Mantralaya Raghavendra Swamy Matha: ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಒಟ್ಟು 5,46,06,555 ರೂ. ನಗದು ಕಾಣಿಕೆ ಮತ್ತು 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.


ಮಂತ್ರಾಲಯ(ರಾಯಚೂರು): ಭಕ್ತರ ಪಾಲಿನ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (Mantralaya Shri Raghavendra Swamy Matha) ಭಕ್ತರು ಸಲ್ಲಿಸಿದ ಹುಂಡಿಯ ಕಾಣಿಕೆ ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಐದು ಕೋಟಿ ರೂ.ಗೂ ಅಧಿಕ ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಕಾಣಿಕೆಯನ್ನು ಸಂಗ್ರಹಿಸಲಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಶ್ರೀಮಠದ ಸಿಬ್ಬಂದಿಯಿಂದ ಬೆಳಗ್ಗೆಯಿಂದ ಎಣಿಕೆ ಕಾರ್ಯ ಆರಂಭವಾಗಿತ್ತು. ಸಂಜೆ ಆರು ಗಂಟೆ ಸುಮಾರಿಗೆ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 5 ಕೋಟಿ 30 ಲಕ್ಷದ 97 ಸಾವಿರದ 555 ರೂಪಾಯಿ ಕರೆನ್ಸಿ (5,30,97,555), 15 ಲಕ್ಷದ 14 ಸಾವಿರ ನಾಣ್ಯಗಳು ಸೇರಿ ಒಟ್ಟು 5 ಕೋಟಿ 46 ಲಕ್ಷದ 6 ಸಾವಿರದ 555 ರೂಪಾಯಿ (5,46,06,555) ಮತ್ತು 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿಯನ್ನು ಭಕ್ತರು ತಮ್ಮ ಆರಾಧ್ಯ ದೈವ ರಾಘವೇಂದ್ರ ಸ್ವಾಮಿ ಹುಂಡಿಗೆ ಸಮರ್ಪಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | BOB Recruitment 2025: 2,500 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿದ ಬ್ಯಾಂಕ್ ಆಫ್ ಬರೋಡಾ; ಹೊಸ ಅಪ್‌ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ