ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Groundnut cultivation: ಶೇಂಗಾ ಕೃಷಿ; ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ!

Groundnut cultivation: ಪಾವಗಡ ತಾಲೂಕಿನ ಕಣಿವೆನಹಳ್ಳಿ ಗ್ರಾಮದ ರೈತ ಸುರೇಶ್ ಅವರು ನಾಲ್ಕು ಎಕರೆ ಜಮೀನಿನಲ್ಲಿ ಭರ್ಜರಿಯಾಗಿ ಶೇಂಗಾ ಬೆಳೆದು ಗಮನ ಸೆಳೆದಿದ್ದಾರೆ. 19 ಕೊಳವೆ ಬಾವಿ ಕೊರೆಸಿ, ನೀರಿಲ್ಲದೆ ಸಂಕಷ್ಟಕ್ಕೆ ಒಳಗಾದರೂ ತಮ್ಮ ಕಾಯಕವನ್ನು ಬಿಡದೆ ಉತ್ತಮ ಬೆಳೆ ಬೆಳೆಯುವಲ್ಲಿ ರೈತ ಯಶಸ್ವಿಯಾಗಿದ್ದಾರೆ.

ಶೇಂಗಾ ಕೃಷಿ; ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ!

Profile Prabhakara R Feb 15, 2025 9:22 PM

ಪಾವಗಡ: ತಾಲೂಕಿನಲ್ಲಿ ಇತ್ತೀಚೆಗೆ ಮಳೆ ಕೊರತೆಯಿಂದ ಶೇಂಗಾ ಬೆಳೆ ಬೆಳೆದು ಕೈಸುಟ್ಟುಕೊಂಡ ರೈತರನ್ನು ಹೆಚ್ಚಾಗಿ ಕಾಣಬಹುದು. ಅಂತಹುದರಲ್ಲಿ ಹಠವಾದಿ ರೈತರೊಬ್ಬರು, ನಾಲ್ಕು ಎಕರೆ ಜಮೀನಿನಲ್ಲಿ ಭರ್ಜರಿಯಾಗಿ ಶೇಂಗಾ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಪಾವಗಡ ತಾಲೂಕಿನ ಕಣಿವೆನಹಳ್ಳಿ ಗ್ರಾಮದ ರೈತ ಸುರೇಶ್ ಅವರು 19 ಕೊಳವೆ ಬಾವಿ ಕೊರೆಸಿ, ನೀರಿಲ್ಲದೆ ಸಂಕಷ್ಟಕ್ಕೆ ಒಳಗಾದರೂ ಉತ್ತಮ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ ಹಲವು ವರ್ಷಗಳಿಂದ ಉತ್ತಮ ಮಳೆ ಇಲ್ಲದೆ, ನಷ್ಟಕ್ಕೊಳಗಾದ ರೈತರು, ಸೋಲಾರ್ ಘಟಕಕ್ಕೆ ಜಮೀನು ಮಾರುತ್ತಿದ್ದಾರೆ. ಈ ನಡುವೆ ಬಂಪರ್‌ ಬೆಳೆ ಬೆಳೆದು ರೈತ ಸುರೇಶ್ ಸುದ್ದಿಯಾಗಿದ್ದಾರೆ.

ಸುತ್ತಲೂ ಬೆಟ್ಟ ಗುಡ್ಡಗಳು, ಅದರ ಮಧ್ಯೆ ಇರುವ ಜಮೀನಿನಲ್ಲಿ ಬೆಳೆ ಬೆಳೆದರೆ ಕಾಡು ಪ್ರಾಣಿಗಳ ಹಾವಳಿ. ಹೀಗಿದ್ದರೂ ಉತ್ತಮ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿರುವ ರೈತನ ಮೊಗದಲ್ಲಿ ಸಂತಸ ಮೂಡಿದೆ. ರಾತ್ರಿ ವೇಳೆ ತ್ರಿ ಫೇಸ್‌ ವಿದ್ಯುತ್ ನೀಡುವುದರಿಂದ ಕತ್ತಲಲ್ಲಿ ಜಮೀನಿಗೆ ಹೋಗಿ ನೀರು ಹಾಯಿಸುವಾಗ ಅದೆಷ್ಟೋ ರೈತರು ವಿದ್ಯುತ್‌ ತಗುಲಿ ಸಾಯುತ್ತಿದ್ದಾರೆ. ಅಲ್ಲದೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಡುತ್ತಿದ್ದಾರೆ. ಹೀಗಾಗಿ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ, ಉತ್ತಮ ಬೆಂಬಲ ಬೆಲೆ ನೀಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.



ಇನ್ನು ರೈತ ಸುರೇಶ್ ಅವರ ಜಮೀನಿಗೆ ತಾಲೂಕಿನ ಕಣೇನಳ್ಳಿ ಗ್ರಾಮದ ರೈತರಾದ ಅಶ್ವತಪ್ಪ. ಮಾಜಿ ಪಂಚಾಯತಿ ಸದಸ್ಯ ಗೋವಿಂದಪ್ಪ. ಮಂಜುನಾಥ್. ಸಣ್ಣೀರಪ್ಪ. ಅಶ್ವಥ್ ನಾರಾಯಣ್. ಇತರರು ಭೇಟಿ ನೀಡಿ, ಬೆಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ: ಇಮ್ರಾನ್ ಉಲ್ಲಾ, ಪಾವಗಡ)

ಮಧುಗಿರಿಯಲ್ಲಿ ಯಶಸ್ವಿಯಾದ ಉಚಿತ ನೇತ್ರ ತಪಾಸಣಾ ಶಿಬಿರ

Madhugiri News

ಮಧುಗಿರಿ: ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಮಧುಗಿರಿಯಲ್ಲಿ ಪುರಸಭಾ ಕಾರ್ಮಿಕರು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿಬಿರಕ್ಕೆ 140ಕ್ಕೂ ಹೆಚ್ಚು ಪೌರ ಕಾರ್ಮಿಕರು ಆಗಮಿಸಿ ತಪಾಸಣೆ ಮಾಡಿಸಿಕೊಂಡು, ಔಷಧ, ಕನ್ನಡಕಗಳು ಹಾಗೂ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು.

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ (ಮಧುಗಿರಿ ಶಾಖೆ)ಯಲ್ಲಿ ಬೆಳಗ್ಗೆ 10.30ಕ್ಕೆ ಶಿಬಿರ ಆರಂಭವಾಯಿತು. ಮಧುಗಿರಿ ಪುರಸಭೆಯ ಅಧ್ಯಕ್ಷರಾದ ಜಿ.ಎ.ಮಂಜುನಾಥ್, ಉಪಾಧ್ಯಕ್ಷರಾದ ಜಿ.ಆರ್. ಸುಜಾತ ಎಂ.ಎಸ್.ಶಂಕರನಾರಾಯಣ್, ಮುಖ್ಯಾಧಿಕಾರಿಗಳಾದ ಸುರೇಶ್ ಹಾಗೂ ಕೌನ್ಸಿಲರ್ ಆದ ಮಂಜುನಾಥ್ ಹಾಗೂ ಯೋಜನೆಯ ಸಂಯೋಜಕರಾದ ಎಂ.ಎಸ್.ಶಂಕರನಾರಾಯಣ್, ಅಧ್ಯಕ್ಷರು, ಎಂ.ಜಿ.ಎಂ. ಶಾಲೆ ರವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಉದ್ಘಾಟನೆ ನೆರವೇರಿತು. ಈ ವೇಳೆ ಸ್ವಾಮೀಜಿ ಅವರು ಮಾತನಾಡಿ, ಐದು ತಾಲೂಕುಗಳನ್ನೊಳಗೊಂಡ ಈ ಮಧುಗಿರಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ಶಾಖೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಇದೀಗ ಎರಡನೇ ತಂಡ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿಕೊಂಡು ಬಂದಿರುವುದು ಅತ್ಯಂತ ಸಂತೋಷಕರವಾದ ವಿಚಾರ ಎಂದು ತಿಳಿಸಿದರು.

ಮಧುಗಿರಿ ಸಾರ್ವಜನಿಕರು, ಪುರಸಭೆಯ, ಅಧಿಕಾರಿ ವರ್ಗದವರು ಸೇರಿ ಸ್ಥಳೀಯ ಸಂಘ ಸಂಸ್ಥೆಗಳಾದ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ಅನೇಕಾನೇಕ ಸಂಘ ಸಂಸ್ಥೆಯವರು ಕೈಜೋಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದ ಸ್ವಾಮೀಜಿ, ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಮಧುಗಿರಿಯ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ವರದಿಗಾರರ ಅದ್ಭುತ ಸಹಕಾರವನ್ನು ಕೊಂಡಾಡಿದರು.

ಮಧುಗಿರಿಯ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು, ಹಿರಿಯ ತಜ್ಞರಾದ ಡಾ. ಜಿ.ಕೆ.ಜಯರಾಮ್ ಹಾಗೂ ಆಸ್ಪತ್ರೆಯ ಸಂಯೋಜಕರಾದ ಪ್ರಸನ್ನ ಕುಮಾರ್, ಮನೋಹರ್, ಶಶಿಕುಮಾರ್ ಹಾಗೂ ಅಪಾರ ಸಂಖ್ಯೆಯ ಮಹಿಳಾ ಹಾಗೂ ಪುರುಷ ಸ್ವಯಂಸೇವಕರು ಪೂಜ್ಯ ಸ್ವಾಮೀಜಿಯವರ ಯೋಜನೆಗಳಿಗೆ ಪೂರ್ಣ ಸಹಕಾರ ನೀಡುತ್ತಿರುವುದು ಮೆಚ್ಚುಗೆಯ ವಿಷಯ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Daali Wedding: ಡಾಲಿ ಧನಂಜಯ್‌ ಅದ್ಧೂರಿ ಆರತಕ್ಷತೆ; ಗಣ್ಯರ ಆಗಮನ

ಪುರಸಭೆಯ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಾವಗಡ ಇದರ ಎಲ್ಲ ಯೋಜನೆಗಳು ಮಧುಗಿರಿ, ಕೊರಟಗೆರೆ, ಗೌರಿಬಿದನೂರು, ಶಿರಾ ಹಾಗೂ ಸುತ್ತಮುತ್ತಲಿನ ಗಡಿಭಾಗದ ಜನರಿಗೆ ತಲುಪುತ್ತಿರುವುದು ನಮ್ಮ ಮಧುಗಿರಿ ಜನತೆಯ ಅದೃಷ್ಟ ಎಂದು ತಿಳಿಸಿದರು.