ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flights: ಇಂಡಿಗೋ ಸಮಸ್ಯೆಯಿಂದ ನರಳಿದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ರಿಲೀಫ್‌, 8 ವಿಶೇಷ ರೈಲು

Indian Railways: ಕೆಎಸ್ಆರ್ ಬೆಂಗಳೂರು ಟು ಪುಣೆ, ಕೆಎಸ್ಆರ್ ಬೆಂಗಳೂರು ಟು ಚೆನ್ನೈ, ಯಶವಂತಪುರ ಟು ದೆಹಲಿ, ಹೀಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಯಶವಂತಪುರ ರೈಲ್ವೆ ಸ್ಟೇಷನ್​ನಿಂದ ಈ ವಿಶೇಷ ರೈಲುಗಳು ಸಂಚರಿಸಲಿದೆ. ಜೊತೆಗೆ ಈಗಾಗಲೇ ಹೆಚ್ಚುವರಿ ಎಸಿ ಬೋಗಿಗಳ ಸೇವೆ ಆರಂಭಿಸಿದೆ.

ಇಂಡಿಗೋದಿಂದ ನರಳಿದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ರಿಲೀಫ್‌, 8 ವಿಶೇಷ ರೈಲು

8 ವಿಶೇಷ ರೈಲುಗಳ ಓಡಾಟ -

ಹರೀಶ್‌ ಕೇರ
ಹರೀಶ್‌ ಕೇರ Dec 7, 2025 2:14 PM

ಬೆಂಗಳೂರು, ಡಿ.07: ಇಂಡಿಗೋ ವಿಮಾನಗಳ ರದ್ದತಿ (IndiGo Flights) ಹಿನ್ನೆಲೆಯಲ್ಲಿ ಪ್ರಯಾಣಿಕರು ಅಂತಾರಾಜ್ಯ ಪ್ರಯಾಣದಲ್ಲಿ ಅನನುಕೂಲ ಅನುಭವಿಸುತ್ತಿದ್ದು, ರೈಲುಗಳಲ್ಲಿ ಸೀಟುಗಳು ಸಿಗದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಬಸ್​ಗಳ (Private bus ticket price) ಟಿಕೆಟ್ ದರವೂ ಗಗನಕ್ಕೇರಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ (Indian Railways) ಪ್ರಯಾಣಿಕರಿಗೆ ತುಸು ರಿಲೀಫ್‌ ನೀಡಿದೆ. ಈಗಾಗಲೇ ಹೆಚ್ಚುವರಿ ಎಸಿ ಬೋಗಿಗಳ ಸೇವೆ ಆರಂಭಿಸಿದ್ದು, ಜೊತೆಗೆ ಇಂದಿನಿಂದ ದೆಹಲಿ, ಪುಣೆ ಮತ್ತು ಚೆನ್ನೈಗೆ ವಿಶೇಷ 8 ರೈಲುಗಳ (Special trains) ವ್ಯವಸ್ಥೆ ಮಾಡಿದೆ.

ಮೂರು ದಿನ ವಿಶೇಷ ರೈಲು ಸೌಲಭ್ಯ

ಕೆಎಸ್ಆರ್ ಬೆಂಗಳೂರು ಟು ಪುಣೆ, ಕೆಎಸ್ಆರ್ ಬೆಂಗಳೂರು ಟು ಚೆನ್ನೈ, ಯಶವಂತಪುರ ಟು ದೆಹಲಿ, ಹೀಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಯಶವಂತಪುರ ರೈಲ್ವೆ ಸ್ಟೇಷನ್​ನಿಂದ ಈ ವಿಶೇಷ ರೈಲುಗಳು ಸಂಚರಿಸಲಿದೆ. ಇಂದು ಬೆಳಗ್ಗೆ 7 ಗಂಟೆಗೆ ಮೊದಲ ವಿಶೇಷ ರೈಲು ಯಶವಂತಪುರ ರೈಲ್ವೆ ಸ್ಟೇಷನ್​ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ ಸಂಚಾರ ಆರಂಭಿಸಿದೆ. ಚೆನ್ನೈಗೆ ರೈಲು ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಹೊರಟಿದೆ. ಇನ್ನು ಮೂರನೇ ರೈಲು ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ 7.30 ಕ್ಕೆ ಪುಣೆಗೆ ಸಂಚಾರ ಮಾಡಲಿದೆ. ನಾಳೆಯೂ ಕೂಡ ಚೆನ್ನೈಗೆ ವಿಶೇಷ ರೈಲಿನ ಸೇವೆ ಇರಲಿದೆ.

ಇಂಡಿಗೋ ವಿಮಾನ ಹಾರಾಟ ವ್ಯತ್ಯಯ: ಪಿಜಿ ನೀಟ್‌ ಪರೀಕ್ಷೆ ಮುಂದೂಡಿಕೆ

ವಿಶೇಷ ರೈಲುಗಳು ಹೀಗಿವೆ

ರೈಲು ಸಂಖ್ಯೆ 06259 ಯಶವಂತಪುರ- ಹಜರತ್ ನಿಜಾಮುದ್ದೀನ್ ವಿಶೇಷ ರೈಲು 07.12.2025 ರಂದು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪುತ್ತದೆ.

ರೈಲು ಸಂಖ್ಯೆ 06260 ಹಜರತ್ ನಿಜಾಮುದ್ದೀನ್- ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 09.12.2025 ಮಂಗಳವಾರದಂದು ರಾತ್ರಿ 11.50ಕ್ಕೆ ಹಜರತ್ ನಿಜಾಮುದ್ದೀನ್ ನಿಂದ ಹೊರಟು ಗುರುವಾರ ರಾತ್ರಿ 7.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 06263 ಕೆ.ಎಸ್.ಆರ್. ಬೆಂಗಳೂರು- ಪುಣೆ ವಿಶೇಷ ರೈಲು 07.12.2025ರಂದು ರಾತ್ರಿ 7.30 ಗಂಟೆಗೆ ಕೆ.ಎಸ್.ಆರ್.ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಮಧ್ಯಾಹ್ನ 2.30 ಗಂಟೆಗೆ ಪುಣೆ ಯನ್ನು ತಲುಪುತ್ತದೆ.

ರೈಲು ಸಂಖ್ಯೆ 06264 ಪುಣೆ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 08.12.2025 ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಪುಣೆಯಿಂದ ಹೊರಟು ಮರುದಿನ ಬೆಳಗ್ಗೆ 09.30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು- ಚೆನ್ನೈ ಎಗ್ಮೋರ್ ವಿಶೇಷ ರೈಲು 07.12.2025ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಎಗ್ಮೋರ್ ತಲುಪುತ್ತದೆ.

ರೈಲು ಸಂಖ್ಯೆ 06256 ಚೆನ್ನೈ ಎಗ್ಮೋರ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 07.12.2025ರಂದು ಮಧ್ಯಾಹ್ನ 3.45ಕ್ಕೆ ಚೆನ್ನೈ ಎಗ್ಮೋರ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು- ಚೆನ್ನೈ ಸೆಂಟ್ರಲ್ ವಿಶೇಷ ರೈಲು 08.12.2025ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ.

ರೈಲು ಸಂಖ್ಯೆ 06256 ಚೆನ್ನೈ ಸೆಂಟ್ರಲ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 08.12.2025ರಂದು ಸಂಜೆ 4.10 ಕ್ಕೆ ಚೆನ್ನೈ ಸೆಂಟ್ರಲ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಆಹಾರ, ನೀರಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಉಪಹಾರ ನೀಡಿದ ಬೆಂಗಳೂರು ಫ್ಲೈಟ್ ಸಿಬ್ಬಂದಿ

ಖಾಸಗಿ ಬಸ್ ಟಿಕೆಟ್‌ ದರ ಗಗನಕ್ಕೆ

ಇಂಡಿಗೋ ವಿಮಾನ ರದ್ದತಿ ಹಿನ್ನೆಲೆ ಖಾಸಗಿ ಬಸ್ ಕಂಪನಿಗಳು ಬೇಕಾ ಬಿಟ್ಟಿ ದರ ಏರಿಕೆ ಮಾಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಿಂದ ಮುಂಬೈ 3,000 ರೂ. – 9,000 ರೂ. ದರ ಏರಿಸಿದ್ದರೆ, ಬೆಂಗಳೂರಿನಿಂದ ಪುಣೆಗೆ 2,800 ರೂ. – 8,700 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಅಹಮದಾಬಾದ್​ಗೆ 3,000 ರೂ. – 7,000ರೂ. ಏರಿಸಲಾಗಿದೆ.