Tumkur News: ಓದುವ ಸಂಸ್ಕೃತಿಯಿಂದ ವ್ಯಕ್ತಿತ್ವ ವಿಕಸನ: ವೀರೇಶಾನಂದ ಸ್ವಾಮೀಜಿ
Tumkur News: ಪುಸ್ತಕ ಅಧ್ಯಯನವು ಜ್ಞಾನವನ್ನು ಬೆಳೆಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಮತ್ತು ಯುವಜನರು ಆದರ್ಶ ನಡವಳಿಕೆ ಹಾಗೂ ಆಲೋಚನಾ ಸಾಮರ್ಥ್ಯಕ್ಕಾಗಿ ಅಧ್ಯಯನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.
ತುಮಕೂರಿನಲ್ಲಿ ಸಾಧಕರಿಗೆ 'ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ' ಪ್ರದಾನ ಮಾಡಲಾಯಿತು. -
ತುಮಕೂರು, ಆ.31: ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ರೋಟರಿ ತುಮಕೂರು, ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ರೀಡ್ ಬುಕ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ (National Librarians' Day) ಶ್ರದ್ಧಾ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, "ಪುಸ್ತಕ ಅಧ್ಯಯನವು ಜ್ಞಾನವನ್ನು ಬೆಳೆಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಮತ್ತು ಯುವಜನರು ಆದರ್ಶ ನಡವಳಿಕೆ ಹಾಗೂ ಆಲೋಚನಾ ಸಾಮರ್ಥ್ಯಕ್ಕಾಗಿ ಅಧ್ಯಯನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಅಧ್ಯಯನದ ಮಹತ್ವ: ಬುದ್ಧಿವಂತಿಕೆ ಮತ್ತು ಹಣದ ನಡುವೆ ಗೆಲ್ಲುವುದು ಬುದ್ಧಿವಂತಿಕೆಯೇ ಹೊರತು ಹಣವಲ್ಲ. ವಿದ್ಯಾರ್ಥಿಗಳು ತಮ್ಮ ಬದುಕು ಮತ್ತು ಭವಿಷ್ಯದ ಬಗ್ಗೆ ಗಂಭೀರತೆ ಹೊಂದಿರಬೇಕು ಎಂದು ಸ್ವಾಮೀಜಿ ತಿಳಿಸಿದರು.
ಪುಸ್ತಕಗಳಿಗೆ ಜೀವನ ಪರಿವರ್ತನೆ ಮಾಡುವ ದಿವ್ಯಶಕ್ತಿಯಿದೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, "ಪುಸ್ತಕಗಳಿಗೆ ಜೀವನ ಪರಿವರ್ತನೆ ಮಾಡುವ ದಿವ್ಯಶಕ್ತಿಯಿದೆ. ವಾರಕ್ಕೊಂದು ಪುಸ್ತಕ ಓದುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು" ಎಂದು ಸಲಹೆ ನೀಡಿದರು.
'ಓದು ಕರ್ನಾಟಕ' ಅಭಿಯಾನ
ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್. ಕಾಡದೇವರಮಠ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಸಲುವಾಗಿ ತುಮಕೂರಿನಿಂದಲೇ 'ಓದು ಕರ್ನಾಟಕ' ಕಾರ್ಯಕ್ರಮ ಆರಂಭಿಸಲಾಗುತ್ತಿದ್ದು, ನಗರದ 35 ವಾರ್ಡ್‌ಗಳ ಶಾಲೆಗಳ ಮಕ್ಕಳಿಗಾಗಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದರು.
ಗ್ರಂಥಾಲಯ ಪಿತಾಮಹರ ಸ್ಮರಣೆ
ಸಿ.ಎಸ್.ಐ.ಆರ್ ಸಂಸ್ಥೆಯ ಐಸಿಎಎಸ್‌ಟಿ ಮುಖ್ಯಸ್ಥ ಡಾ.ಬಿ.ಎಸ್. ಶಿವರಾಮ್ ಮುಖ್ಯ ಭಾಷಣ ಮಾಡಿ, ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಸೇವೆ ಹಾಗೂ ಪುಸ್ತಕ ಓದುವ ಹವ್ಯಾಸದ ಪ್ರಯೋಜನಗಳನ್ನು ವಿವರಿಸಿದರು.
ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ: ಶ್ರೀ ಮಧುಸೂಧನ್ ಸಾಯಿ
ಸಾಧಕರಿಗೆ ಪ್ರಶಸ್ತಿ ಪ್ರದಾನ
ಸಮಾರಂಭದಲ್ಲಿ ಗಣ್ಯ ಗ್ರಂಥಪಾಲಕರಾದ ಡಾ.ಬಿ.ಎಸ್. ಶಿವರಾಮ್, ಡಾ. ಈಶ್ವರಪ್ಪ ಬೆಂಡಿ, ಡಾ. ಪರಮಾನಂದ, ಡಾ. ಅನಿತಾ ರಾಯ್, ರಂಗನಾಥ್ ಹಾಗೂ ಜಿ.ಎಚ್. ಮೋಹನ್‌ಕುಮಾರ್ ಅವರಿಗೆ 'ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಕಾರ್ಯದರ್ಶಿ ಎಸ್. ಚಂದ್ರಕಲಾ, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ನರೇಂದ್ರ ವಿಶ್ವನಾಥ್, ರೋಟರಿ ಅಸಿಸ್ಟೆಂಟ್ ಗೌರ್ನರ್ ಸಿ. ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.