ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Guest Lecturers: ಅತಿಥಿ ಉಪನ್ಯಾಸಕರಿಗೆ ಗುಡ್‌ ನ್ಯೂಸ್‌; 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಆದೇಶ

Guest Lecturers: ಇಡುಗಂಟು ಯೋಜನೆ ಜನವರಿ 2024ರಿಂದಲೇ ಪೂರ್ವಾನ್ವಯವಾಗಲಿದ್ದು, ಆ ದಿನಾಂಕಕ್ಕೆ ಹಾಗೂ ನಂತರ 60 ವರ್ಷ ಪೂರೈಸಿದ ಎಲ್ಲರಿಗೂ ಸೌಲಭ್ಯ ಸಿಗಲಿದೆ. 2024ರ ಜನವರಿ 1ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ದಾಟಿದವರು ಇಟುಗಂಟು ಸೌಲಭ್ಯ ಪಡೆಯಬಹುದು.

ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ನೀಡಲು ಸರ್ಕಾರ ಆದೇಶ

Profile Prabhakara R May 30, 2025 10:30 PM

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ (Guest Lecturers) ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿವಿಧ ಸೌಲಭ್ಯಗಳು 2024ರ ಜ.1ರಿಂದ ಜಾರಿಗೆ ಬರುವಂತೆ ಮಂಜೂರಾಗಲಿದ್ದು, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡುಗಂಟು ಯೋಜನೆಯ ಪ್ರಯೋಜನ ಸಿಗಲಿದೆ.

ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಈ ಯೋಜನೆಗೆ ಒಳಪಡಲಿದ್ದಾರೆ. ಈ ಯೋಜನೆಗೆ ಒಟ್ಟಾರೆ 44.15 ಕೋಟಿ ರೂಪಾಯಿಗಳನ್ನು ಸರ್ಕಾರ ಕಾಯ್ದಿರಿಸಿದೆ.

ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ 2024ರಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ್ದ ಧರಣಿ, ಪಾದಯಾತ್ರೆಯ ನಂತರ ಸರ್ಕಾರ ನಡೆಸಿದ ಮಾತುಕತೆಯಲ್ಲಿ ಇಡುಗಂಟು ನೀಡುವ ಭರವಸೆ ಸೇರಿತ್ತು. ಅಂದು ನೀಡಿದ್ದ ಭರವಸೆಯಂತೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಇಡುಗಂಟು ಯೋಜನೆ ಜನವರಿ 2024ರಿಂದಲೇ ಪೂರ್ವಾನ್ವಯವಾಗಲಿದ್ದು, ಆ ದಿನಾಂಕಕ್ಕೆ ಹಾಗೂ ನಂತರ 60 ವರ್ಷ ಪೂರೈಸಿದ ಎಲ್ಲರಿಗೂ ಸೌಲಭ್ಯ ಸಿಗಲಿದೆ. 2024ರ ಜನವರಿ 1ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ದಾಟಿದವರು ಇಟುಗಂಟು ಸೌಲಭ್ಯ ಪಡೆಯಬಹುದು.

ಆಯಾ ಕಾಲೇಜುಗಳ ಪ್ರಾಂಶುಪಾಲರು ಸೇವಾ ದೃಢೀಕರಣ ಪತ್ರ ನೀಡಬೇಕು. ಅತಿಥಿ ಉಪನ್ಯಾಸಕರು ಸಲ್ಲಿಸಿದ ಸೇವಾ ವರ್ಷಗಳ ಆಧಾರದಲ್ಲಿ ಪ್ರತಿ ವರ್ಷಕ್ಕೆ 50 ಸಾವಿರದಂತೆ ಗರಿಷ್ಠ 10 ವರ್ಷಗಳ ಸೇವೆಯನ್ನು ಪರಿಗಣಿಸಲಾಗುವುದು. ಆಯಾ ಶೈಕ್ಷಣಿಕ ವರ್ಷದಲ್ಲಿ 240 ದಿನಗಳು ಕೆಲಸ ಮಾಡಿರಬೇಕು. 8 ತಿಂಗಳಿಗಿಂತ ಕಡಿಮೆ ಅವಧಿ ಕೆಲಸ ಮಾಡಿದ್ದರೆ ಅದನ್ನು ಭಾಗಶಃ ವರ್ಷ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಕೆಲಸದ ಅವಧಿಯಲ್ಲೇ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಮೊತ್ತವನ್ನು ಹಸ್ತಾಂತರಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Karnataka Rains: ಅನುದಾನದ ಕೊರತೆಯಿಲ್ಲ, ಮಳೆ ಹಾನಿಗೆ ತಕ್ಷಣ ಪರಿಹಾರ ನೀಡಿ: ಡಿಸಿಗಳಿಗೆ ಸಿಎಂ ಸೂಚನೆ