ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಉಗ್ರರ ಅಟ್ಟಹಾಸಕ್ಕೆ 3ನೇ ಕನ್ನಡಿಗ ಬಲಿ, ಬೆಂಗಳೂರಿನ ಮಧುಸೂದನ್‌ ರಾವ್‌ ಸಾವು

ಇದರೊಂದಿಗೆ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಂತಾಗಿದೆ. ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್​, ಬೆಂಗಳೂರಿನ ಭರತ್​ ಭೂಷಣ್ ಮೃತಪಟ್ಟಿದ್ದರು. ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಥಳದಲ್ಲಿದ್ದು ವ್ಯವಸ್ಥೆ ಮಾಡುತ್ತಿದ್ದಾರೆ.

ಉಗ್ರರ ಅಟ್ಟಹಾಸಕ್ಕೆ 3ನೇ ಕನ್ನಡಿಗ ಬಲಿ, ಬೆಂಗಳೂರಿನ ಮಧುಸೂದನ್‌ ರಾವ್‌ ಸಾವು

ಪಹಲ್ಗಾಮ್‌

ಹರೀಶ್‌ ಕೇರ ಹರೀಶ್‌ ಕೇರ Apr 23, 2025 10:12 AM

ಶ್ರೀನಗರ: ಜಮ್ಮು-ಕಾಶ್ಮೀರದ (Jammu And Kashmir) ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್​ನ (Pahalgam terror Attack) ಬೈಸರನ್ ಕಣಿವೆಯಲ್ಲಿ ಉಗ್ರರು (Terrorists) ಮಂಗಳವಾರ ನಡೆಸಿದ ರಕ್ತದೋಕುಳಿಯಲ್ಲಿ ಮೃತರಾದ ಕನ್ನಡಿಗ ಪ್ರವಾಸಿಗರ ಸಂಖ್ಯೆ ಮೂರಕ್ಕೆ ಏರಿದೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ನಿವಾಸಿ ಮಧುಸೂದನ್ ರಾವ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಆಂಧ್ರದ ನೆಲ್ಲೂರು ಮೂಲದ ಮಧುಸೂಧನ್ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಂತಾಗಿದೆ. ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್​, ಬೆಂಗಳೂರಿನ ಭರತ್​ ಭೂಷಣ್ ಮೃತಪಟ್ಟಿದ್ದರು. ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಥಳದಲ್ಲಿದ್ದು ವ್ಯವಸ್ಥೆ ಮಾಡುತ್ತಿದ್ದಾರೆ. ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಈ ಘಟನೆಯ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

2019ರ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದ್ದು, ಕನ್ನಡದ ಮೂವರು ಸೇರಿದಂತೆ ಪ್ರವಾಸಕ್ಕೆ ತೆರಳಿದ್ದ 28ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ದೇಶ ಹಾಗೂ ವಿದೇಶಗಳಿಂದ ಬಂದ ಪ್ರವಾಸಿಗರು ಪಹಲ್ಗಾಮ್​ ಪ್ರಕೃತಿಯನ್ನು ಆನಂದಿಸುತ್ತಿದ್ದ ವೇಳೆ ಭಯೋತ್ಪಾದಕರ ಬಂದೂಕುಗಳು ಮೊಳಗಿವೆ. ಉಗ್ರರು ಜನರ ಹೆಸರುಗಳನ್ನು ಕೇಳಿ ಕೇಳಿ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಹಿಂದೂ ಎಂದು ಖಚಿತಪಡಿಸಿಕೊಂಡು ಕೊಂದಿದ್ದಾರೆ.

ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ಭೇಟಿ ಮೊಟಕುಗೊಳಿಸಿದ ಭಾರತಕ್ಕೆ ಮರಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಭೇಟಿಯಿಂದ ಹಿಂತಿರುಗಿದ್ದಾರೆ. ಅವರು ಭದ್ರತಾ ಸಂಪುಟ ಸಮಿತಿಯ (CCS) ಸಭೆಯನ್ನು ನಡೆಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಧಾವಿಸಿ ಜಮ್ಮು ಮತ್ತು ಕಾಶ್ಮೀರದ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.

ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಇಬ್ಬರು ವಿದೇಶಿಯರು ಕೂಡ ಸೇರಿದ್ದಾರೆ.

ಇದನ್ನೂ ಓದಿ: Pahalgam Terror Attcak: ಶ್ರೀನಗರ ತಲುಪಿದ ಸಂತೋಷ್‌ ಲಾಡ್‌, ಕಾಶ್ಮೀರ ಪ್ರವಾಸಿಗರಿಗಾಗಿ ಸಹಾಯವಾಣಿ