ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sugarcane Farmers Protest: ತಣ್ಣಗಾದ ಕಬ್ಬು ರೈತರ ಕಿಚ್ಚು, ಸಂಧಾನದೊಂದಿಗೆ ಪ್ರತಿಭಟನೆ ಅಂತ್ಯ

Sugarcane Farmers Protest: ತೀವ್ರ ಸ್ವರೂಪ ಪಡೆದಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪವನ್ನೂ ತಾಳಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿತ್ತು. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಸದ್ಯ ಸಂಧಾನ ಯಶಸ್ವಿಯಾಗಿದ್ದು, ಎಲ್ಲವೂ ತಣ್ಣಗಾದಂತಾಗಿದೆ.

ತಣ್ಣಗಾದ ಕಬ್ಬು ರೈತರ ಕಿಚ್ಚು, ಸಂಧಾನದೊಂದಿಗೆ ಪ್ರತಿಭಟನೆ ಅಂತ್ಯ

ಮುಧೋಳ ಕಬ್ಬು ರೈತರ ಪ್ರತಿಭಟನೆ ಅಂತ್ಯ -

ಹರೀಶ್‌ ಕೇರ
ಹರೀಶ್‌ ಕೇರ Nov 15, 2025 9:16 AM

ಬಾಗಲಕೋಟೆ, ನ. 15: ಕಬ್ಬಿನ ಬೆಲೆ ಏರಿಕೆಗೆ ಒತ್ತಾಯಿಸಿ ಮುಧೋಳದ (mudhol) ರೈತರು ನಡೆಸುತ್ತಿದ್ದ ಹೋರಾಟ (Sugaracane Farmers Protest) ಕೊನೆಗೂ ಸುಖಾಂತ್ಯ ಕಂಡಿದೆ. ಪ್ರತಿಭಟನೆ, ಆಕ್ರೋಶ, ಕಿಚ್ಚಿನ ಬಳಿಕ ಶುಕ್ರವಾರ ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಸಭೆ ನಡೆಯಿತು. ಈ ವೇಳೆ ಕಬ್ಬಿನ ರಿಕವರಿ ರೇಟ್​ ಪರಿಗಣಿಸದೆ, ಪ್ರತಿ ಟನ್​ಗೆ 3,300 ರೂಪಾಯಿ ನೀಡಬೇಕೆಂಬ ರೈತರ ಬೇಡಿಕೆಗೆ ಸಕ್ಕರೆ ಕಾರ್ಖಾನೆ (Sugar factory) ಮಾಲೀಕರು ಒಪ್ಪಿಕೊಂಡರು. ಹಾಗೆ, ಬಾಕಿ ಹಣ ಪಾವತಿಗೂ 4 ಸಕ್ಕರೆ ಕಾರ್ಖಾನೆಗಳು ಸಮ್ಮತಿ ನೀಡಿದವು.

ಪ್ರತಿ ಟನ್​​ ಕಬ್ಬಿಗೆ ಫ್ಯಾಕ್ಟರಿಯವರು 3,250 ರೂಪಾಯಿ ನೀಡಲಿ. ನಂತರ ಸರ್ಕಾರ 50 ರೂಪಾಯಿ ಕೊಡಲಿ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಸಕ್ಕರೆ ಕಾರ್ಖಾನೆಗಳು ಒಪ್ಪಲಿಲ್ಲ. ಹೀಗಾಗಿ ಮೊದಲ ಕಂತಿನಲ್ಲಿ ಫ್ಯಾಕ್ಟರಿಯವರು 3,200 ರೂಪಾಯಿ ನೀಡಲಿದ್ದು, ಆ ಬಳಿಕ 50 ರೂಪಾಯಿ ಹಾಗೂ ಸರ್ಕಾರದ 50 ರೂಪಾಯಿ ಸಿಗಲಿದೆ. ಹೀಗಾಗಿ ಅಲ್ಪ ಸಮಾಧಾನದಲ್ಲೇ ರೈತರು ಇದಕ್ಕೆ ಒಪ್ಪಿ, ಹೋರಾಟ ಕೈಬಿಟ್ಟಿದ್ದಾರೆ.

ಸರಕಾರ ರಿಕವರಿ ಆಧಾರದ ಮೇಲೆ ಘೋಷಿಸಿದ ಬೆಲೆ ಒಪ್ಪದ ರೈತರು ಮೊದಲು ಟನ್ ಗೆ 3,500 ರೂ. ಬೇಕೆಂದು ಪಟ್ಟು ಹಿಡಿದಿದ್ದರು. ನಂತರ ಮೇಲಿಂದ ಮೇಲೆ ಸಭೆ ಬಳಿಕ ಸರಕಾರ ಘೋಷಿಸಿದ 3,300 ರೂ.ಗೆ ಬಂದು ತಲುಪಿತು. ಆದರೆ ರೈತರು ಇದರಲ್ಲಿ ರಿಕವರಿ, ಎಫ್​ಆರ್​​ಪಿ ಪರಿಗಣಿಸುವಂತಿಲ್ಲ ಎಂದು ಷರತ್ತು ಹಾಕಿದ್ದರು. 3,300 ರೂ. ಕೊಡಿ ಆದರೆ, ಮೊದಲ ಕಂತು 3250 ರೂ. ಕೊಡಿ ನಂತರ ಸರಕಾರ ಎರಡನೇ ಕಂತು 50 ರೂ. ಕೊಡಲಿ. ಒಟ್ಟು ಏಕರೂಪ ಬೆಲೆ 3,300 ರೂ. ಎಂದಿದ್ದರು. ಆದರೆ ಕಾರ್ಖಾನೆ ಮಾಲೀಕರು ಮೊದಲ ಕಂತು 3,300 ರೂ, ನಂತರ ಕಾರ್ಖಾನೆ ಹಾಗೂ ಸರಕಾರ ಸೇರಿ 100 ರೂ. ಕೊಡುವುದಾಗಿ ಪಟ್ಟು ಹಿಡಿದಿದ್ದರು. ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನದಿಂದ ಹಗ್ಗಜಗ್ಗಾಟ ಜೋರಾಗಿತ್ತು. ಸರಣಿ ಸಭೆಗಳು ವಿಫಲವಾಗಿದ್ದವು.

ಇದನ್ನೂ ಓದಿ: Sugarcane Farmers Protest: ಬಾಗಲಕೋಟೆಯ ಸೈದಾಪುರದಲ್ಲಿ ಕಬ್ಬು ತುಂಬಿದ್ದ 30 ಟ್ರ್ಯಾಕ್ಟರ್‌ಗಳಿಗೆ ಬೆಂಕಿ; ಲೋಡ್‌ಗಟ್ಟಲೆ ಕಬ್ಬು ಸುಟ್ಟು ಕರಕಲು!

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ತೀವ್ರ ಸ್ವರೂಪ ಪಡೆದಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪವನ್ನೂ ತಾಳಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿತ್ತು. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಸದ್ಯ ಸಂಧಾನ ಯಶಸ್ವಿಯಾಗಿದ್ದು, ಎಲ್ಲವೂ ತಣ್ಣಗಾದಂತಾಗಿದೆ.

ಏತನ್ಮಧ್ಯೆ, ಉತ್ತರ ಕರ್ನಾಟಕದಲ್ಲಿ ಎದ್ದಿರುವ ಕಬ್ಬಿನ ಕಿಚ್ಚಿನ‌ ನಡುವೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ ಆರಂಭವಾಗಿದೆ. ಡಿಸೆಂಬರ್ 8ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಡಿಸಿ ನೇತೃತ್ವದಲ್ಲಿ ಸಭೆ ನಡೆಸಿ, ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: Sugarcane Farmers Protest: ಕಬ್ಬು ರಿಕವರಿ ಆಧಾರದಲ್ಲಿ ದರ ಹೆಚ್ಚಳ ಮಾಡಿ; ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸೂಚನೆ