ಶಿವಮೊಗ್ಗ, ಏ.24 : ಶಾಲಾ ತರಗತಿಗಳಿಂದ ಮುಕ್ತಿ ಪಡೆದು, ಅಜ್ಜಿ-ಚಿಕ್ಕಮ್ಮನ ಮನೆಗೆ ತೆರಳಿ ಬೇಸಿಗೆ ರಜೆಯ (summer holidays) ಮಜಾ ಸವಿಯುತ್ತಿದ್ದ ಬಾಲಕಿಯೊಬ್ಬಳು ಆಟವಾಡುತ್ತಿದ್ದ ಸಂದರ್ಭದಲ್ಲೇ ಮೃತ್ಯುವಿನ ಪಾಲಾಗಿರುವ (Girl Death) ಘೋರ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಲಕ್ಕಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ (Vidyanagara) ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ.
ಒಂಬತ್ತು ವರ್ಷದ ಈ ಕಂದಮ್ಮ ಬೇಸಿಗೆ ರಜೆ ಕಳೆಯಲು ಒಂದು ವಾರದ ಹಿಂದೆಯಷ್ಟೇ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಆಗಮಿಸಿದ್ದಳು. ರಜೆಯ ಖುಷಿಯಲ್ಲಿದ್ದ ಬಾಲಕಿ, ಮನೆಯವರೊಂದಿಗೆ ಬೆರೆತು ನಲಿದಾಡುತ್ತಿದ್ದಳು. ಏಪ್ರಿಲ್ 20ರಂದು ಮನೆಯಲ್ಲಿ ಉಳಿದ ಮಕ್ಕಳು ಆಟವಾಡುತ್ತಿದ್ದಾಗ, ಪ್ರಣಮ್ಯ ಒಬ್ಬಳೇ ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ಕೋಣೆಯೊಳಗೆ ಹಳೆಯ ಪಂಚೆಯನ್ನು ಬಳಸಿ ತಾನೇ ಜೋಕಾಲಿಯನ್ನು ಸಿದ್ಧಪಡಿಸಿಕೊಂಡಿದ್ದಾಳೆ.
ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಪಂಚೆಯ ಕುಣಿಕೆ ಬಾಲಕಿಯ ಕುತ್ತಿಗೆಗೆ ಬಿಗಿದುಕೊಂಡಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಉಸಿರಾಟಕ್ಕೆ ತೀವ್ರ ಅಡಚಣೆ ಉಂಟಾಗಿ ಆಕೆ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಹಳ ಹೊತ್ತಾದರೂ ಮಗು ಹೊರಗೆ ಬಾರದಿದ್ದಾಗ ಅನುಮಾನಗೊಂಡ ಕುಟುಂಬದವರು ಬಾಗಿಲು ಒಡೆದು ಒಳಗೆ ಹೋದಾಗ, ಬಾಲಕಿ ನಿಶ್ಚೇಷ್ಟಿತವಾಗಿ ಕಂಡುಬಂದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ (Tunganagar Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹದಿಹರೆಯದ ಬಾಲಕಿಯನ್ನು ಹತ್ಯೆ ಮಾಡಿ, ಮುಖದ ಮೇಲೆ ಆ್ಯಸಿಡ್ ಸುರಿದ ತಂದೆ; ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ
ಇತ್ತೀಚೆಗೆ ಚಿಕ್ಕಮಗಳೂರಿನಲ್ಲೂ ಇಂಥದೇ ಘಟನೆ ನಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾದ ಪುಟ್ಟ ಕಂದಮ್ಮ ಲೇಖನಾ (10) ಪೋಷಕರು ಇಲ್ಲದ ಸಮಯದಲ್ಲಿ ಸೀರೆಯಿಂದ ತಯಾರಿಸಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡು ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಳು.
ಈ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳನ್ನು ಒಂಟಿಯಾಗಿ ಆಟವಾಡಲು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಟವಾಡಲು ಬಿಡದೇ ಎಚ್ಚರವಿರುವಂತೆ ಪೋಷಕರಿಗೆ ಸೂಚಿಸಲಾಗಿದೆ.
Girl death: ಆಟವೇ ಮೃತ್ಯುವಾಯ್ತು! ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಸಾವು