ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೋಹಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ದಾಖಲೆ ಬರೆದ ಕತಾರ್ ಕರ್ನಾಟಕ ಸಂಘಕ್ಕೆ ರಾಯಭಾರಿಗಳಿಂದ ಶ್ಲಾಘನೆ

ದೋಹಾದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಅದ್ದೂರಿ ಯೋಗ ದಿನಾಚರಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ಭಾರತೀಯ ರಾಯಭಾರಿಗಳು ಶ್ಲಾಘನೆ ವ್ಯಕ್ತಪಡಿಸಿದರು. ಕತಾರ್‌ನ ಯುಡಿಎಸ್‌ಟಿ ಕ್ರಿಕೆಟ್ ಮೈದಾನದಲ್ಲಿ ಹನ್ನೆರಡನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿವಿಧ ಸಮುದಾಯಗಳ ಸಾವಿರಾರು ಯೋಗಾಸಕ್ತರು ಇದರಲ್ಲಿ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆ

ಸಂಗ್ರಹ ಚಿತ್ರ -

ದೋಹಾ: ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ (Yoga for healthy aging) ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕತಾರ್‌ನ (qatar) ಯುಡಿಎಸ್‌ಟಿ ಕ್ರಿಕೆಟ್ ಮೈದಾನದಲ್ಲಿ ಹನ್ನೆರಡನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಅದ್ದೂರಿಯಾಗಿ ಆಚರಿಸಲಾಯಿತು. ದೀರ್ಘಾಯುಷ್ಯ, ಚೈತನ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸಿದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಸಾವಿರಾರು ಯೋಗಾಸಕ್ತರು ಇದರಲ್ಲಿ ಭಾಗವಹಿಸಿದ್ದರು. ಭಾರತೀಯ ರಾಯಭಾರಿಗಳು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

ಕತಾರ್‌ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಮುಖ ಸಂಘಟನೆಗಳಾದ ಇಂಡಿಯನ್ ಸ್ಪೋರ್ಟ್ಸ್ ಸೆಂಟರ್, ಇಂಡಿಯನ್ ಕಲ್ಚರಲ್ ಸೆಂಟರ್, ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ ಮತ್ತು ಇಂಡಿಯನ್ ಬ್ಯುಸಿನೆಸ್ ಆಂಡ್ ಪ್ರೊಫೆಷನಲ್ಸ್ ಕೌನ್ಸಿಲ್ ನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾರತದ ರಾಯಭಾರಿಯಾದ ವಿಪುಲ್ ಅವರು ಪಾಲ್ಗೊಂಡಿದ್ದರು.

ಭೂಕಂಪ ಪೀಡಿತ ವೆನೆಜುವೆಲಾಗೆ ಸಹಾಯ ಹಸ್ತ ಚಾಚಿದ ಭಾರತ; ಸೇನಾಪಡೆಗಳಿಂದ ʼಆಪರೇಷನ್ ಅಮಿಸ್ಟಾಡ್ʼ ಶುರು

ವಿಪುಲ್ ಅವರೊಂದಿಗೆ ವಿವಿಧ ದೇಶಗಳ ರಾಜತಾಂತ್ರಿಕರು ಹಾಗೂ ಕತಾರ್‌ನ ಉನ್ನತ ಗಣ್ಯರು ಭಾಗವಹಿಸಿದ್ದು, ಭಾರತ ಮತ್ತು ಕತಾರ್ ನಡುವಿನ ಗಾಢವಾದ ಸಾಂಸ್ಕೃತಿಕ ಸಂಬಂಧವನ್ನು ಪ್ರದರ್ಶಿಸಿತ್ತು.

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ರಾಯಭಾರಿ ಹಮ್ಮೂದಿ ಅಲ್-ಶೇಖ್, ಕಾರ್ಮಿಕ ಸಚಿವಾಲಯದ ಸಲಹೆಗಾರರಾದ ಖಾಲಿದ್ ಅಬ್ದುಲ್ ರೆಹಮಾನ್ ಅಲ್ ಫಕ್ರೂ, ಕತಾರ್ ಎನರ್ಜಿಯ ಹಿರಿಯ ಎಂಜಿನಿಯರ್ ಖಾಲಿದ್ ಅಲ್ ಫಕ್ರೂ, ಮನ್ನಾಯಿ ಕಾರ್ಪೊರೇಷನ್ ಅಧ್ಯಕ್ಷರಾದ ಅಬ್ದುಲ್ ಅಜೀಜ್ ಅಲ್ ಮನ್ನಾಯಿ ಮತ್ತು ಕತಾರ್ ಮಹಿಳಾ ರಾಷ್ಟಯ ಬಾಸ್ಕೆಟ್‌ಬಾಲ್ ತಂಡದ ಖ್ಯಾತ ಆಟಗಾರ್ತಿ ಮಿಸ್ ಆಲಾ ಸೊಲೈಮಾನ್ ಉಪಸ್ಥಿತರಿದ್ದರು.

quyo1

ಈ ಬೃಹತ್ ಕಾರ್ಯಕ್ರಮದ ಯಶಸ್ವಿ ನಿರ್ವಹಣೆ ಹಿಂದೆ ಭಾರತೀಯ ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳ ನಿರಂತರ ಮಾರ್ಗದರ್ಶನ ಮತ್ತು ಸಮರ್ಪಣಾ ಮನೋಭಾವವಿತ್ತು.

ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಭಾರತದ ರಾಯಭಾರಿ ವಿಪುಲ್, ಉಪ ರಾಯಭಾರಿ ಸಂದೀಪ್ ಕುಮಾರ್, ಪ್ರಥಮ ಕಾರ್ಯದರ್ಶಿಗಳಾದ ವೈಭವ್ ತಾಂಡ್ಲೆ ಮತ್ತು ಇಶ್ ಸಿಂಘಾಲ್, ಹರೀಶ್ ಪಾಂಡೆ ಅವರ ಶ್ರಮ ಮತ್ತು ವ್ಯವಸ್ಥಿತ ಸಂಘಟನೆಯನ್ನು ಶ್ಲಾಘಿಸಿ ಧನ್ಯವಾದ ಸಮರ್ಪಿಸಲಾಯಿತು.

ಯೋಗ ದಿನಾಚರಣೆಯಲ್ಲಿ ಅತಿ ಹೆಚ್ಚು ಜನರನ್ನು ಸೇರಿಸಿ ಗಮನ ಸೆಳೆದ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ನೇತೃತ್ವದಲ್ಲಿ ಸಂಘದ ಸದಸ್ಯರು ಅತ್ಯಂತ ಶಿಸ್ತಿನಿಂದ ಸಮೂಹ ಯೋಗ ಅವಧಿಗಳಲ್ಲಿ ಭಾಗವಹಿಸಿ ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಪ್ರದರ್ಶಿಸಿದರು.

ಕರ್ನಾಟಕ ಸಂಘ ಕತಾರ್‌ನ ಅಭೂತಪೂರ್ವ ಭಾಗವಹಿಸುವಿಕೆ ಮತ್ತು ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತದ ರಾಯಭಾರಿ ವಿಪುಲ್ ಅವರು, ಕರ್ನಾಟಕ ಸಂಘದ ಬೃಹತ್ ಸಂಖ್ಯೆಯ ಭಾಗವಹಿಸುವಿಕೆ ಮತ್ತು ಸಮುದಾಯದಲ್ಲಿ ಆರೋಗ್ಯ ಹಾಗೂ ಒಗ್ಗಟ್ಟನ್ನು ಉತ್ತೇಜಿಸುವ ಅವರ ಬದ್ಧತೆಯನ್ನು ಶ್ಲಾಘಿಸಿದರು.

ʼʼಭಾರತದಲ್ಲಿ ಪಾಕಿಸ್ತಾನ ಕಾನೂನು ಜಾರಿಗೊಳಿಸಬೇಕು, ಬಹುಪತ್ನಿತ್ವಕ್ಕೆ ಬೆಂಬಲ ನೀಡಬೇಕುʼʼ: ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಶಾಸಕಿ

ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಯೋಗ ನೃತ್ಯವನ್ನು ಪ್ರದರ್ಶಿಸಲಾಯಿತು. ಅಶ್ವಿನಿ ಸಿ. ಬಿ., ನಿವೇದಾ ಸಿ. ಬಿ., ಮತ್ತು ಅಮೀರ್ ಜಹ್ರೌಯಿ ಅವರು ನಡೆಸಿಕೊಟ್ಟ ಈ ನೃತ್ಯ ರೂಪಕವು ಭಾರತೀಯ ಸಂಸ್ಕೃತಿ ಮತ್ತು ಯೋಗಾಸನಗಳ ಸುಂದರ ಸಮ್ಮಿಲನವಾಗಿತ್ತು. ಇದು ಅಲ್ಲಿದ್ದ ಪ್ರೇಕ್ಷಕರು, ವಿದೇಶಿ ರಾಜತಾಂತ್ರಿಕರು ಮತ್ತು ಗಣ್ಯರನ್ನು ಮಂತ್ರಮುಗ್ಧಗೊಳಿಸಿತು.