ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ಗುಬ್ಬಿ ಪಟ್ಟಣ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ನಾನು ನೋಡುತ್ತಾ ಇದ್ದೇನೆ. ಪಟ್ಟಣ ಪಂಚಾಯಿತಿ ಕೆಲಸ ಕೇವಲ ಬಿಲ್ ಮಾಡುವುದು ಅಷ್ಟೇ ಎನಿಸಿದೆ. ಕುಡಿಯುವ ನೀರು ಒದಗಿಸುವ ಹೇರೂರು ಕೆರೆಗೆ ಚರಂಡಿ ನೀರು ಬಿಡುತ್ತಿರುವ ಬಗ್ಗೆ ಗಂಭೀರತೆ ಕಂಡಿಲ್ಲ. ರಾಜ ಕಾಲುವೆಯಲ್ಲಿ ಚರಂಡಿ ನೀರು ಹೇಗೆ ಹರಿಯುತ್ತಿದೆ. ಅಲ್ಲಿನ ತೋಟದ ರೈತರ ಸಮಸ್ಯೆ ಕೂಡಾ ಆಲಿಸಬೇಕಿದೆ

ಗುಬ್ಬಿ ಪಟ್ಟಣ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ

-

Ashok Nayak
Ashok Nayak Mar 6, 2026 6:26 PM

ಗುಬ್ಬಿ: ಪಟ್ಟಣದ ವ್ಯಾಪ್ತಿಯಲ್ಲಿ ವಾರ್ಡ್ ವಾರು ಇ-ಖಾತೆ ಆಂದೋಲನ ನಡೆಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪ್ರತಿ ವಾರ್ಡ್ ನಲ್ಲಿ ಖಾತೆ ಮಾಡಿಸಲು ಫಲಾನುಭವಿಗಳಿಗೆ ಅನುವು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಮಧ್ಯವರ್ತಿಗಳ ಹಾವಳಿ ಬಗ್ಗೆ ದೂರು ಬಂದ ಹಿನ್ನಲೆ ಜನರ ಅನುಕೂಲಕ್ಕೆ ಈ ಆಂದೋ ಲನ ಆಯೋಜನೆ ಮಾಡಲಾಗುತ್ತದೆ ಎಂದರು.

ನಾನು ನೋಡುತ್ತಾ ಇದ್ದೇನೆ. ಪಟ್ಟಣ ಪಂಚಾಯಿತಿ ಕೆಲಸ ಕೇವಲ ಬಿಲ್ ಮಾಡುವುದು ಅಷ್ಟೇ ಎನಿಸಿದೆ. ಕುಡಿಯುವ ನೀರು ಒದಗಿಸುವ ಹೇರೂರು ಕೆರೆಗೆ ಚರಂಡಿ ನೀರು ಬಿಡುತ್ತಿರುವ ಬಗ್ಗೆ ಗಂಭೀರತೆ ಕಂಡಿಲ್ಲ. ರಾಜ ಕಾಲುವೆಯಲ್ಲಿ ಚರಂಡಿ ನೀರು ಹೇಗೆ ಹರಿಯುತ್ತಿದೆ. ಅಲ್ಲಿನ ತೋಟದ ರೈತರ ಸಮಸ್ಯೆ ಕೂಡಾ ಆಲಿಸಬೇಕಿದೆ. ಒಂದು ವರ್ಷವಾದರೂ ಚರಂಡಿ ನಿರ್ಮಾಣ ಮಾಡಿಲ್ಲ. ಶಿರಾದಲ್ಲಿ ಭೂ ಸ್ವಾಧೀನ ಪಡೆದು ತಕ್ಷಣ ಚರಂಡಿ ನಿರ್ಮಾಣ ಮಾಡಿದ್ದಾರೆ. ನಿಮ್ಮಲ್ಲಿ ಯಾಕೆ ಕೆಲಸ ಆಗಿಲ್ಲ. ಈ ಅರ್ಜಿಯನ್ನು ವೈಯಕ್ತಿಕವಾಗಿ ಪರಿಶೀಲನೆ ಮಾಡುತ್ತೇನೆ ಎಂದ ಅವರು ಮುಖ್ಯಾಧಿಕಾರಿಗಳ ಕರ್ತವ್ಯ ಬಗ್ಗೆ ಸರ್ಕಾರಕ್ಕೆ ಬರೆಯುತ್ತೇನೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: Karnataka Budget 2026: ಅಮರ್ಥ್ಯಸೇನ್‌ ಅಶಯ ಬಿಂಬಿಸಿದ ರಾಜ್ಯ ಬಜೆಟ್‌; 11 ಜಿ ಮಾದರಿ ಎಂದರೇನು?

ಜನ ಸಂಪರ್ಕ ಸಭೆಯಲ್ಲಿ ಒಟ್ಟು 70 ಅರ್ಜಿಗಳು ಸಾರ್ವಜನಿಕರು ನೀಡಿದ್ದಾರೆ. ಸರ್ವೇ ಹಾಗೂ ಕಂದಾಯ ಇಲಾಖೆಯ ಅರ್ಜಿಗಳು ಹೆಚ್ಚಾಗಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಬೆಸ್ಕಾಂ ಇಲಾಖೆಯ ಮೇಲಿನ ದೂರು ಅರ್ಜಿಗಳು ಸಹ ಬಂದಿವೆ. ಕಂದಾಯ ಗ್ರಾಮ ಮಾಡುವಲ್ಲಿ ನಮ್ಮದು ಬಿಟ್ಟಿದ್ದಾರೆ ಎಂದು ಎರಡು ಗ್ರಾಮದವರು ಅರ್ಜಿ ಕೊಟ್ಟಿದ್ದಾರೆ. ಪವತಿ ಖಾತೆ, ಸರ್ವೇ, ಪೋಡಿ, ದಾರಿ ಸಮಸ್ಯೆ ವಿಚಾರದ ಅರ್ಜಿಗಳು ಬಂದಿವೆ. ಈ ನಿಟ್ಟಿನಲ್ಲಿ ಅಲ್ಲಿನ ಗ್ರಾಮ ಆಡಳಿತಾಧಿರಿಗಳು, ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿ ಕೂಡಲೇ ಸ್ಥಳ ಪರಿಶೀಲನೆಗೆ ತಿಳಿಸಲಾಗಿದೆ. ಈ ಎಲ್ಲಾ ಅರ್ಜಿಗಳನ್ನು ಮುಂದಿನ ಸಭೆಯೊಳಗೆ ಇತ್ಯರ್ಥ ಮಾಡಲು ಸೂಚಿಸಿದ್ದೇನೆ ಎಂದರು.



ಕಳ್ಳಿಪಾಳ್ಯ ಬಳಿ ಹೈಟೆಂಕ್ಷನ್ ವೈರ್ ಬದಲಿಸಲು ಗ್ರಾಮಸ್ಥರ ಮನವಿ ಬಂದಿದೆ. ಹಳೇ ತಂತಿಗಳ ಬದಲಾವಣೆ ಹಾಗೂ ಜೋತು ಬಿದ್ದ ತಂತಿಗಳ ಬದಲಾವಣೆಗೆ ಮುಖ್ಯ ಇಂಜಿನಿಯರ್ ಜೊತೆ ಮಾತನಾಡಿದ್ದೇನೆ. ಆರು ತಿಂಗಳಿಂದ ರೇಶನ್ ಕಾರ್ಡ್ ಅಕ್ಕಿ ಬಂದಿಲ್ಲ ಹಾಗೂ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಸವಲತ್ತು ಸಿಕ್ಕಿಲ್ಲ ಎಂಬ ದೂರುಗಳು ಕೂಡಲೇ ಸ್ಥಳದಲ್ಲೇ ಪರಿಹಾರ ಕಂಡು ಹಿಡಿಯಲಾಯಿತು ಎಂದರು.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ರಸ್ತೆ ಬದಿ ಅನಧಿಕೃತವಾಗಿ ತಲೆ ಎತ್ತಿರುವ ಅಂಗಡಿ ಮುಂಗಟ್ಟುಗಳಿಗೆ ಯಾವ ಇಲಾಖೆ ಹೊಣೆ ಎಂಬುದು ತಿಳಿದಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಕೂಡಲೇ ಪರಿಶೀಲನೆ ಮಾಡುವಂತೆ ಸೂಚಿಸಿದರು. ಅಲೆಮಾರಿ ಜನಾಂಗಕ್ಕೆ ನೀಡಿದ ನಿವೇಶನದಲ್ಲಿ ಕೆಲವು ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿಲ್ಲ ಎಂಬ ದೂರು ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಆರತಿ.ಬಿ, ತಾಪಂ ಇಓ ರಂಗನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.