ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raichur News: ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಸೀರೆಯುಟ್ಟು ಓಡಾಡಿದ ಪುರುಷ ಪೊಲೀಸ್‌ ವಶಕ್ಕೆ

Raichur News: ಹಸುಗೂಸು ಕಳ್ಳತನದ ಶಂಕೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದು, ಬಳಿಕ ಶರಣಪ್ಪನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಮಂಗಳಮುಖಿ ಎಂದು ಈತ ಹೇಳಿಕೊಂಡಿದ್ದು, ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೆ ಎಂದು ಹೇಳಿದ್ದಾನೆ.

ಆಸ್ಪತ್ರೆಯಲ್ಲಿ ಸೀರೆಯುಟ್ಟು ಓಡಾಡಿದ ಪುರುಷ ಪೊಲೀಸ್‌ ವಶಕ್ಕೆ

ಹರೀಶ್‌ ಕೇರ ಹರೀಶ್‌ ಕೇರ Jul 10, 2025 3:31 PM

ರಾಯಚೂರು: ರಾಯಚೂರಿನ (Raichur news) ರಿಮ್ಸ್ (RIMS) ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಎಮರ್ಜೆನ್ಸಿ ವಾರ್ಡ್‌ನಲ್ಲಿ ಸೀರೆ ಉಟ್ಟುಕೊಂಡು ಓಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಹಸುಗೂಸುಗಳ ಕಳವು (baby kidnap) ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇದೇ ಶಂಕೆಯಿಂದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಶರಣಪ್ಪ (32) ಬಂಧಿತ ವ್ಯಕ್ತಿ. ಈತ ಸೀರೆ ಧರಿಸಿ ಬಂದು ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್‌ ಮುಂತಾದ ಕಡೆ ತಡರಾತ್ರಿ ಓಡಾಡಿ ಆತಂಕ ಸೃಷ್ಟಿಸಿದ್ದ. ಸ್ಥಳೀಯರ ದೂರು ಹಿನ್ನೆಲೆಯಲ್ಲಿ ನಗರದ ಮಾರ್ಕೆಟ್ ಯಾರ್ಡ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಶರಣಪ್ಪ ರಾತ್ರೋರಾತ್ರಿ ಸೀರೆಯುಟ್ಟು ಆಸ್ಪತ್ರೆ ಎಮರ್ಜನ್ಸಿ ವಾರ್ಡ್​ ಒಳಹೋಗುತ್ತಿದ್ದ. ಯಾವ ವಾರ್ಡ್​ಗೆ ಹೋಗಬೇಕು, ಹೆಸರೇನು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದು, ಈ ವೇಳೆ ಏನೇನೋ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಸುಗೂಸು ಕಳ್ಳತನದ ಶಂಕೆ ಹಿನ್ನೆಲೆಯಲ್ಲಿ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದು, ಬಳಿಕ ಶರಣಪ್ಪನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಮಂಗಳಮುಖಿ ಎಂದು ಈತ ಹೇಳಿಕೊಂಡಿದ್ದು, ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೆ ಎಂದು ಹೇಳಿದ್ದಾನೆ.

ಸಿಎಂ, ಡಿಸಿಎಂ ಹೆಸರಲ್ಲಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಮಹಿಳೆ ಅರೆಸ್ಟ್

ಬೆಂಗಳೂರು: ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. 20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರಿಂದ ಸವಿತಾ ಎಂಬಾಕೆಯನ್ನು ಬಂಧಿಸಲಾಗಿದೆ. ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಸಚಿವ ಎಂ.ಬಿ. ಪಾಟಿಲ್ ಹೆಸರೇಳಿ ಗಾಳ ಹಾಕುತ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು.

ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಸವಿತಾ, ಮತ್ತದೇ ಚಾಳಿ ಮುಂದುವರಿಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾಳೆ.

ಈ ಸುದ್ದಿಯನ್ನೂ ಓದಿ | Murder Case: ಕಲಬುರಗಿಯಲ್ಲೂ ರೇಣುಕಾಸ್ವಾಮಿ ರೀತಿಯ ಕೊಲೆ: ಪ್ರೇಯಸಿಗೆ ಕಿರುಕುಳ ನೀಡಿದಾತನ ಗುಪ್ತಾಂಗಕ್ಕೆ ಒದ್ದು ಹತ್ಯೆ