ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ರಾಜ್ಯದಲ್ಲಿ ಮತ್ತೊಂದು ನೀಚ ಕೃತ್ಯ; ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿ ಮಾಡಿದ ಪಾಪಿ ತಂದೆ!

Physical Abuse: ಗದಗ ಜಿಲ್ಲೆಯ ಮುಳಗುಂದದಲ್ಲಿ ನೀಚ ಕೃತ್ಯ ಬೆಳಕಿಗೆ ಬಂದಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ಪೊಲೀಸ್‌ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದರಿಂದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿ ಮಾಡಿದ ಪಾಪಿ ತಂದೆ!

Profile Prabhakara R Apr 9, 2025 6:05 PM

ಗದಗ: ರಾಜ್ಯದಲ್ಲಿ ಮತ್ತೊಂದು ನೀಚ ಕೃತ್ಯ ಬೆಳಕಿಗೆ ಬಂದಿದೆ. ಮಗಳ ಮೇಲೆಯೇ ಕಾಮುಕ ತಂದೆ ನಿರಂತರ ಲೈಂಗಿಕ ದೌರ್ಜನ್ಯ (Physical Abuse) ಎಸಗಿ ಗರ್ಭಿಣಿ ಮಾಡಿರುವ ಘಟನೆ ಗದಗ ಜಿಲ್ಲೆಯ (Gadag News) ಮುಳಗುಂದದಲ್ಲಿ ನಡೆದಿದೆ. ಹೌದು, ತನ್ನ 16 ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕಳೆದ ಒಂದು ವರ್ಷದಿಂದ ತಂದೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಹಿನ್ನೆಲೆ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿ, ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಆಗಿರುವುದು ತಿಳಿದುಬಂದಿದೆ. ಸದ್ಯ ಬಾಲಕಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ತಂದೆಯನ್ನು ಮುಳುಗುಂದ ಠಾಣೆ ಪೊಲೀಸರು ಅರೆಸ್ಟ್‌ ಮಾಡಿ, ಪೋಕ್ಸೊ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Death Sentence: ಪ್ರೇಮ ವಿವಾಹಕ್ಕೆ ಸಂಬಂಧಿಸಿ ಐವರನ್ನು ಕೊಂದ ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ

ಪೊಲೀಸನಿಂದ ಬರ್ಬರ ಕೃತ್ಯ, ಬಾಲಕಿ ಮೇಲೆ ಅತ್ಯಾಚಾರ, ಅಬಾರ್ಷನ್‌

pocso case police

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಬರ್ಬರ ಕೃತ್ಯ ಬೆಳಕಿಗೆ ಬಂದಿದೆ. ರಕ್ಷಿಸಬೇಕಾದ ಆರಕ್ಷಕನೇ ಇದರಲ್ಲಿ ಅಮಾನುಷವಾಗಿ ವರ್ತಿಸಿದ್ದಾನೆ. ಅಪ್ರಾಪ್ತ ಬಾಲಕಿ ಮೇಲೆ (POCSO Case) ಪೊಲೀಸ್ ಕಾನ್ಸ್ ಟೇಬಲ್ (Police Constable) ಅತ್ಯಾಚಾರ (Physical Abuse) ಎಸಗಿ, ಆಕೆ ಗರ್ಭಿಣಿಯಾಗುತ್ತಿದ್ದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ (Abortion) ಮಾಡಿಸಿರುವ ಘಟನೆ ನಡೆದಿದೆ. ಇದೀಗ ಆತನ ಮೇಲೆ ದೂರು ದಾಖಲಾಗಿದೆ.

ಯಾದಗಿರಿ ಜಿಲ್ಲೆಯ ಸೈದಾಪುರ ಠಾಣೆಯ ಕಾನ್ಸ್‌ಟೇಬಲ್ ಬಲರಾಮನ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಈತ ಪ್ರೀತಿಯ ನಾಟಕವಾಡಿ 16 ವರ್ಷದ ಅಪ್ರಾಪ್ತೆಯ ಮೇಲೆ 2 ವರ್ಷ ಅತ್ಯಾಚಾರವೆಸಗಿದ್ದ. ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿಸಿದ್ದ ಎಂದು ಬಾಲಕಿ ಕುಟುಂಬಸ್ಥರು ಆರೋಪಿಸಿದ್ದಾರೆ.

18 ವರ್ಷ ತುಂಬುತ್ತಿದ್ದಂತೆ 2024ರಲ್ಲಿ ಈಕೆಯನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದರೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಕಾನ್ಸ್ ಟೇಬಲ್ ಕುಟುಂಬದವರು ನಿರಾಕರಿಸಿದ್ದಾರೆ. ಮನನೊಂದ ಬಾಲಕಿಯ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾನ್ಸ್ ಟೇಬಲ್ ಬಲರಾಮನ ವಿರುದ್ಧ ದೂರು ನೀಡಿದ್ದಾರೆ.