Tumkur News: 52 ಗ್ರಾಂ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ!
Tumkur News: ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು 4 ಲಕ್ಷ ರೂಪಾಯಿ ಬೆಲೆ ಬಾಳುವ 52 ಗ್ರಾಂ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು. ಆ ಬ್ಯಾಗ್‌ನ್ನು ತುಮಕೂರಿನ ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿ ಅವರಿಗೆ ವಾಪಸ್ ನೀಡಿದ್ದಾರೆ.


ತುಮಕೂರು: ಸುಮಾರು 4 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ನಗರದ (Tumkur News) ಹನುಮಂತಪುರದ ರವಿಕುಮಾರ್, ವಾರಸುದಾರರಿಗೆ ಚಿನ್ನದ ಒಡವೆ ವಾಪಸ್ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು 4 ಲಕ್ಷ ರೂಪಾಯಿ ಬೆಲೆ ಬಾಳುವ 52 ಗ್ರಾಂ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು. ಆ ಬ್ಯಾಗ್‌ನ್ನು ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿ ಅವರಿಗೆ ವಾಪಸ್ ನೀಡಿದ್ದಾರೆ.
ಗಾಯತ್ರಿ ಅವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಮೂವರು, ರವಿಕುಮಾರ್ ಅವರ ಆಟೋದಲ್ಲಿ ನಗರದ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು ವಾಪಸ್ ಬಂದು ಆಟೋಗಾಗಿ ಹುಡುಕಾಡಿದ್ದಾರೆ. ಇತ್ತ ಆಟೋ ಚಾಲಕ ಕೂಡ ಆಕೆಗಾಗಿ ಹುಡುಕಾಡಿದ್ದಾರೆ.

ಆಟೋ ಸಿಗದಿದ್ದಕ್ಕೆ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಇತ್ತ ಚಾಲಕ ಕೂಡ ಮಹಿಳೆ ಕಾಣದಿದ್ದಕ್ಕೆ ಬ್ಯಾಗ್ ವಾಪಸ್ ಕೊಡಬೇಕು ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಚಾಲಕನ್ನು ನೋಡಿದ ಮಹಿಳೆ ಫುಲ್ ಖುಷಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Weight Loss: ಯೂಟ್ಯೂಬ್ ವಿಡಿಯೋ ನೋಡಿ ಡಯಟ್ ಮಾಡಿದ್ದ ಕೇರಳದ ಯುವತಿ ಸಾವು !
ಬ್ಯಾಗ್‌ನಲ್ಲಿ ಸುಮಾರು 4 ಲಕ್ಷ ರೂಪಾಯಿಯ ಬೆಲೆ ಬಾಳುವ 52 ಗ್ರಾಂ ನಷ್ಟು ಚಿನ್ನಾಭರಣ ತಮ್ಮ ಕೈಸೇರಿದ್ದಕ್ಕೆ ಗಾಯತ್ರಿ ಸಂತಸ ವ್ಯಕ್ತಪಡಿಸಿ ಧನ್ಯವಾದಗಳು ತಿಳಿಸಿದ್ದಾರೆ. ಆಟೋ ಚಾಲಕ ರವಿಕುಮಾರ್ ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.
ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ತುಮಕೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು (Student Arrest) ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಮೂಲದ ಶರತ್ (25) ಬಂಧಿತ ವಿದ್ಯಾರ್ಥಿ. ಮಹಿಳೆಯರ ಒಳ ಉಡುಪುಗಳನ್ನು ಕದಿಯುವುದನ್ನು ಯುವಕ ಕಾಯಕ ಮಾಡಿಕೊಂಡಿದ್ದ. ಈತ ಸುತ್ತಮುತ್ತಲಿನ ಮನೆಗಳಲ್ಲಿ ಮಹಿಳೆಯರ ಒಳ ಉಡುಪು ಕದಿಯುವ ಕೃತ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ಯುವ ಬಿಇ ವ್ಯಾಸಂಗ ಮಾಡುತ್ತಾ ಬಾಡಿಗೆ ರೂಮಿನಲ್ಲಿ ವಾಸವಿದ್ದ. ಓದಿನ ಜತೆಗೆ ನೀಲಿಚಿತ್ರ ನೋಡುವುದನ್ನು ಒಂದು ಚಟವಾಗಿ ಬೆಳೆಸಿಕೊಂಡಿದ್ದ ಎಂಬುವ ವಿಷಯವನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಅಶ್ಲೀಲ ಚಿತ್ರ ನೋಡಿದ ಅಮಲಿನಲ್ಲಿ ಮನೆಗಳ ಮೇಲೆ ಒಣಗಿ ಹಾಕುತ್ತಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದ್ದುಕೊಂಡು ಹೋಗಿ ಅದರಿಂದ ಕಾಮಸುಖ ಅನುಭವಿಸುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ.
ತುಮಕೂರು ನಗರದ ಅಶೋಕನಗರ, ಎಸ್.ಎಸ್. ಪುರಂ, ಎಸ್‌ಐಟಿ ಬ್ಯಾಕ್ ಗೇಟ್ ಸೇರಿದಂತೆ ಹಲವು ಕಡೆಗಳಲ್ಲಿ ಶರತ್ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಚಾಳಿ ರೂಢಿಸಿಕೊಂಡಿದ್ದ. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | UP Horror: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ; ಹೆದ್ದಾರಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು