Shivamogga: ಶಾಲೆಯಲ್ಲಿ ಕುಡಿಯುವ ನೀರಿಗೆ ವಿಷ ಹಾಕಿದ್ದು 5ನೇ ತರಗತಿ ಬಾಲಕ!
ಹೊಸನಗರ ತಾಲ್ಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದ ಪ್ರಕರಣ ಮಕ್ಕಳಾಟಿಕೆಯಲ್ಲಿ ಕೊನೆಯಾಗಿದೆ. ನೀರು ಕುಡಿದು ಕೆಲವು ಮಕ್ಕಳು ಅಸ್ವಸ್ಥರಾಗಿ ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳ ಹುಡುಗಾಟಿಕೆಯಿಂದಾಗಿ ನೀರಿನಲ್ಲಿ ವಿಷ ಬೆರೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಹೂವಿನಕೋಣೆ ಶಾಲೆ

ಶಿವಮೊಗ್ಗ: ಜಿಲ್ಲೆಯ (Shivamogga) ಹೊಸನಗರ ತಾಲ್ಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ (Drinking water) ಟ್ಯಾಂಕಿಗೆ ಕೀಟನಾಶಕ ಬೆರೆಸಿರುವ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯನವರೇ (CM Siddaramaiah) ಈ ಘಟನೆ ಭಯೋತ್ಪಾದನೆಗೆ ಸಮಾನ ಎಂದು ಕಿಡಿಕಾರಿದ್ದರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, ಶಾಲೆಯ ಐದನೇ ತರಗತಿ ವಿದ್ಯಾರ್ಥಿಯೇ ಈ ಕೃತ್ಯ ನಡೆಸಿದ್ದು ಬೆಳಕಿಗೆ ಬಂದಿದೆ.
ಹೊಸನಗರ ತಾಲ್ಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದ ಪ್ರಕರಣ ಮಕ್ಕಳಾಟಿಕೆಯಲ್ಲಿ ಕೊನೆಯಾಗಿದೆ. ನೀರು ಕುಡಿದು ಕೆಲವು ಮಕ್ಕಳು ಅಸ್ವಸ್ಥರಾಗಿ ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳ ಹುಡುಗಾಟಿಕೆಯಿಂದಾಗಿ ನೀರಿನಲ್ಲಿ ವಿಷ ಬೆರೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಬಳಿಕ ಸಿಎಂ ಸಿದ್ದರಾಮಯ್ಯನವರು ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಇದೊಂದು ಭಯೋತ್ಪಾದನೆಗಿಂತ ಗಂಭೀರ ವಿಷಯ ಎಂದು ಹೇಳಿದ್ದರು. ಸಮರ್ಪಕ ತನಿಖೆ ನಡೆಸುವಂತೆ ಆದೇಶಿಸಿದ್ದರು.
ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಆರಂಭಿಸಿ, ಪ್ರಕರಣ ಭೇದಿಸಲು 3 ತಂಡಗಳನ್ನು ಎಸ್‌ಪಿ ಮಿಥುನ್ ಕುಮಾರ್ ಅವರು ರಚಿಸಿದ್ದರು. ಪ್ರಕರಣದ ತನಿಖೆಗೆ ಒಟ್ಟು 18 ಪೊಲೀಸರನ್ನು ನಿಯೋಜಿಸಿದ್ದರು. ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ತಂಡ ರಚನೆ ಆಗಿತ್ತು. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಲು ಪೊಲೀಸರು ಮುಂದಾಗಿದ್ದರು. ಟವರ್ ಡಂಪ್ ಮೂಲಕ ತನಿಖೆ ಆರಂಭಿಸಿದ್ದರು. ಎಲ್ಲಾ ಆಯಾಮದ ತನಿಖೆಯ ಬಳಿಕ 5ನೇ ತರಗತಿಯ ಬಾಲಕನೇ ಈ ಕೃತ್ಯ ನಡೆಸಿರುವುದಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Belagavi News: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ; ಮೂವರ ಬಂಧನ