ಚಿಕ್ಕನಾಯಕನಹಳ್ಳಿ : ಮಹಿಳೆ ಸಾವಿಗೆ ನರ್ಸ್ ನೀಡಿದ ಓವರ್ ಡೋಸ್ ಇಂಜೆಕ್ಷನ್ ಕಾರಣ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.
ಕೆಂಪರಾಯ£ಹಟ್ಟಿ ನಿವಾಸಿ ಗಂಗಾಧರ್ ಅವರ ಪತ್ನಿ ಪುಷ್ಪಾವತಿ (32) ಮೃತಪಟ್ಟವರು.
ಪುಷ್ಪಾವತಿ ಅವರು ಜುಲೈ 22 ರಂದು ಮನೆಯವರ ಜೊತೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಾಯಿಗಂಗಾ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಗ ತಪಾಸಣೆ ಮಾಡುತ್ತಿದ್ದ ಡ್ಯೂಟಿ ನರ್ಸ್ ಡಾಕ್ಟರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ಆಸ್ಪತ್ರೆಯಿಂದ ದೂರ ಇದ್ದ ಕಾರಣ ಅವರು ಬರಲು ಆಗುವುದಿಲ್ಲ ಎಂದಿದ್ದರು. ನರ್ಸ್ ಏನು ಸಮಸ್ಯೆ ಎಂದು ಪುಷ್ಪಾವತಿ ಅವರನ್ನು ಕೇಳಿದ್ದಾರೆ. ಪಕ್ಕೆ ನೋವು ಎಂದು ತಿಳಿಸಿದ್ದಾರೆ. ಆಸ್ಪತ್ರೆಯವರು ಇದಕ್ಕೆ ಚಚ್ಚುಮದ್ದು ನೀಡಿದ್ದಾರೆ. ಬಳಿಕ ಪುಷ್ಪಾ ವತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬಾಯಿಯಿಂದ ನೊರೆ ಬಂದಿದೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನಂತರ ತುಮಕೂರಿಗೆ ಕರೆದುಕೊಂಡು ಹೋಗಿ ಎಂದು ಆಸ್ಪತೆಯವರು ಶಿಫಾರಸ್ಸು ಮಾಡಿದ್ದಾರೆ. ಅಂದೇ ರಾತ್ರಿ ಜಿಲ್ಲಾಸ್ಪತ್ರೆಗೆ ಕುಟುಂಬ ದವರು ಕರೆದುಕೊಂಡು ಹೋಗಿದ್ದರು. ಸುಮಾರು 7 ದಿನ ಕೋಮಾದಲ್ಲಿದ್ದ ಪುಷ್ಪಾವತಿ ಚೇತರಿಸಿ ಕೊಳ್ಳದೆ ಮಂಗಳವಾರ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Roopa Gururaj Column: ಭಗವಂತನಿಗೆ ಸಮರ್ಪಿಸಿಕೊಂಡರೆ ಬದುಕು ಸಹನೀಯ
ನರ್ಸ್ ನೀಡಿದ ಇಂಜೆಕ್ಷನ್ ಓವರ್‌ಡೋಸ್ ಆಗಿ ಮಹಿಳೆಯ ಜೀವವನ್ನು ತೆಗೆದಿದೆ ಎಂದು ಕುಟುಂಬಸ್ಥರು ಆರೋಪಿಸಿ ಶವವನ್ನು ಖಾಸಗಿ ಆಸ್ಪತ್ರೆಯ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಕಳೆದ ಐದು ವರ್ಷದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸ್ಥಳಿಯರಿಗೆ ಆಸ್ಪತ್ರೆ ಬಗ್ಗೆ ಸಮಾಧಾನ ಇಲ್ಲ. ಆದರೆ ಸರಕಾರ ಏಕೆ ಇವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಜನ ಕೇಳುತ್ತಿದ್ದರು. ನಮಗೆ ನ್ಯಾಯ ಬೇಕು ಎಂದು ಆಕ್ರೋಷ ವ್ಯಕ್ತಪಡಿಸಿದರು. ಕಾಡುಗೊಲ್ಲ ಸಮುದಾಯದ ಯುವ ಘಟಕದ ಅಧ್ಯಕ್ಷ ಕೆಂಪರಾಯನಹಟ್ಟಿ ಮಂಜುನಾಥ್, ಕಾರ್ಯದರ್ಶಿ ವಿಶ್ವನಾಥ್, ರಾಮಪ್ಪನಹಟ್ಟಿ ಮಲ್ಲಿಕಾ ರ್ಜುನ್, ಬೆಳಗುಲಿ ಗ್ರಾ.ಪಂ ಅಧ್ಯಕ್ಷ ಬಸವರಾಜ್, ಗ್ರಾ.ಪಂ ಸದಸ್ಯ ವಸಂತಣ್ಣ, ಈರಣ್ಣ, ಗೋಡೆಕೆರೆ ಪವನ್, ಮೊದಲಾದವರು ಸ್ಥಳದಲ್ಲಿದ್ದರು.
ಆರೋಪ ನಿರಾಕರಣೆ
ಮಹಿಳೆ ಸಾವಿನ ಕುರಿತು ಇಂಜೆಕ್ಷನ್ ಒವರ್‌ಡೋಸ್ ಆರೋಪವನ್ನು ಆಸ್ಪತ್ರೆ ನಿರಾಕರಿಸಿದೆ. ಪುಷ್ಪಾ ವತಿ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಇತ್ತು ಇದೇ ಅವರ ಸಾವಿಗೆ ಕಾರಣ ಎಂದು ತಾಲ್ಲೂಕು ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಸಂಘ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು. ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಾಯಿಗಂಗಾ ಆಸ್ಪತ್ರೆಯ ವಿಜಯ ರಾಘವೇಂದ್ರ, ಪ್ರತಿಭಾ, ಜಯಶ್ರೀ, ಭಾಸ್ಕರ್, ಸಿದ್ದರಾಮಣ್ಣ, ರಾಜಶೇಖರ್ ಇದ್ದರು.