ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್

Tumkur News: ವ್ಯಸನ ಮುಕ್ತರಾದ ವ್ಯಕ್ತಿಗಳು ಮುಂದೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಟ್ರಸ್ಟ್ ವತಿಯಿಂದ ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ನ ಟ್ರಸ್ಟಿ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ (ಕ್ಷೇಮವನ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ತಿಳಿಸಿದ್ದಾರೆ.

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು

-

Profile
Siddalinga Swamy Sep 26, 2026 9:07 PM

ತುಮಕೂರು. ಸೆ.26: ಮದ್ಯವರ್ಜನ ಶಿಬಿರಗಳು ಕೇವಲ ವ್ಯಸನ ಮುಕ್ತಗೊಳಿಸುವ ಕೇಂದ್ರಗಳಲ್ಲ, ಬದಲಾಗಿ ಲಕ್ಷಾಂತರ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು ಮೂಡಿಸುತ್ತಿರುವ ಸಮಾಜಮುಖಿ ಕಲ್ಯಾಣ ಕಾರ್ಯಕ್ರಮಗಳಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ನ ಟ್ರಸ್ಟಿ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ (ಕ್ಷೇಮವನ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಬೆಳ್ಳಾವಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತುಮಕೂರು ಗ್ರಾಮಾಂತರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಳ್ತಂಗಡಿ -1 ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ತುಮಕೂರು ಜಿಲ್ಲೆ-1 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಉಜಿರೆ ಇದರ ವಿಸ್ತೃತ ಕಾರ್ಯಕ್ರಮ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ 2125ನೇ ಬೃಹತ್ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರದ ಪ್ರಮುಖ ಮುಖ್ಯಾಂಶಗಳು

ಸಮಾಜಮುಖಿ ಚಿಂತನೆ: ಅತಿಮದ್ಯಪಾನದಿಂದ ಕಷ್ಟಪಡುತ್ತಿರುವ ಕುಟುಂಬಗಳನ್ನು ಗುರುತಿಸಿ, ಅವರಿಗೆ ಮಾನಸಿಕ ಧೈರ್ಯ ಹಾಗೂ ವೈದ್ಯಕೀಯ ಚಿಕಿತ್ಸೆಯ ಮೂಲಕ ಹೊಸ ಜೀವನ ಕಲ್ಪಿಸುವುದು ಈ ಶಿಬಿರಗಳ ಮುಖ್ಯ ಉದ್ದೇಶವಾಗಿದೆ.

ಅಪಾರ ಜನಮನ್ನಣೆ: ಧರ್ಮಸ್ಥಳ ಟ್ರಸ್ಟ್‌ನ ಈ ಸತ್ಕಾರ್ಯದಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಮಂದಿ ದುಶ್ಚಟಗಳಿಂದ ಮುಕ್ತರಾಗಿ, ತಮ್ಮ ಕುಟುಂಬಗಳೊಂದಿಗೆ ಗೌರವಯುತ ಜೀವನ ನಡೆಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ ಒತ್ತು: ವ್ಯಸನ ಮುಕ್ತರಾದ ವ್ಯಕ್ತಿಗಳು ಮುಂದೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಟ್ರಸ್ಟ್ ವತಿಯಿಂದ ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಶ್ರದ್ಧಾ ಅಮಿತ್ ತಿಳಿಸಿದರು.

ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ವೀರಬಸವ ಸ್ವಾಮೀಜಿ ಮಾತನಾಡಿ, ಕೇವಲ ಕಾನೂನು ಅಥವಾ ಬಲವಂತದಿಂದ ವ್ಯಸನಗಳನ್ನು ತೊರೆಯಲು ಸಾಧ್ಯವಿಲ್ಲ. ಶಿಬಿರಗಳ ಮೂಲಕ ವ್ಯಕ್ತಿಗಳಲ್ಲಿ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ಥೈರ್ಯ ತುಂಬಿ, ಅವರಲ್ಲಿ ಸ್ವಯಂ ಪರಿವರ್ತನೆ ಉಂಟುಮಾಡುವುದು ಶ್ಲಾಘನೀಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ತುಮಕೂರು-1 ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಮದ್ಯದ ಚಟದಿಂದ ಬೀದಿಪಾಲಾಗಿದ್ದ ನೂರಾರು ಸಂಸಾರಗಳು ಈ ಶಿಬಿರಗಳ ಮೂಲಕ ಮರುಜೀವ ಪಡೆದಿವೆ. ಗಂಡ-ಹೆಂಡತಿ ಹಾಗೂ ಮಕ್ಕಳ ಕಣ್ಣೀರು ಒರೆಸಿ, ಮನೆಗಳಲ್ಲಿ ನೆಮ್ಮದಿ ಮರುಕಳಿಸುವಂತೆ ಮಾಡುವ ಈ ಸೇವೆ ದೇವಪೂಜೆಗಿಂತ ಮಿಗಿಲಾದುದು ಎಂದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಮಾತನಾಡಿ, ವ್ಯಸನ ಮುಕ್ತರಾದವರು ತಮ್ಮ ಹಳೆಯ ಚಟಗಳಿಗೆ ಮತ್ತೆ ಬಲಿಯಾಗದೆ, ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬೇಕು ಹಾಗೂ ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ: ನ್ಯಾಯಾಧೀಶ ಜಯಂತ್ ಕುಮಾರ್

ಮದ್ಯವರ್ಜನ ಶಿಬಿರದಲ್ಲಿ ಸುಮಾರು 60 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಮರಾಜು, ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ತಾಲೂಕು ಯೋಜನಾಧಿಕಾರಿಗಳಾದ ಸಂದೇಶ್, ಪ್ರಭಾಕರ್, ಜನಜಾಗೃತಿ ವೇದಿಕೆ ಡಾ. ಸಂಜಯ್ ನಾಯಕ್, ಗಣೇಶ್ ಪ್ರಸಾದ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಉಮೇಶ್, ಜನಜಾಗೃತಿ ವೇದಿಕೆ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಮನೋಜ್ ಹೆಗ್ಡೆ, ಗಂಗಾಧರ್, ರಾಘವೇಂದ್ರ, ರಮೇಶ್, ದರ್ಶನ್, ಕೆಂಪನರಸಯ್ಯ, ಮಲ್ಲೇಶ್, ಅಸ್ಲಾಂಪಾಷಾ ಸೇರಿದಂತೆ ಸ್ಥಳೀಯ ಗಣ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಅಧಿಕಾರಿಗಳು, ವಿವಿಧ ಒಕ್ಕೂಟಗಳ ಪದಾಧಿಕಾರಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.