ಸಾಗರ: ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಹಾವು ಕಚ್ಚಿ (Snake bite) ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಸಾಗರದ (Sagara) ಎಸ್.ಎನ್. ನಗರದಲ್ಲಿ ನಡೆದಿದೆ. ಗಣೇಶ್ ಎಂಬುವವರ ಪುತ್ರ ಭವಿನ್ ಮೃತ ಬಾಲಕ. ರಜೆಯ ಹಿನ್ನೆಲೆ ಭವಿನ್ ಅಜ್ಜಿ ಮನೆಗೆ ಬಂದಿದ್ದ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ಕೈಗೆ ನಾಗರಹಾವು ಕಚ್ಚಿದೆ ಎನ್ನಲಾಗಿದೆ.
ತಕ್ಷಣವೇ ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.
Murder Case: ಹೃದಯವಿದ್ರಾವಕ ಘಟನೆ: ಪಾರ್ಶ್ವವಾಯು ಪೀಡಿತ ತಾಯಿಯನ್ನು 4ನೇ ಅಂತಸ್ತಿನಿಂದ ತಳ್ಳಿ ಕೊಂದ ಮಗ
ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ; ಬಲಗೈ ತುಂಡು
ರಾಯಚೂರು: ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ ನಡೆದಿದ್ದು, ಬಲಗೈ ತುಂಡಾಗಿದೆ. ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ ಹೊನ್ನಗುಡೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೃಷ್ಣಾ ನದಿಯಲ್ಲಿ ಕುರಿ ಮರಿಗಳಿಗೆ ನೀರು ತರಲು ಹೋದಾಗ ಮೊಸಳೆ ದಾಳಿ ನಡೆದಿದೆ. ಏಕಾಏಕಿ ದಾಳಿ ಮಾಡಿ ಕೈ ಕಚ್ಚಿ ನದಿಯಲ್ಲಿ ಎಳೆದುಕೊಂಡು ಹೋಗಿದ್ದ ಮೊಸಳೆ ಹೊನ್ನಗುಡೆಪ್ಪನನ್ನ ನೀರಿನಲ್ಲಿ ಮುಳುಗಿಸಿದೆ. ನೀರಿನಲ್ಲಿ ಎಳೆದೊಯ್ದರು ಹೋರಾಡಿ ಹೊರಗೆ ಬಂದ ಹೊನ್ನಗುಂಡಪ್ಪ ಮೊಸಳೆಯಿಂದ ತಪ್ಪಿಸಿಕೊಳ್ಳಲು ಕೈ ಎಳೆದುಕೊಂಡಾಗ ಬಲಗೈ ತುಂಡಾಗಿದೆ.ರಾಯಚೂರಿನ ಓಪೆಕ್ ಆಸ್ಪತ್ರೆಗೆ ಗಾಯಾಳು ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.