ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mantralayam Mutt: ಮಂತ್ರಾಲಯ ಹುಂಡಿ ಎಣಿಕೆ; 30 ದಿನದಲ್ಲಿ 3.48 ಕೋಟಿ ರೂ. ಸಂಗ್ರಹ

Mantralayam Mutt: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿಯಲ್ಲಿ ಎಣಿಕೆ ವೇಳೆ 3.29 ಕೋಟಿ ನಗದು ಸಂಗ್ರಹವಾಗಿತ್ತು. ಇದೀಗ ಮಾರ್ಚ್‌ 21ರಂದು ಹುಂಡಿ ಹಣ ಎಣಿಕೆ ನಡೆದಿದ್ದು, ಕಳೆದ 30 ದಿನಗಳಲ್ಲಿ 3,48,69,621 ರೂ.ಗಳು ನಗದು ಸಂಗ್ರವಾಗಿದೆ.

ಮಂತ್ರಾಲಯ ಹುಂಡಿ ಎಣಿಕೆ; 30 ದಿನದಲ್ಲಿ 3.48 ಕೋಟಿ ರೂ. ಸಂಗ್ರಹ

Profile Prabhakara R Mar 21, 2025 9:45 PM

ಮಂತ್ರಾಲಯ(ರಾಯಚೂರು): ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಕಳೆದ 30 ದಿನಗಳಲ್ಲಿ 3,48,69,621 ರೂ.ಗಳು ನಗದು ಕಾಣಿಕೆ ಸಂಗ್ರಹವಾಗಿದೆ. ಇದರ ಜತೆಗೆ ಚಿನ್ನ 37.2 ಗ್ರಾಂ ಹಾಗೂ ಬೆಳ್ಳಿ 1.28 ಗ್ರಾಂ ಕಾಣಿಕೆಗಳನ್ನು ರಾಯರಿಗೆ ಭಕ್ತರು ಅರ್ಪಿಸಿದ್ದಾರೆ. ಒಟ್ಟು 3,48,69,621 ರೂ. ನಗದು ಪೈಕಿ 3,39,35,121 ರೂ. ಕರೆನ್ಸಿ ನೋಟುಗಳು ಹಾಗೂ 9,34,500 ರೂ. ಮೊತ್ತದ ನಾಣ್ಯಗಳು ಇವೆ.

ಮಂತ್ರಾಲಯ ಮಠದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಗುರುಪಾದ ಕರಸೇವಕರು ಭಾಗವಹಿಸಿದ್ದರು.

ಇನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಎಣಿಕೆ ವೇಳೆ 3.29 ಕೋಟಿ ನಗದು ಸಂಗ್ರಹವಾಗಿತ್ತು. 58 ಗ್ರಾಂ ಬಂಗಾರ ಹಾಗೂ 1,280 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ ಎಂದು ಶ್ರೀಮಠ ತಿಳಿಸಿತ್ತು.

ಈ ಸುದ್ದಿಯನ್ನೂ ಓದಿ | Roopa Gururaj Column: ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ