತ್ಯ ಮತ್ತು ಶಿಕ್ಷಣ |
| ಶುಭಾ ವೇಂಕಟೇಶ್ ಐಯ್ಯಂಗಾರ್ | ವಿಜ್ಞಾನ ಮತ್ತು ಎಂಜಿನಿಯರಿಂಗ್ |
| ಡಾ. ಸುರೇಶ್ ಹನಗವಾಡಿ | ವೈದ್ಯಕೀಯ |
| ಟಿ.ಟಿ. ಜಗನ್ನಾಥನ್ | ವ್ಯಾಪಾರ ಮತ್ತು ಕೈಗಾರಿಕೆ |
| ಪ್ರಭಾಕರ್ ಕೋರೆ | ಸಾಹಿತ್ಯ ಮತ್ತು ಶಿಕ್ಷಣ |
ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ; ಧರ್ಮೇಂದ್ರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ
ನಾಡಿನ ಏಕೈಕ ಶತಾವಧಾನಿಯನ್ನು ಅರಸಿ ಬಂದ ಪದ್ಮ ಭೂಷಣ
ನಾಡಿನ ಏಕೈಕ ಶತಾವಧಾನಿ ಎನಿಸಿರುವ ಡಾ. ಆರ್. ಗಣೇಶ ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಂಸೃತಿ ಕಥನ, ಇತಿಹಾಸ, ಅಂಕಣಬರಹಗಳು — ಮೊದಲಾಗಿ ಹತ್ತು ಹಲವು ಪ್ರಕಾರಗಳಲ್ಲಿ ಕ್ರಿಯಾಶೀಲರು. ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಸೇರಿದಂತೆ ಪ್ರದರ್ಶನ ಕಲಾಕ್ಷೇತ್ರದಲ್ಲಿ ಶಾಸ್ತ್ರ ಮತ್ತು ಪ್ರಯೋಗಗಳೆರಡರಲ್ಲೂ ಅಭ್ಯಾಸಿಗಳಿಗೆ ಒದಗಿಬರುವ ಮಾರ್ಗದರ್ಶಕರು. ವಿಶೇಷತಃ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಮಾರ್ಗದರ್ಶಕರಾಗಿ, ಪೋಷಕರಾಗಿ ಶತಾವಧಾನಿ ಡಾ. ಆರ್. ಗಣೇಶ್ ನಿರ್ವಹಿಸುತ್ತಿರುವ ಪಾತ್ರ ಬಹು ಮೌಲಿಕವಾದದ್ದು. ವಿಶೇಷ ಎಂದರೆ 2025ನೇ ಸಾಲಿನ ಅನಕೃ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.