ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ

ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ. ಹಾಗೆಯೇ ಸುತ್ತೂರು ಜಾತ್ರೆ ಅತ್ಯಂತ ಜನಪ್ರಿಯ ಉತ್ಸವ. ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಬಲು ಸೊಬಗು ಎನ್ನುವುದು ಅಕ್ಷ ರಶಃ ಸತ್ಯ. ಜನಸಾಗರವೇ ಹರಿದು ಬರುವ ಸುತ್ತೂರು ಜಾತ್ರೆಯಲ್ಲಿ ಆರೇಳು ದಿನಗಳ ಕಾಲ ಕಲೆ, ಸಂಸ್ಕೃತಿ, ಕೃಷಿ, ಧಾರ್ಮಿಕ, ಹೀಗೇ ಹತ್ತಾರು ವಿಶೇಷತೆಗಳು ಎಲ್ಲರನ್ನೂ ಬೆರಗು ಗೊಳಿಸುತ್ತವೆ

Mysore News: ಸುತ್ತೂರು ಜಾತ್ರೆಯಲ್ಲಿ ಶ್ರೀಮಂತ ಸಂಸ್ಕೃತಿಯ ಅನಾವರಣ

Profile Ashok Nayak Jan 30, 2025 12:20 PM

ಮೈಸೂರು: ಶ್ರೀ ಸುತ್ತೂರು ಜಾತ್ರಾ ಮಹೋತ್ಸವ ಈ ನೆಲದ ಶ್ರೀಮಂತ ಪರಂಪರೆ ಹಾಗೂ ಸಾಂಸ್ಕೃ ತಿಕ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹಾಹಬ್ಬ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭಿಪ್ರಾಯಪಟ್ಟರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೊಂದಿಗೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡು ಪತ್ರಿಕಾ ಹೇಳಿಕೆ ಮೂಲಕ ಬಣ್ಣಿಸಿದ್ದಾರೆ. ಶ್ರೀ ಸುತ್ತೂರು ಮಠದ ಪರಂಪರೆ, ಸೇವಾ ಕಾರ್ಯಗಳು ಜಗತ್ತಿಗೆ ತಿಳಿದಿವೆ.

ಇದನ್ನೂ ಓದಿ: Mysore News: ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ: ಡಾ.ಪಿ.ಶಿವರಾಜು

ಹಾಗೆಯೇ ಸುತ್ತೂರು ಜಾತ್ರೆ ಅತ್ಯಂತ ಜನಪ್ರಿಯ ಉತ್ಸವ. ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಬಲು ಸೊಬಗು ಎನ್ನು ವುದು ಅಕ್ಷರಷಃ ಸತ್ಯ. ಜನಸಾಗರವೇ ಹರಿದು ಬರುವ ಸುತ್ತೂರು ಜಾತ್ರೆ ಯಲ್ಲಿ ಆರೇಳು ದಿನಗಳ ಕಾಲ ಕಲೆ, ಸಂಸ್ಕೃತಿ, ಕೃಷಿ, ಧಾರ್ಮಿಕ, ಹೀಗೇ ಹತ್ತಾರು ವಿಶೇಷತೆಗಳು ಎಲ್ಲರನ್ನೂ ಬೆರಗುಗೊಳಿಸು ತ್ತವೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸುತ್ತೂರು ಜಾತ್ರೆಯನ್ನು ಪರಂಪರಾಗತವಾಗಿ ಮುಂದುವರೆಸಿಕೊಂಡು ಬರುವ ಜೊತೆಗೆ ಮತ್ತಷ್ಟು ವೈಭವೋಪಿತಗೊಳಿಸುತ್ತಿದ್ದಾರೆ. ಭವ್ಯ ರಥೋ ತ್ಸವ, ಮಾದರಿ ಕೃಷಿ, ಕೊಂಡೋತ್ಸವ, ಲಕ್ಷದೀಪೋತ್ಸವ, ತೆಪ್ಪೋತ್ಸವ, ಅನ್ನ ಬ್ರಹ್ಮೋತ್ಸವದಂತಹ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಜಾತ್ರಾ ಮಹೋತ್ಸವ ಸೀಮಿತವಾಗಿಲ್ಲ.

ಜಾತ್ಯಾತೀತ ಸಾಮೂಹಿಕ ವಿವಾಹ, ದನಗಳ ಜಾತ್ರೆ, ದೇಸೀ ಆಟಗಳನ್ನೊಳಗೊಂಡ ಕ್ರೀಡಾ ಚಟು ವಟಿಕೆಗಳು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೂರೆಗೊಳ್ಳುತ್ತವೆ.

ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನೂ ಮಾಡುವ ಮೂಲಕ ಸ್ವಯಂ ಉದ್ಯೋಗಕ್ಕೂ ಪ್ರೋತ್ಸಾಹ ಕಲ್ಪಿಸಿರುವುದು ವಿಶೇಷವಾಗಿದೆ.

ಸರ್ಕಾರ ಸಹಕಾರ ನೀಡಲಿ: ಪಾರಂಪರಿಕ, ಐತಿಹಾಸಿಕ, ಧಾರ್ಮಿಕ, ವೈಭವೋಪಿತವಾದ ಸುತ್ತೂರು ಜಾತ್ರಾ ಮಹೋತ್ಸವ ಸಂಸ್ಕೃತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹಾ ಸೇವೆಯನ್ನು ಸಾಕಾರಗೊಳಿಸುತ್ತಿದೆ. ಉತ್ತರ ಭಾರತದ ಮಹಾಕುಂಭ ಮೇಳದಂತೆ ಸುತ್ತೂರು ಜಾತ್ರೆ ಗೂ ದೇಶದೆಲ್ಲೆಡೆಯಿಂದ ಜನಸಾಗರ ಹರಿದುಬರಬೇಕು. ಈ ಮೂಲಕ ಇಲ್ಲಿನ ಸಂಸ್ಕೃತಿ, ಪರಂಪರೆಯನ್ನು ಪಸರಿಸುವುದರ ಜೊತೆಗೆ ಮೈಸೂರು ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆ ತಂತಾಗುತ್ತದೆ. ಈ ನಿಟ್ಟಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸರ್ಕಾರ ಸಹಕಾರ ನೀಡ ಬೇಕು ಎಂದು ಸಂದೇಶ್ ಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ.