ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಗುಡಿಬಂಡೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಾಲಾಜಿ ಆಯ್ಕೆ

ಪ್ರಾಥಮಿಕ ಶಾಲಾ ಶಿಕ್ಷಕರು ನನ್ನ ಮೇಲೆ ಸತತ ಮೂರು ಬಾರಿಯಿಂದಲೂ ನಂಬಿಕೆ ಯಿಟ್ಟು ನನ್ನನ್ನು ಗೆಲ್ಲಿಸುತ್ತಿದ್ದಾರೆ. ಈ ಬಾರಿಯೂ ಸಹ ನನ್ನನ್ನು ಗೆಲ್ಲಿಸಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಈ ಹಿಂದೆ ಸಹ ಪ್ರಾಮಾಣಿಕ ವಾಗಿ ಬಗೆಹರಿಸುವಂತಹ ಕೆಲಸ ಮಾಡಿದ್ದೇನೆ. ಮುಂದೆ ಸಹ ಶಿಕ್ಷಕರ ಒಳಿತಿಗಾಗಿ ಶ್ರಮಿಸುತ್ತೇನೆ

ಗುಡಿಬಂಡೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಾಲಾಜಿ ಆಯ್ಕೆ

2026-31 ನೇ ಅವಧಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಬಾಲಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸುಬ್ಬಲಕ್ಷ್ಮಮ್ಮರವರು ಆಯ್ಕೆಯಾಗಿದ್ದಾರೆ. -

Profile
Ashok Nayak May 23, 2026 10:44 PM

ಗುಡಿಬಂಡೆ: 2026-31 ನೇ ಅವಧಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಬಾಲಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸುಬ್ಬಲಕ್ಷ್ಮಮ್ಮ ರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೃಷ್ಣಕುಮಾರಿ ಘೋಷಣೆ ಮಾಡಿದರು.

ಈ ವೇಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು ನನ್ನ ಮೇಲೆ ಸತತ ಮೂರು ಬಾರಿಯಿಂದಲೂ ನಂಬಿಕೆ ಯಿಟ್ಟು ನನ್ನನ್ನು ಗೆಲ್ಲಿಸುತ್ತಿದ್ದಾರೆ. ಈ ಬಾರಿಯೂ ಸಹ ನನ್ನನ್ನು ಗೆಲ್ಲಿಸಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಈ ಹಿಂದೆ ಸಹ ಪ್ರಾಮಾಣಿಕವಾಗಿ ಬಗೆಹರಿಸುವಂತಹ ಕೆಲಸ ಮಾಡಿದ್ದೇನೆ. ಮುಂದೆ ಸಹ ಶಿಕ್ಷಕರ ಒಳಿತಿಗಾಗಿ ಶ್ರಮಿಸುತ್ತೇನೆ ಎಂದರು.

ಈ ವೇಳೆ, ಪ್ರಾಥಮಿಕ ಶಾಲಾ ಶಿಕ್ಷಕರಾದ ವಿ.ಶ್ರೀರಾಮಪ್ಪ, ರಾಜಪ್ಪ, ಉಮಾಶಂಕರ್, ನಾಗಲಿಂಗಪ್ಪ, ವನಜ, ಉಮಾದೇವಿ, ಆದಿನಾರಾಯಣಪ್ಪ, ಗಂಗನಾರಾಯಣ, ಗೋಪಾಲ ಕೃಷ್ಣ ಸಿಂಗ್, ರಾಮಾಂಜನೇಯ, ರಮೇಶ್, ನಾರಾಯಣಸ್ವಾಮಿ, ನರಸಿಂಹಮೂರ್ತಿ. ವೆಂಕಟೇಶಪ್ಪ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ: Gudibande News: ಕಾಂಗ್ರೆಸ್ ಕೇವಲ ಟೀಕೆಗೆ ಸೀಮಿತ, ಅಭಿವೃದ್ಧಿಯಲ್ಲಿ ಶೂನ್ಯ: ಸಿ.ಮುನಿರಾಜು ವಾಗ್ದಾಳಿ