#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ನೂತನ ಬಿಜೆಪಿ ಜಿಲ್ಲಾಧ್ಯಕ್ಷ 2 ವಾರದಲ್ಲಿ ಬದಲಾಗಲಿದ್ದಾರೆ : ಹೆಚ್.ಆರ್.ಸಂದೀಪ್‌ರೆಡ್ಡಿ ಭವಿಷ್ಯ

ಕಳೆದ 8 ವರ್ಷಗಳ ಹಿಂದೆ ಜಿಲ್ಲೆಯತ್ತ ಯಾವುದೇ ನಾಯಕರು ಮುಖ ಮಾಡುತ್ತಿರಲಿಲ್ಲ. ಇದೀಗ ಪ್ರತಿ ಯೊಬ್ಬರ ಕಣ್ಣು ಚಿಕ್ಕಬಳ್ಳಾಪುರ ಜಿಲ್ಲೆಯತ್ತ ನೆಟ್ಟಿದೆ. ಜಿಲ್ಲೆಯಲ್ಲಿ ಏನೇ ಅಭಿವೃದ್ಧಿ ಕಾರ್ಯ ಗಳು ಆಗಿದೆ. ಎಂದರೆ ಅದಕ್ಕೆ ಸಂಸದ ಸುಧಾಕರ್ ಅವರೇ ನೇರ ಕಾರಣ. ಇಂತಹವರನ್ನು ಕಡೆಗಣಿಸಿ ಜಿಲ್ಲಾ ಧ್ಯಕ್ಷ ಸ್ಥಾನವನ್ನು ನೀಡಿರುವುದು ಸರಿಯಲ್ಲ ಎಂದು ಟೀಕಿಸಿದರು

Chikkaballapur News: ಸುಧಾಕರ್ ಅವರು ಬಿಜೆಪಿಗೆ ಬಂದ ಬಳಿಕವೇ ಪಕ್ಷವು ಜಿಲ್ಲೆಯಲ್ಲಿ ಸದೃಢವಾಗಿ ಬೆಳೆಯಿತು

Profile Ashok Nayak Feb 5, 2025 6:52 AM

ಚಿಕ್ಕಬಳ್ಳಾಪುರ: ಎರಡೇ ವಾರದಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಸಂದೀಪ್ ಬಿ. ರೆಡ್ಡಿ ಕೆಳಗಿಳಿಯದ್ದು, ಈ ಕುರಿತಾಗಿ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಿಡ್ಲಘಟ್ಟ ಮಾಜಿ ಶಾಸಕ ಎಸ್.ಮುನಿಶಾಮಪ್ಪ ಅವರ ಮೊಮ್ಮಗ ಎಚ್.ಆರ್.ಸಂದೀಪ್‌ರೆಡ್ಡಿ ನುಡಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಂಸದ ಡಾ.ಕೆ. ಸುಧಾಕರ್‌ರನ್ನು ಪರಿಗಣಿಸದೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಜಿಲ್ಲೆಯ ಪಕ್ಷ ಸಂಘಟನೆಗೆ ಭಾರಿ ಹೊಡೆತ ಬೀಳಲಿದೆ. ಅಲ್ಲದೆ ಸುಧಾಕರ್ ಅವರು ಬಿಜೆಪಿಗೆ ಬಂದ ಬಳಿಕವೇ ಪಕ್ಷವು ಜಿಲ್ಲೆಯಲ್ಲಿ ಸದೃಢವಾಗಿ ಬೆಳೆಯಿತು ಎಂದರು.

ಇದನ್ನೂ ಓದಿ: Chikkaballapur News: ಯುವಜನ ಮೇಳ, ಯುವ ಸಂಪರ್ಕಸಭೆ ಪುನರ್ ಆರಂಭಿಸಲಿ: ರಾಷ್ಟ್ರೀಯ ಯುವ ಪುರಸ್ಕೃತರ ವೇದಿಕೆ ಒತ್ತಾಯ

ಕಳೆದ 8 ವರ್ಷಗಳ ಹಿಂದೆ ಜಿಲ್ಲೆಯತ್ತ ಯಾವುದೇ ನಾಯಕರು ಮುಖ ಮಾಡುತ್ತಿರಲಿಲ್ಲ. ಇದೀಗ ಪ್ರತಿಯೊಬ್ಬರ ಕಣ್ಣು ಚಿಕ್ಕಬಳ್ಳಾಪುರ ಜಿಲ್ಲೆಯತ್ತ ನೆಟ್ಟಿದೆ. ಜಿಲ್ಲೆಯಲ್ಲಿ ಏನೇ ಅಭಿವೃದ್ಧಿ ಕಾರ್ಯ ಗಳು ಆಗಿದೆ. ಎಂದರೆ ಅದಕ್ಕೆ ಸಂಸದ ಸುಧಾಕರ್ ಅವರೇ ನೇರ ಕಾರಣ. ಇಂತಹವರನ್ನು ಕಡೆಗಣಿಸಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಸೀಕಲ್ ರಾಮಚಂದ್ರಗೌಡರನ್ನು ರಾಜಕೀಯವಾಗಿ ಬೆಳೆಸಿದ್ದು ಡಾ.ಕೆ. ಸುಧಾಕರ್ ಅವರೇ. ಮುನಿಶಾಮಪ್ಪ ಬೆಂಬಲಿಗರು ಹಾಗೂ ಎಂ.ರಾಜಣ್ಣ ಅವರಿಂದ ಕ್ಷೇತ್ರದಲ್ಲಿ ೫೪ ಸಾವಿರ ನೋಂದಣಿಗೆಯಾಗಿದೆ. ಆದರೆ ಸೀಕಲ್ ರಾಮಚಂದ್ರಗೌಡ ಅವರು ರಾಜಣ್ಣ ಅವರನ್ನು ಮೂಲೆಗುಂಪು ಮಾಡಿ ಸುಧಾಕರ್ ಅವರ ವಿರುದ್ಧವೇ ನಿಂತಿರುವುದು ಸರಿಯಲ್ಲ. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿತಶತೃಗಳೆಲ್ಲಾ ಒಟ್ಟಾಗಿ ಸೇರಿ ಸುಧಾಕರ್ ಅವರನ್ನು ಸೋಲಿಸಿ ದರು ಎಂದು ಆರೋಪಿಸಿದರು.

ಶಾಸಕ ವಿಶ್ವನಾಥ್ ಅವರು ಅವರ ಕ್ಷೇತ್ರಕ್ಕೆ ಬ್ರಾöಂಡ್ ಆಗಿರಬಹುದು. ಆದರೇ ಜಿಲ್ಲೆಯಲ್ಲಿ ಪಕ್ಷ ವನ್ನು ಕಟ್ಟಿ ಬೆಳೆಸಿ ಸುಧಾಕರ್‌ರನ್ನು ಕಡೆಗಣಿಸುವುದು ಸರಿಯಲ್ಲ. ಅಲ್ಲದೆ ಅವರು ಪಕ್ಷವನ್ನು ಬಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಖಂಡಿತ ಸೋಲುವರು. ಆದರೆ ಸುಧಾಕರ್ ಅವರು ಪಕ್ಷೇತರ ರಾಗಿ ನಿಂತರೂ ಸ್ವಂತ ವರ್ಚಸ್ಸಿನಿಂದ ಗೆಲ್ಲಲಿದ್ದಾರೆ. ಇಂತಹ ವರ್ಚಸ್ಸು ಇರುವ ನಾಯಕರನ್ನು ಕ್ಷೇತ್ರದ ಜನತೆ ಕೈಹಿಡಿಯಬೇಕು.ಕಷ್ಟಕಾಲದಲ್ಲಿ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಮನವಿ ಮಾಡಿದರು.

ಬಾಗೇಪಲ್ಲಿ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ ಮುನಿರಾಜು ಡಾ.ಕೆ.ಸುಧಾಕರ್ ಅವರಿಂದ ಉಪಕೃತರಾಗಿದ್ದಾರೆ ವಿನಃ ಸುಧಾಕರ್ ಅವರಿಂದ ಲಾಭ ಪಡೆದಿಲ್ಲ. ರಾಜ್ಯ ಕಾರ್ಯದರ್ಶಿಯಾಗಿ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು.ನೂತನ ಸಂದೀಪ್‌ರೆಡ್ಡಿ ಸಹ ಏಕವಚನ ಪ್ರಯೋಗ ಮಾಡುವು ದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ದೇವಾರೆಡ್ಡಿ, ಮಧು, ಎಚ್.ವಿ.ಆಂಜನೇಯರೆಡ್ಡಿ, ಅಪ್ಪಿರೆಡ್ಡಿ ಇದ್ದರು.