ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರಿಂದಲೇ ವ್ಯಕ್ತವಾಯ್ತು ವಿರೋಧ; ಯಾರಿಗೂ ಬೇಡದ ಸಂಘರ್ಷ ಟ್ರಂಪ್‌ಗೇಕೆ?

Israel-America-Iran War: ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿ 11 ದಿನ ಕಳೆದಿದೆ. ಈ ಮಧ್ಯೆ ಇರಾನ್‌ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಕ್ವಿನ್ನಿಪಿಯಾಕ್ ವಿಶ್ವವಿದ್ಯಾನಿಲಯ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕರು ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇರಾನ್‌ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರಿಂದಲೇ ವಿರೋಧ

ಸಂಗ್ರಹ ಚಿತ್ರ -

Ramesh Ballamoole
Ramesh Ballamoole Mar 10, 2026 11:06 PM

ವಾಷಿಂಗ್ಟನ್‌, ಮಾ. 10: ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿ 11 ದಿನ ಕಳೆದಿದೆ (Israel-America-Iran War). ಇನ್ನೂ ಸಂಘರ್ಷ ತಿಳಿಯಾಗಿಲ್ಲ. ಈ ಮಧ್ಯೆ ಇರಾನ್‌ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೆರಿಕದ ವಿಶ್ವವಿದ್ಯಾನಿಲಯವೊಂದು ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಮಂದಿ ಯುದ್ಧ ಬೇಡ ಎಂದಿದ್ದಾರೆ. ಕ್ವಿನ್ನಿಪಿಯಾಕ್ ವಿಶ್ವವಿದ್ಯಾನಿಲಯ (Quinnipiac University) ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕರು ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಯುದ್ಧವು ಅಮೆರಿಕದಲ್ಲಿ ಪ್ರತೀಕಾರದ ಭಯೋತ್ಪಾದಕ ದಾಳಿಗೆ ಕಾರಣವಾಗಬಹುದು ಎಂದು ಬಹುತೇಕ ಮಂದಿ ಭಯಪಟ್ಟಿದ್ದಾರೆ. ಹೀಗಾಗಿ ಅವರು ಇರಾನಿನಲ್ಲಿ ಅಮೆರಿಕ ಸೈನ್ಯವು ಕಾರ್ಯಾಚರಣೆ ನಡೆಸುವುದನ್ನು ಇಷ್ಟಪಡುವುದಿಲ್ಲ. ಅದಾಗ್ಯೂ ಈ ಸಂಘರ್ಷ ತಕ್ಷಣ ಮುಗಿಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಯಾರು ಏನಂದ್ರು?

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 53ರಷ್ಟು ಮಂದಿ ಇರಾನ್‌ ವಿರುದ್ಧದ ಸೈನಿಕ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇವಲ ಶೇಕಡಾ 40ರಷ್ಟು ಮಂದಿ ಮಾತ್ರ ಯುದ್ಧಕ್ಕೆ ಬೆಂಬಲ ಸೂಚಿಸಿದ್ದಾರೆ. ಶೇ. 55ರಷ್ಟು ಮಂದಿ ಇರಾನ್ ಸೇನೆಯಿಂದ ಅಮೆರಿಕಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದಿದ್ದರೆ, ಇದೆ ಎನ್ನುವುದಕ್ಕೆ ಶೇ. 39ರಷ್ಟು ವೋಟು ಬಿದ್ದಿದೆ. ಇರಾನ್ ವಿರುದ್ಧ ಮಿಲಿಟರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ನೆಲದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಶೇಕಡಾ 77ರಷ್ಟು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಲೆಬನಾನ್‌ ಮೇಲೆ ಇಸ್ರೇಲ್‌ ಭೀಕರ ರಾಸಾಯನಿಕ ಬೆಂಕಿಯ ಮಳೆ, 400 ಸಾವು

ಇನ್ನು ಶೇಕಡಾ 62ರಷ್ಟು ಮಂದಿ ಡೊನಾಲ್ಡ್‌ ಟ್ರಂಪ್ ಆಡಳಿತವು ಇರಾನ್ ವಿರುದ್ಧದ ಮಿಲಿಟರಿ ಕ್ರಮದ ಹಿಂದಿನ ಕಾರಣಗಳ ಬಗ್ಗೆ ಸ್ಪಷ್ಟ ವಿವರಣೆಯನ್ನು ನೀಡಿಲ್ಲ ಎಂದು ಹೇಳಿದರೆ, ಶೇಕಡಾ 35ರಷ್ಟು ಮಂದಿ ಸರ್ಕಾರ ಸೂಕ್ತ ಕಾರಣ ನೀಡಿದೆ ಎಂದಿದ್ದಾರೆ.

"ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಟ್ರಂಪ್ ಅನುಮೋದನೆ ಪಡೆಯಬೇಕಿತ್ತು ಎಂದು ಶೇಕಡಾ 59ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಯನ್ನು ಶೇಕಡಾ 37ರಷ್ಟು ಅಮೆರಿಕನ್ನರು ಅನುಮೋದಿಸಿದರೆ, ಶೇಕಡಾ 57 ಮಂದಿ ವಿರೋಧಿಸಿದ್ದಾರೆ.

ಪತ್ನಿ, ಪುತ್ರ ಸೇರಿ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡ ಇರಾನ್‌ ಸುಪ್ರೀಂ ಲೀಡರ್‌

ಖಮೇನಿಗೆ ಮತ್ತೊಮ್ಮೆ ಬೆದರಿಕೆ ಹಾಕಿದ ಟ್ರಂಪ್‌

ಅಮೆರಿಕ ಮತ್ತು ಇಸ್ರೇಲ್‌ ದಾಳಿಯಲ್ಲಿ ಹತ್ಯೆಯಾದ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ. ಖಮೇನಿ ಅವರಿಗೆ ನೀಡಲಾದ ಎಲ್ಲ ಅಧಿಕಾರಗಳನ್ನು ಮೊಜ್ತಬಾ ಅವರಿಗೆ ನೀಡಲಾಗಿದೆ ಎಂದು ಇರಾನ್‌ ಹೇಳಿದೆ. ಈ ಮಧ್ಯೆ ಟ್ರಂಪ್‌ ಮತ್ತೊಮ್ಮೆ ಮೊಜ್ತಬಾ ಖಮೇನಿಗೆ ಬೆದರಿಕೆ ಒಡ್ಡಿದ್ದು, ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದಿದ್ದಾರೆ. ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮೊಜ್ತಬಾ ಅವರನ್ನು ದೇಶದ ಉನ್ನತ ಅಧಿಕಾರಿಯಾಗಿ ನೇಮಿಸುವ ಇರಾನ್ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇರಾನ್‌ಗೆ ಈಗಾಗಲೇ ಇಸ್ರೇಲ್‌ ಬೆದರಿಕೆ ಒಡ್ಡಿದ್ದು ಯಾರೇ ಸರ್ವೋಚ್ಚ ನಾಯಕನಾದರೂ ಹೊಡೆದುರುಳಿಸುವುದಾಗಿ ಹೇಳಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.