ದೋಹಾ: ಖ್ಯಾತ ಗಾಯಕ ರಾಜೇಶ್ ಕೃಷ್ಣನ್ (singer rajesh krishnan) ಅವರಿಗೆ ಕರ್ನಾಟಕ ಸಂಘ ಕತಾರ್ (karnataka sangha qatar) ವತಿಯಿಂದ “ಸ್ವರ ಯೋಗಿ” (swara yogi) ಗೌರವ ಪ್ರದಾನ ಮಾಡಿ ಸಮ್ಮಾನಿಸಲಾಯಿತು. ದೋಹಾದ (doha) ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ 'ಸಂಭ್ರಮ 2026' (sambrama 2026) ರ ಕಾರ್ಯಕ್ರಮದಲ್ಲಿ ಕತಾರ್ ದೇಶದ ಭಾರತೀಯ ರಾಯಭಾರಿ ವಿಪುಲ್, ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಹಾಗೂ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರ ಉಪಸ್ಥಿತಿಯಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ಕತಾರ್ ಅನಿವಾಸಿ ಕನ್ನಡಿಗರ ಪರವಾಗಿ ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ ಆಯೋಜಿಸಲಾದ ‘ಸಂಭ್ರಮ 2026’ ಸಾಂಸ್ಕೃತಿಕ ಮಹೋತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರಿಗೆ “ಸ್ವರ ಯೋಗಿ” ಗೌರವ ಪ್ರದಾನ ಮಾಡಿ ಗೌರವಿಸಲಾಯಿತು.
ದೋಹಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ದಾಖಲೆ ಬರೆದ ಕತಾರ್ ಕರ್ನಾಟಕ ಸಂಘಕ್ಕೆ ರಾಯಭಾರಿಗಳಿಂದ ಶ್ಲಾಘನೆ
ಈ ಸಂದರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಅಧ್ಯಕ್ಷ ಎ.ಪಿ. ಮಣಿಕಂಠನ್, ಖತಾರ್ ಆಟೋ ಮ್ಯೂಸಿಯಂ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಹಾಗೂ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಖಾಲಿದ್ ಅಲ್ ಫಕ್ರೂ, ಕರ್ನಾಟಕ ಸಂಘ ಕತಾರ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಲಹೆಗಾರರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಕತಾರ್ ತಂಡದ ಸಮನ್ವಯ, ಪರಿಶ್ರಮ ಹಾಗೂ ಸಂಘಟನಾ ಶಕ್ತಿಯಿಂದ ‘ಸಂಭ್ರಮ 2026’ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆಯಿತು.
ಜೂನ್ 28ರಂದು ಬಾಂಗ್ಲಾದೇಶಿ ಪ್ರಜೆಗಳಿಗೆ ಪ್ರವಾಸಿ ವೀಸಾ ಪುನರಾರಂಭಿಸಿದ ಭಾರತ
ಬಳಿಕ ತಮ್ಮ ಮನಮೋಹಕ ಗಾಯನದ ಮೂಲಕ ರಾಜೇಶ್ ಕೃಷ್ಣನ್ ಅವರು ಕನ್ನಡ ಸಂಸ್ಕೃತಿಯ ಸುವಾಸನೆಯನ್ನು ಕತಾರ್ ನೆಲದಲ್ಲಿ ಹರಡಿದರು. ಸದಾ ಹಸಿರಾಗಿರುವ ಕನ್ನಡ ಗೀತೆಗಳ ಗಾಯನದ ಮೂಲಕ ಅನಿವಾಸಿ ಕನ್ನಡಿಗರಲ್ಲಿ ತಾಯ್ನಾಡಿನ ನೆನಪುಗಳನ್ನು ಮರುಜೀವಗೊಳಿಸಿದರು.