ತುಮಕೂರು, ಸೆ.1: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಗರದ (Tumkur News) ಶಾಖೆಯಲ್ಲಿ 9ನೇ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕಿನ ಗ್ರಾಮೀಣ ಜನರ ಆರ್ಥಿಕ ಸೇರ್ಪಡೆ, ಅಂಚೆ ಇಲಾಖೆ ಡಿಜಿಟಲೀಕರಣ ಹಾಗೂ ಮನೆ ಬಾಗಿಲಿಗೆ ಅಂಚೆ ಸೇವೆಗಳನ್ನು ಒದಗಿಸುತ್ತಿರುವ ಸೇವೆಯನ್ನು ಕೊಂಡಾಡಿದರು.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಓಬಳಾಪುರ ಗ್ರಾಮದ ಮಲ್ಲೇಶಯ್ಯ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ 'ನಿವಾ ಬೂಪಾ' ಅಪಘಾತ ವಿಮಾ ಚೆಕ್ ವಿತರಣೆ ಮಾಡಲಾಯಿತು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಫಲಾನುಭವಿಗೆ ಚೆಕ್ ವಿತರಿಸಿದರು.
ಕೇವಲ 549 ಪ್ರೀಮಿಯಂ: ಮಲ್ಲೇಶಯ್ಯ ಅವರು ವಾರ್ಷಿಕ ಕೇವಲ 549 ರೂಪಾಯಿ ಪಾವತಿಸಿ ಅಪಘಾತ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರು. ನಿಯಮಾನುಸಾರ ಮೃತರ ಪತ್ನಿ ಹಾಗೂ ನಾಮಿನಿ ಆದ ಲಲಿತಮ್ಮ ಪಿ ಅವರಿಗೆ ವಿಮಾ ಕ್ಲೈಮ್ ಮಂಜೂರಾಯಿತು.
ಬ್ಯಾಂಕ್‌ನ ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಸಿ.ಎಚ್. ಚೈತನ್ಯ ಕುಮಾರ್ ಅವರು ವಿಮಾ ಕ್ಲೈಮ್ ಚೆಕ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು, ತುಮಕೂರು ಉಪ ವಿಭಾಗಗಳ ಎಲ್ಲಾ ಅಂಚೆ ನಿರೀಕ್ಷಕರು, ಅಂಚೆ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Tumkur News: ಓದುವ ಸಂಸ್ಕೃತಿಯಿಂದ ವ್ಯಕ್ತಿತ್ವ ವಿಕಸನ: ವೀರೇಶಾನಂದ ಸ್ವಾಮೀಜಿ
ಅತ್ಯಂತ ಕಡಿಮೆ ವಾರ್ಷಿಕ ಪ್ರೀಮಿಯಂನಲ್ಲಿ ದೊರೆಯುವ ಇಂತಹ ಅಪಘಾತ ವಿಮಾ ಯೋಜನೆಗಳು ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಆಪತ್ಬಾಂಧವವಾಗಿ ನೆರವಾಗುತ್ತಿವೆ ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿದೆ.