K S Bhagawan: ಹಿಂದು ಅನ್ನೋದು ಅವಮಾನಕರ ಶಬ್ದ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕೆ.ಎಸ್. ಭಗವಾನ್

K S Bhagawan: ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವದಲ್ಲಿ ಚಿಂತಕ ಕೆ.ಎಸ್ ಭಗವಾನ್ ವಿವಾದಿತ ಹೇಳಿಕೆ ನೀಡಿದ್ದಾರೆ.

image-4ef61ded-6b10-4ec0-bf4c-084c92abdf2d.jpg
Profile Prabhakara R January 13, 2025
ರಾಯಚೂರು: ಹಿಂದು ದೇವರು, ಧರ್ಮದ ಬಗ್ಗೆ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಚಿಂತಕ ಕೆ.ಎಸ್ ಭಗವಾನ್ ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಹಿಂದು ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದು ಎಂದು ಭಗವಾನ್‌ (K S Bhagawan) ಹೇಳಿಕೆ ಹೇಳಿಕೆ ನೀಡಿದ್ದಾರೆ. ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವದಲ್ಲಿ ಮಾತನಾಡಿರುವ ಅವರು, ಹಿಂದೂ ಶಬ್ದ ಬಂದಿದ್ದು 1030ನೇ ಇಸವಿಯಲ್ಲಿ ಪರ್ಷಿಯನ್ ಲೇಖಕ‌ ಆಲ್ಬೆರುನಿ ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನು ಹಿಂದು ಅಂತ ಕರೆದರು. ಪರ್ಷಿಯನ್ ಭಾಷೆಯಲ್ಲಿ ‘ಸ’ ಕಾರ ಇಲ್ವಂತೆ, ‘ಸ’ ಕಾರ ‘ಹ’ ಕಾರ ಆಗುತ್ತಂತೆ. ಮುಂದೆ ಅಕ್ಬರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ ಎಂದು ಹೆಸರು ಬಂತು. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದು ಎಂಬ ಹೆಸರಿಲ್ಲ ಎಂದರು. ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದು ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದು ಅಂತ ಇದೆ. ಹಾಗಾಗಿ ಹಿಂದು ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ಚಾತುರ್ವರ್ಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಸಂವಿಧಾನ ತೆಗೆದು ಹಾಕಲು ‌ನಮ್ಮ ದೇಶದ ಜನ ಅವಕಾಶ ನೀಡಬಾರದು. ಮನುಸ್ಮೃತಿಯನ್ನು ವಾಪಸ್ ತರಬಾರದು. ಮನುಸ್ಮೃತಿಯನ್ನ ಬಾಬಾ ಸಾಹೇಬರು, ಪೆರಿಯಾರ್ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನುಸ್ಮೃತಿಯನ್ನು ತಿರಸ್ಕರಿಸಬೇಕು ಅಂತ ಭಗವಾನ್ ಹೇಳಿದ್ದಾರೆ. ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿವೆ, ಇದರಿಂದ ಜನರ ಮನಸ್ಸು ಬಹಳ ಸಂಕುಚಿತವಾಗುತ್ತಿದೆ. ಎಲ್ಲರೂ ಸಮಾನರು ಅನ್ನೋ ಭಾವನೆಗೆ ಅಡ್ಡಿ ಬರುತ್ತಿದೆ. ಜನ ಇದನ್ನು ದಾಟಿ ಬರಬೇಕು. ದೇಶದಲ್ಲಿ ಬೌದ್ಧ ಧರ್ಮ 1,500 ವರ್ಷಕಾಲ ಹರಡಿತ್ತು. ಬುದ್ಧ ಈ ಮಣ್ಣಿನ ಮಗ ಒಬ್ಬ ರೈತನ ಮಗ, ಬೌದ್ಧ ಸ್ತೂಪಗಳು, ದೇವಾಲಯಗಳು ಎಲ್ಲವನ್ನೂ ಒಡೆದು ಹಾಕಿದ್ದಾರೆ. ಯಾರು ಮಾಡಿದ್ದು ಅದನ್ನು ಪತ್ತೆ ಹಚ್ಚಿ ಮೂಲ ವ್ಯಕ್ತಿಗಳಿಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸುದ್ದಿಯನ್ನೂ ಓದಿ | Viral Video: ಬಸ್ಸಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್; ವಿಡಿಯೊ ವೈರಲ್ ರಾಮೇಶ್ವರಂ ಕೆಫೆಯಂತೆ ಮತ್ತಷ್ಟು ಬಾಂಬ್ ಸ್ಫೋಟದ ಬೆದರಿಕೆ ಕರೆ, ಎಫ್‌ಐಆರ್ ಬೆಂಗಳೂರು: ರಾಜಧಾನಿಯಲ್ಲಿ ಕಳೆದ ವರ್ಷ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟಿಸಿದಂತೆ ಬೆಂಗಳೂರಿನ (Benagaluru news) ವಿವಿಧೆಡೆ ಬಾಂಬ್‌ ಸ್ಫೋಟ (Bomb Hoax) ನಡೆಸುವುದಾಗಿ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಜನವರಿ 26ರಂದು ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತನ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಪಚಿತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣರಾಜೋತ್ಸವದ ಸಂದರ್ಭದಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಜನವರಿ 9ರಂದು ಸಂಜೆ 5:30ರ ಸುಮಾರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್‌ಗೆ ಅಪರಿಚಿತನೊಬ್ಬ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈತ 6 ಜನರ ಹೆಸರು ಹಾಗೂ ವಿಳಾಸಗಳನ್ನು ತಿಳಿಸಿ ರಾಮೇಶ್ವರಂ ಕೆಫೆಯಲ್ಲಿ ಈ ಹಿಂದೆ ಬಾಂಬ್ ಸ್ಫೋಟವಾದಂತೆ ಆರು ಜನರು ಗಣರಾಜ್ಯೋತ್ಸವದ ದಿನ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದಾರೆ ಎಂದು ಹೇಳಿದ್ದಾನೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂದು ಕಂಡುಬಂದಿದ್ದು, ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ಐ ಓರ್ವರು ನೀಡಿರುವ ದೂರಿನನ್ವಯ ಅಪರಿಚಿತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ