ಸರ್ಕಾರದಿಂದ ಕೊಟ್ಟ ವಾಹನ ಎರಡೇ ವಾರಕ್ಕೆ ಹಾಳು; ಅಂಗವೈಕಲ್ಯವಿದ್ದರೂ 2 Km ದೂರದ ಶಾಲೆಗೆ ನಡೆದು ಹೋಗುತ್ತಿರುವ ವಿದ್ಯಾರ್ಥಿನಿ
5 ವರ್ಷದ ಬಾಲಕಿಯೊಬ್ಬಳು ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪ್ರತಿನಿತ್ಯ 2 ಕಿ.ಮಿ ದೂರ ನಡೆದು ಹೋಗಿ ಶಾಲೆಗೆ ಹೋಗುತ್ತಿದ್ದು, ಸಾವಿರಾರು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ. ಬಿಹಾರದ ಗೋಪಾಲ್‌ಗಂಜ್‌ನ ಹುಸೇನ್‌ಪುರ ಗ್ರಾಮದ ಸೋನಿ ಕುಮಾರಿ ಎಂಬಾಕೆ ಅಂಗವೈಕಲ್ಯದಿಂದ ಕಾಲು ಎಳೆದುಕೊಂಡು ಶಾಲೆಗೆ ಹೋಗುತ್ತಿದ್ದಳು.
ಸಂಗ್ರಹ ಚಿತ್ರ -
ಪಾಟ್ನಾ: 5 ವರ್ಷದ ಬಾಲಕಿಯೊಬ್ಬಳು ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪ್ರತಿನಿತ್ಯ 2 ಕಿ.ಮಿ ದೂರ ನಡೆದು ಹೋಗಿ ಶಾಲೆಗೆ ಹೋಗುತ್ತಿದ್ದು, (Viral Video) ಸಾವಿರಾರು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ. ಬಿಹಾರದ ಗೋಪಾಲ್‌ಗಂಜ್‌ನ ಹುಸೇನ್‌ಪುರ ಗ್ರಾಮದ ಸೋನಿ ಕುಮಾರಿ ಎಂಬಾಕೆ ಅಂಗವೈಕಲ್ಯದಿಂದ ಕಾಲು ಎಳೆದುಕೊಂಡು ಶಾಲೆಗೆ ಹೋಗುತ್ತಿದ್ದಳು. ವಿಡಿಯೋ ವೈರಲ್ ಆದ ನಂತರ, ಜಿಲ್ಲಾಡಳಿತದಿಂದ ತ್ರಿಚಕ್ರ ವಾಹನದ ರೂಪದಲ್ಲಿ ಸಹಾಯ ಬಂದಿತು. ಆದರೆ ಆ ಪರಿಹಾರ ಹೆಚ್ಚು ಕಾಲ ಉಳಿಯಲಿಲ್ಲ. ವಾಹನ ಕೊಟ್ಟು ಕೆಲವೇ ದಿನಗಳ ಬಳಿಕ ಅದು ಕೆಟ್ಟು ನಿಂತಿದೆ.
ಸೋನಿಯ ಎರಡೂ ಕಾಲುಗಳಲ್ಲಿ ಅಂಗವೈಕಲ್ಯವಿದ್ದು ಸರಿಯಾಗಿ ನಡೆಯಲು ಸಾಧ್ಯವಿಲ್ಲ. ಆದರೂ ಒಂದೇ ಒಂದು ದಿನವೂ ಶಾಲೆಯನ್ನು ತಪ್ಪಿಸದೆ ಎರಡೂ ಕಾಲುಗಳನ್ನು ಎಳೆಯುತ್ತಾ ಶಾಲೆಗೆ ಹೋಗುತ್ತಿದ್ದಾಳೆ. ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ತಕ್ಷಣವೇ ಅಮಾನತುಗೊಳಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರ ಇಂತಹ ಮಕ್ಕಳ ಕುರಿತು ಸರ್ಕಾರ ಹೆಚ್ಚಿನ ಲಕ್ಷ ವಹಿಸಬೇಕೆಂದು ಒತ್ತಾಯಿಸಿದರು.
This is Soni from Gopalganj , the same woman whose story went viral recently. Instead of providing her with a proper electric wheelchair, authorities handed over a substandard one that started falling apart within just a week.
— The Nalanda Index (@Nalanda_index) March 16, 2026
This raises a serious question about the system. When… pic.twitter.com/ta4vqkykpD
ಪ್ರಿಯತಮೆಗೆ ದೊಡ್ಡ ಸರ್ಪ್ರೈಸ್ ನೀಡಲು ಒಬ್ಬ ಯುವಕ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಒಳ್ಳೆ ಐಡಿಯಾ ಮಾಡಿಕೊಂಡಿದ್ದ. ಯುವಕ ತನ್ನ ಲವರ್ ಮನೆ ಮುಂದೆ ತನ್ನ ಸಂಬಂಧಿಕರು ಮತ್ತು ಆತ್ಮೀಯರನ್ನು ಸೇರಿಸಿ, ಬಾಲಿವುಡ್ ಸಾಂಗ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಯುವಕ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೆಳಗೆ ರಸ್ತೆಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾನೆ. ಆತನ ಪ್ರೇಯಸಿ ಮನೆಯ ಬಾಲ್ಕನಿಯಲ್ಲಿ ನಗುತ್ತಾ ನಿಂತು ನೋಡುತ್ತಿರುತ್ತಾಳೆ. ಅವನ ಕುಟುಂಬದವರು ಮತ್ತು ಸ್ನೇಹಿತರು ಕೂಡ ಸೇರಿ ಉತ್ಸಾಹಭರಿತ ನೃತ್ಯ ಪ್ರದರ್ಶನ ಮಾಡುತ್ತಾರೆ. ಹಿನ್ನಲೆಯಲ್ಲಿ “ತೆನು ಲೇಕೆ ಮೈನ್ ಜಾವಾಂಗಾ” ಹಾಡು ಕೇಳಿಸುತ್ತಿರುವಾಗ, ಎಲ್ಲರೂ ಡ್ಯಾನ್ಸ್ ಸ್ಟೆಪ್ಸ್ ಮಾಡಿದ್ದಾರೆ.
Dharwad Rain: ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಧಾರವಾಡದ ಕಲಘಟಗಿ; ವಿಡಿಯೊ ವೈರಲ್
ಬಾಲ್ಕನಿಯಿಂದ ನೋಡುತ್ತಿರುವ ಯುವತಿ, ಈ ಭರ್ಜರಿ ಸರ್ಪ್ರೈಸ್ ನೋಡಿ ಆಶ್ಚರ್ಯಗೊಂಡಂತೆ ಕಾಣಿಸುತ್ತಾಳೆ. ಸಂಗೀತ ಮತ್ತು ನೃತ್ಯ ಮುಂದುವರಿದ ನಂತರ, ಯುವಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಿ, ಜನರ ಹರ್ಷೋದ್ಗಾರದ ನಡುವೆ ಅವಳಿಗೆ ಪ್ರಪೋಸ್ ಮಾಡುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.