ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈದ್ಯಕೀಯ ಶಿಕ್ಷಣದಲ್ಲಿ ಅಂಕ ಗಳಿಕೆಗಿಂತ ಸಮರ್ಪಣಾ ಭಾವ ಮುಖ್ಯ: ಡಾ. ಎಚ್.ಬಸವನಗೌಡಪ್ಪ

Tumkur News: ವೈದ್ಯಕೀಯ ಶಿಕ್ಷಣದಲ್ಲಿ ಕೇವಲ ಅಂಕ ಗಳಿಸುವುದಕ್ಕಿಂತ ಸಮರ್ಪಣಾ ಭಾವ, ಸಂವಹನ ಕೌಶಲ್ಯ ಹಾಗೂ ಕರುಣೆ ಅತ್ಯಂತ ಅಗತ್ಯ. ಶೇ. 99ರಷ್ಟು ಅಹಿತಕರ ಘಟನೆಗಳಿಗೆ ರೋಗಿಗಳೊಂದಿಗೆ ಸರಿಯಾದ ಸಂವಹನ ಕೊರತೆಯೇ ಕಾರಣವಾಗಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ರೋಗಿಗಳ ಮಾತು ಆಲಿಸಬೇಕು ಎಂದು ಜೆಎಸ್‌ಎಸ್ ಅಕಾಡೆಮಿ ಕುಲಪತಿ ಡಾ. ಎಚ್. ಬಸವನಗೌಡಪ್ಪ ತಿಳಿಸಿದ್ದಾರೆ.

ತುಮಕೂರು, ಸೆ.28: ನಗರದ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಜೆಎಸ್‌ಎಸ್ ಅಕಾಡೆಮಿ ಕುಲಪತಿ ಡಾ. ಎಚ್. ಬಸವನಗೌಡಪ್ಪ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಕೇವಲ ಅಂಕ ಗಳಿಸುವುದಕ್ಕಿಂತ ಸಮರ್ಪಣಾ ಭಾವ, ಸಂವಹನ ಕೌಶಲ್ಯ ಹಾಗೂ ಕರುಣೆ ಅತ್ಯಂತ ಅಗತ್ಯ. ಶೇ. 99ರಷ್ಟು ಅಹಿತಕರ ಘಟನೆಗಳಿಗೆ ರೋಗಿಗಳೊಂದಿಗೆ ಸರಿಯಾದ ಸಂವಹನ ಕೊರತೆಯೇ ಕಾರಣವಾಗಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ರೋಗಿಗಳ ಮಾತು ಆಲಿಸಬೇಕು ಎಂದರು. ತಂತ್ರಜ್ಞಾನ ಎಷ್ಟು ಬೆಳೆದರೂ ರೋಗಿಯೊಂದಿಗಿನ ನೈತಿಕ ಸಂಬಂಧವನ್ನು ಕೃತಕ ಬುದ್ಧಿಮತ್ತೆ ನೀಡಲಾರದು ಎಂದರು.

ಎಸ್‌ಎಂಸಿಆರ್‌ಐ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ಸಚ್ಚಿದಾನಂದ ಮಾತನಾಡಿ, ಸಂಸ್ಥೆಯು 'ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ'ದ ಮೂಲಕ ಜಾಗತಿಕ ಮಟ್ಟದ ಕರುಣಾಮಯಿ ವೈದ್ಯರನ್ನು ರೂಪಿಸಲು ಬದ್ಧವಾಗಿದೆ. ಪಠ್ಯ ಜ್ಞಾನದ ಜತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಇಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವೈದ್ಯಕೀಯ ವೃತ್ತಿ ಕೇವಲ ಶೈಕ್ಷಣಿಕ ಕೋರ್ಸ್ ಅಲ್ಲ, ಅದೊಂದು ಸಮಾಜ ಸೇವೆಯ ಜವಾಬ್ದಾರಿ. ಪ್ರತಿ ವೈದ್ಯರಿಗೂ ಸಾಮರ್ಥ್ಯ, ಕರುಣೆ ಹಾಗೂ ಉತ್ತಮ ಚಾರಿತ್ರ್ಯ ಅತಿ ಮುಖ್ಯ ಎಂದು ಆಶೀರ್ವಚನ ನೀಡಿದರು.

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್

ಸಮಾರಂಭದಲ್ಲಿ ಜಯವಿಭವ ಸ್ವಾಮಿ, ಟಿ.ಎಂ. ಸ್ವಾಮಿ, ಡಾ. ಶಿವಕುಮಾರಯ್ಯ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ. ಎಸ್. ಪರಮೇಶ್, ಡಾ. ನಿರಂಜನ ಮೂರ್ತಿ ಬಿ, ಪ್ರಾಂಶುಪಾಲರಾದ ಡಾ. ಶಾಲಿನಿ ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.