ವೀರೇಶ ಎಸ್.ಕೆಂಭಾವಿ ಯಾದಗಿರಿ
ಸಾಲಬಾಧೆ ತಾಳದೇ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 147 ರೈತರು ಆತ್ಮಹತ್ಯೆ
ಕೃಷ್ಣಾ-ಭೀಮಾ ನದಿಯ ಬೃಹತ್ ಜಲಾಶಯ ದಿಂದ ಫಲವತ್ತಾದ ಭೂಮಿ ಹೊಂದಿರುವ ಯಾದಗಿರಿ ಜಿಲ್ಲೆಯ ರೈತರು ದುರಾದೃಷ್ಟವಶಾತ್ ಋಣ ಭಾರಕ್ಕೆ ನಲುಗಿ ಹೋಗಿದ್ದಾರೆ. ಕೃಷಿ ಚಟುವಟಿಕೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ಮಾಡಿಕೊಂಡ ಸಾಲ ತೀರಿಸಲು ಆಗದೆ ಆತ್ಮ ಹತ್ಯೆ ಮೊರೆ ಹೋಗುತ್ತಿದ್ದಾರೆ. ಕಳೆದ 4 ವರ್ಷಗಳಲ್ಲಿ ಜಿಲ್ಲೆಯಲ್ಲಿ 147 ರೈತರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಪ್ರಸಕ್ತ ವರ್ಷದ ಕಳೆದ 3ತಿಂಗಳಲ್ಲೇ 7 ರೈತರು ಸಾಲ ಬಾಧೆ ತಾಳದೇ ಜೀವ ಬಿಟ್ಟಿದ್ದಾರೆ.
ಇದನ್ನೂ ಓದಿ: Bidadi Farmers protest: ಬಿಡದಿ ಟೌನ್‌ಶಿಪ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ಕಳಿಸಿದ ರೈತ ಮಹಿಳೆಯರು!
2023-24ನೇ ಸಾಲಿನಲ್ಲಿ 63, 2024-25ರಲ್ಲಿ 43, 2025-26ರಲ್ಲಿ 34 ಹಾಗೂ 2026-27ನೇ ಸಾಲಿನಲ್ಲಿ ಜೂನ್ ಅಂತ್ಯದವರೆಗೆ 7 ರೈತರು ಆತ್ಮಹತ್ಯೆ ದಾಖಲಾಗಿವೆ. ಒಟ್ಟಾರೆ 147 ರೈತರ ಜೀವಗಳು ಕಳೆದು ಕೊಂಡಿರುವುದು ಜಿಲ್ಲೆಯ ಕೃಷಿ ಕ್ಷೇತ್ರ ಇನ್ನೂ ಸಂಕಷ್ಟದ ಸುಳಿಯಿಂದ ಹೊರಬಂದಿಲ್ಲ ಎಂಬು ದಕ್ಕೆ ಸಾಕ್ಷಿಯಾಗಿದೆ. ಅಂಕಿ ಅಂಶಗಳನ್ನು ಅವಲೋಕಿಸಿದರೆ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದರೂ, ಆತ್ಮಹತ್ಯೆಗಳ ಸರಣಿ ಮಾತ್ರ ಸಂಪೂರ್ಣ ವಾಗಿ ನಿಂತಿಲ್ಲ.
ಪ್ರಸಕ್ತ ಸಾಲಿನ ಆರಂಭದಲ್ಲೇ 7 ಪ್ರಕರಣಗಳು ದಾಖಲಾಗಿರುವುದು ರೈತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸೂಚಿಸುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಕೃಷಿ ಮಳೆ ಆಧಾರಿತ ವಾಗಿದೆ. ಮಳೆ ಕೈಕೊಟ್ಟರೆ ಬೆಳೆ ನಷ್ಟ, ಬೆಳೆ ಬಂದರೂ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದಿರುವುದು, ಕೃಷಿ ಉತ್ಪಾದನಾ ವೆಚ್ಚದ ಏರಿಕೆ, ಸಾಲ ಮರುಪಾವತಿಯ ಒತ್ತಡ ಹಾಗೂ ಕುಟುಂಬದ ಆರ್ಥಿಕ ಜವಾಬ್ದಾರಿಗಳು ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಪ್ರಮುಖ ಕಾರಣ ಗಳಾಗಿವೆ.
![]()
ರೈತರ ಆತ್ಮಹತ್ಯೆಯ ಪ್ರತಿಯೊಂದು ಪ್ರಕರಣವೂ ಕೇವಲ ಒಂದು ಕುಟುಂಬದ ದುರಂತವಲ್ಲ. ಅದು ಜಿಲ್ಲೆಯ ಕೃಷಿ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸವಾಲಿನ ಪ್ರತಿಬಿಂಬವಾಗಿದೆ. ಆತ್ಮಹತ್ಯೆ ಗಳ ಸರಣಿಗೆ ಶಾಶ್ವತ ಕಡಿವಾಣ ಹಾಕಲು ಸರಕಾರ, ಆಡಳಿತ ಮತ್ತು ಸಂಬಂಧಿತ ಇಲಾಖೆಗಳು ಸಮನ್ವಯ ದೊಂದಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇ ಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
-ಮಲಣ್ಣಗೌಡ ಹಗರಟಗಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಯಾದಗಿರಿ