Chikkaballapur News: ಯುವಜನ ಮೇಳ, ಯುವ ಸಂಪರ್ಕಸಭೆ ಪುನರ್ ಆರಂಭಿಸಲಿ: ರಾಷ್ಟ್ರೀಯ ಯುವ ಪುರಸ್ಕೃತರ ವೇದಿಕೆ ಒತ್ತಾಯ

ಪ್ರತಿವರ್ಷ ತಾಲೂಕು ಮಟ್ಟದಲ್ಲಿ ಯುವಜನ ಮೇಳಗಳನ್ನು ಸಂಘಟಿಸಿ ಜಾನಪದ ನೃತ್ಯ, ಜಾನಪದ ಗೀತೆ, ಕೋಲಾಟ ಲಾವಣಿ, ಗೀಗಿಪದ, ಗೀತಿಪದ, ಏಕಪಾತ್ರ ಅಭಿನಯ, ರಂಗಗೀತೆ, ಭಜನೆ, ಚರ್ಮ ವಾದ್ಯ, ವೀರಗಾಸೆ ಹೀಗೆ 17 ಪ್ರಕಾರದ ಗ್ರಾಮೀಣ ಕಲೆಗಳಿಗೆ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ ಯುವಜನ ಮೇಳಗಳನ್ನು ಯುವಸಬಲೀಕರಣ ಇಲಾಖೆ ಆಯೋಜಿಸಿ ಯುವ ಜನರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿ ಕೊಡುತ್ತಾ ಬರುತ್ತಿತ್ತು

yuvajana
Profile Ashok Nayak Feb 3, 2025 10:52 PM

ಚಿಕ್ಕಬಳ್ಳಾಪುರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಜನರಿಗೆ ನಡೆಸು ತ್ತಿದ್ದ ಯುವಜನ ಮೇಳ, ತರಬೇತಿ ಶಿಬಿರಗಳು ಹಾಗೂ ಯುವ ಸಂಪರ್ಕ ಸಭೆಗಳನ್ನ ಕಳೆದ ಐದು ವರ್ಷಗಳಿಂದ ನಿಲ್ಲಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಯುವ ಪ್ರತಿಭಾವಂತರು ಅವಕಾಶ ಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ 2025ರ ಬಜೆಟ್ ನಲ್ಲಿ ಇವೆಲ್ಲಾ ಕಾರ್ಯಕ್ರಮಗಳನ್ನು ಸೇರಿಸಬೇಕೆಂದು ರಾಷ್ಟ್ರಪ್ರಶಸ್ತಿ ಯುವ ಪುರಸ್ಕೃತರ ವೇದಿಕೆ ಮನವಿ ಮಾಡಿದ್ದಾರೆ.

ಕುಗ್ರಾಮಗಳಲ್ಲಿ ವಾಸಿಸುವ ಯುವಜನತೆಗಾಗಿ ವಿವಿಧ ಕಾರ್ಯಗಾರಗಳನ್ನು ರೂಪಿಸಿ, ತರಬೇತಿ ಗಳನ್ನು ನೀಡಿ ಅವರಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವಲ್ಲಿ ಯುವ ಸಬಲೀಕರ ಹಾಗೂ ಕ್ರೀಡಾ ಇಲಾಖೆಯ ಕಾರ್ಯಕ್ರಮಗಳು ಪ್ರೇರಣೆಯಾಗಿದ್ದವು. ಆದರೆ, ಇತ್ತೀಚೆಗೆ ಅಂತಹ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ

ಪ್ರತಿವರ್ಷ ತಾಲೂಕು ಮಟ್ಟದಲ್ಲಿ ಯುವಜನ ಮೇಳಗಳನ್ನು ಸಂಘಟಿಸಿ ಜಾನಪದ ನೃತ್ಯ, ಜಾನಪದ ಗೀತೆ, ಕೋಲಾಟ ಲಾವಣಿ, ಗೀಗಿಪದ, ಗೀತಿಪದ, ಏಕಪಾತ್ರ ಅಭಿನಯ, ರಂಗಗೀತೆ, ಭಜನೆ, ಚರ್ಮ ವಾದ್ಯ, ವೀರಗಾಸೆ ಹೀಗೆ 17 ಪ್ರಕಾರದ ಗ್ರಾಮೀಣ ಕಲೆಗಳಿಗೆ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ ಯುವಜನ ಮೇಳಗಳನ್ನು ಯುವಸಬಲೀಕರಣ ಇಲಾಖೆ ಆಯೋಜಿಸಿ ಯುವ ಜನರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿ ಕೊಡುತ್ತಾ ಬರು ತ್ತಿತ್ತು. ಆದರೆ ಇತ್ತೀಚೆಗೆ ಐದು ವರ್ಷಗಳಿಂದ ಈ ಮೇಳಗಳನ್ನು ನಿಲ್ಲಿಸಲಾಗಿದೆ. ಇದರಿಂದ ಗ್ರಾಮೀ ಣ ಪ್ರತಿಭಾವಂತರಿಗಿದ್ದ ಉತ್ತಮ ವೇದಿಕೆ ಇಲ್ಲವಾಗಿದೆ. ಇದರಿಂದ ರಾಜ್ಯಾದ್ಯಂತ ಸಾವಿರರು ಮಂದಿ ಯುವಕಾಶದಿಂದ ವಂಚಿತರಾಗಿದ್ದಾರೆಂದ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಅಧೀನದಲ್ಲಿ ಬರುವ ಯುವಕ ಸಂಘ, ಯುವತಿ ಮಂಡಳಿ ಮಹಿಳಾ ಮಂಡಳಿಯ ಸಂಪೂರ್ಣವಾಗಿ ನಿಶ್ಚಲವಾಗಿದೆ. ಇಲಾಖೆಯು ಕೂಡಲೇ ಯುವಕ ಸಂಘಗಳನ್ನ ಪುನಶ್ವೇತನ ಮಾಡಬೇಕು ಮತ್ತು ರಾಜ್ಯಮಟ್ಟದಲ್ಲಿ ನಡೆಯು ತ್ತಿದ್ದ ಯುವ ಪ್ರೇರಣ, ಯುವ ಚೇತನ ತರಬೇತಿ ಶಿಬಿರಗಳನ್ನು ನಡೆಸಬೇಕು. ಮತ್ತು ರಾಜ್ಯಮಟ್ಟದ ಯುವಜನ ಮೇಳದಲ್ಲಿ ರಾಜ್ಯ ಯುವ ಪ್ರಶಸ್ತಿಯನ್ನು ಕೂಡ ಸಮಾಜಮುಖಿ ಕೆಲಸ ಮಾಡುವ ಯುವಕರಿಗೆ ಕೊಡಬೇಕೆಂದು ಮನವಿ ಮಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡೆಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಯುವಜನ ಚಟುವಟಿಕೆಗೆ ಸಂಪೂರ್ಣವಾಗಿ ಕಾರ್ಯಕ್ರಮ ನಿಲ್ಲಿಸಲಾಗಿದೆ. ಇದು ರಾಜ್ಯ ದಲ್ಲಿರುವ ಶೇ.೪೦ರಷ್ಟು ಯುವಕರಿಗೆ ಅನ್ಯಾಯವಾಗುತ್ತಿದೆ. ಯುವಕರು ಕಲೆ ಮತ್ತು ಸಂಸ್ಕೃತಿ ಯನ್ನು ಮತ್ತು ದೇಶ ಸೇವೆಯಲ್ಲಿ ತೊಡಗಿಸುವ ಕಾಯಕದಲ್ಲಿ ತೊಡಗಿಸಲು ಇಲಾಖೆ ನಿರ್ಲಕ್ಷ್ಯ ಮಾಡಿದರೆ, ಪ್ರತಿಭಾವಂತ ಯುವಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಇಲಾಖೆಯು ಯುವಜನರಿಗಾಗಿ ಒಳಾಂಗಣ ತರಬೇತಿ ಶಿಬಿರಗಳನ್ನು ಕೂಡ ನಿಲ್ಲಿಸಲಾಗಿದೆ. ಮತ್ತು ನಗರ ಪ್ರದೇಶದ ಯುವ ಜನರಿಗಾಗಿದ್ದ ತರಬೇತಿ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಇವೆಲ್ಲವು ಗಳನ್ನು ಪುನರ್ ಆರಂಭ ಮಾಡಬೇಕೆಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಣದೀಪ್ ಅವರಿಗೆ ಮತ್ತು ಇಲಾಖೆಯ ಆಯುಕ್ತರಾದ ಚೇತನ್ ಆರ್ ಐಪಿಎಸ್ ರವರಿಗೆ ಮನವಿ ಮಾಡಿದರು. ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೂ ಸಹ ಮನವಿಯನ್ನು ಸಲ್ಲಿಸ ಲಾಗಿದ್ದು ಈ ಭಾರಿಯ ೨೦೨೫ರ ಬಜೆಟ್ ನಲ್ಲಿ ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಪುನರ್ ಆರಂಭಿಸಬೇಕು ಮತ್ತು ಇಲಾಖೆಗೆ ನೀಡುವ ಅನುದಾನದ ಬಜೆಟ್ ನಲ್ಲಿ ಅರ್ಧ ಭಾಗ ಯುವ ಜನರ ಸೇವೆಗೆ ಮೀಸಲು ಇಡಬೇಕು ಇನ್ನು ಉಳಿದ ಅರ್ಧ ಭಾಗ ಕ್ರೀಡೆಗೆ ಮೀಸಲಿಡಬೇಕು ಎಂದು ಓತ್ತಾಯಿಸಿದ್ದಾರೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?