ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಂತ್ರಾಲಯದಲ್ಲಿ 335ನೇ ರಾಯರ ಆರಾಧನೆ ಸಂಭ್ರಮ

ತಿಂಗಳ ಕೊನೆಯ ಶನಿವಾರ ಪೂರ್ವಾ ರಾಧನೆಯ ಸಡಗರವಿದ್ದು ಶನಿವಾರ ಬೆಳಗಿನ ಜಾವದಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡವು. ವಿಶೇಷವಾಗಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಮೂಲ ರಾಮದೇವರಿಗೆ ಪೂಜೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು.

ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಲಂಕಾರ

ಸುಬುಧೇಂದ್ರ ತೀರ್ಥರಿಂದ ವಿವಿಧ ಪೂಜೆ

ರಾಯಚೂರು: ಕಲಿಯುಗದ ಕಲ್ಪವಕ್ಷ , ಕಾಮಧೇನುವಾಗಿರುವ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆ ಮಂತ್ರಾಯಲದಲ್ಲಿ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋ ತ್ಸವದ ಮೊದಲ ದಿನವಾದ ಪೂರ್ವಾರಾಧನೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗುರು ರಾಘ ವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವ ನಸ್ಥರಾಗಿ 355 ವರ್ಷಗಳು ಸಂದಿರುವ ಹಿನ್ನೆಲೆ ಎಲ್ಲೆಡೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

ಇದನ್ನೂ ಓದಿ: Mantralaya Raghavendra Swamy Matha: ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ

ತಿಂಗಳ ಕೊನೆಯ ಶನಿವಾರ ಪೂರ್ವಾ ರಾಧನೆಯ ಸಡಗರವಿದ್ದು ಶನಿವಾರ ಬೆಳಗಿನ ಜಾವ ದಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡವು. ವಿಶೇಷವಾಗಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಮೂಲ ರಾಮದೇವರಿಗೆ ಪೂಜೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ನಂತರ ಪ್ರಲ್ಲದ್ ರಾಜರ ಪಲ್ಲಕ್ಕಿ ಉತ್ಸವ ಮೂಲಕ ರಾಯರಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು.

ಮುಖ್ಯವಾಗಿ ರಾಯರು ರಚಿಸಿದ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ಪಲ್ಲಕ್ಕಿ ಉತ್ಸವ ನಡೆಸಿ ಶ್ರೀರಂಗದ ರಂಗನಾಥ ಸ್ವಾಮಿ ವಸದ ಪ್ರಸಾದವನ್ನು ರಾಯರಿಗೆ ಸಮರ್ಪಿಸಲಾಯಿತು.

ಸಪ್ತರಾತ್ರೋತ್ಸವ ಹಿನ್ನೆಲೆ ಶನಿವಾರ ಸಂಜೆ 7 ಗಂಟೆಯಿಂದ ಆರಂಭಗೊಂಡಿರುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು 7 ದಿನಗಳ ವರೆಗೆ ನಡೆಯಲಿವೆ. ಶ್ರೀಮಠದ ಯೋಗಿಂದ್ರ ಸಭಾ ಮಂಟಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಗುರು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.