ರಾಮನಗರ: ಬಿಡದಿ ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಬೆಂಗಳೂರು ದಕ್ಷಿಣ ಜಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಣಿಮಿಣಿಕೆ ಟೋಲ್ ಬಳಿ ಪೊಲೀಸರು ತಡೆದರು. ಈ ವೇಳೆ, ಪಾದಯಾತ್ರೆ ನಿರತ ಕಾರ್ಯಕರ್ತರು, ರೈತರು ಹಾಗೂ ಪೊಲೀಸರ ನಡುವೆ ಪರಸ್ಪರ ತಳ್ಳಾಟ ನಡೆಯಿತು.
ಸರ್ವೀಸ್ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಪಕ್ಷದ ಯುವ ಘಟಕದ ರಾಜ್ಯಾ ಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆಯನ್ನು ಅಡ್ಡಗಟ್ಟಿದರು. ಈ ವೇಳೆ ನಿಖಿಲ್ ಸೇರಿ ಪಕ್ಷದ ಮುಖಂಡರು ಪೊಲೀಸರು ವಾಗ್ವಾದ ನಡೆಸಿದರು. ಪೊಲೀಸರ ತಡೆ ಲೆಕ್ಕಿಸದೆ ಮುನ್ನುಗಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ನಿಖಿಲ್, ರಾಜ್ಯ ಸರಕಾರ ಪೊಲೀಸರ ಮೂಲಕ ರೈತರನ್ನು ತಡೆಗಟ್ಟಿದೆ. ತನ್ನ ಜವಾ ಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ಆದರೆ, ನಾವು ಇದಕ್ಕೆ ಜಗ್ಗುವುದಿಲ್ಲ. ಕೊನೆಯವರೆಗೆ ರೈತರ ಜತೆ ನಿಲ್ಲುತ್ತೇವೆ ಎಂದು ಹರಿಹಾಯ್ದರು.
![]()
ರೈತರ ಹೊಟ್ಟೆ ಮೇಲೆ ಹೊಡೆದು ಬಿಡದಿ ಟೌನ್‌ಶಿಪ್ ಮಾಡುವ ಹಠ ಏಕೆ? ಜಿಬಿಐಟಿ ಯೋಜನೆ ಹೆಸರಲ್ಲಿ ಯಾರಿಗೆ ಕಪ್ಪ ಕೊಡಲು ಹೊರಟಿದ್ದೀರಿ? ನಾನು ಬದುಕಿರುವ ತನಕ ರೈತಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ