ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಪದಗ್ರಹಣ ಸಮಾರಂಭದಲ್ಲಿ ತಾಲ್ಲೂಕು ಬಿಜೆಪಿ ಸಾರಥ್ಯ ವಹಿಸಿದ ಬಲರಾಮಣ್ಣ

ಪ್ರಮುಖ ಜವಾಬ್ದಾರಿ ನೂತನ ಅಧ್ಯಕ್ಷರ ಹೆಗಲ ಮೇಲಿದೆ. ಅಡಕೆ ವ್ಯವಹಾರ ಜೊತೆ ಪಕ್ಷ ಸಂಘಟನೆ ನಡೆಸಿ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಈ ಡಿಸೆಂಬರ್ ಮಾಹೆಯಲ್ಲಿ ವಿವಿಧ ಮೋರ್ಚಾಗಳಿಗೆ ಕೆಲಸ ಮಾಡುವ ಕಾರ್ಯಕರ್ತರನ್ನು ನೇಮಿಸಲು ಸನ್ನದ್ದರಾಗುವಂತೆ ಸೂಚಿಸಿದರು.

ಗುಬ್ಬಿ: ತಾಲ್ಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ಬಲರಾಮಣ್ಣ ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ ಅವರ ಮೂಲಕ ಪಕ್ಷದ ಬಾವುಟ ಪಡೆದು ಅಧಿಕಾರ ವಹಿಸಿಕೊಂಡರು.

ಪಟ್ಟಣದ ಎವಿಕೆ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಪದಗ್ರಹಣ ಸಮಾರಂಭ ದಲ್ಲಿ ರಾಜ್ಯ ಮತ್ತು ಜಿಲ್ಲಾ ಮುಖಂಡರು ಹಾಗೂ ತಾಲ್ಲೂಕಿನ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನ ಅಧಿಕಾರ ವಹಿಸಿಕೊಂಡರು.

ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮಾತನಾಡಿ ಪಕ್ಷದಲ್ಲಿ ಬಲಿಷ್ಠ ಮುಖಂಡರ ಸಂಖ್ಯೆ ಹೆಚ್ಚಾಗಿದ್ದು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಗುಂಪುಗಾರಿಕೆಗೆ ಅವಕಾಶ ಕೊಡದೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಇಬ್ಬರ ಜಗಳ ಮೂರನೇ ಅವರಿಗೆ ಲಾಭ ಎಂಬ ವಿಚಾರ ಕ್ಷೇತ್ರದಲ್ಲಿ ಕಂಡಿದೆ. ಶಾಸಕರ ಆಯ್ಕೆ ನಮ್ಮಲ್ಲಿ ಸುಲಭ ಮಾಡಿಕೊಳ್ಳಲು ಮೊದಲು ಸ್ಥಳೀಯ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅಧ್ಯಕ್ಷರು ಹಾಗೂ ಮುಖಂಡರ ಮೇಲಿದೆ. ಪಕ್ಷ ಗೆಲ್ಲಿಸುವ ಕಾರ್ಯಕರ್ತರು ಯಾವುದೇ ಗೊಂದಲಕ್ಕೀಡಾಗದೆ 2028 ಕ್ಕೆ ಶಾಪ ವಿಮೋಚನೆ ಮಾಡೋಣ ಎಂದು ಕರೆ ನೀಡಿದರು.

ಇದನ್ನೂ ಓದಿ: Gubbi News: ಗುಬ್ಬಿ ತಾಲ್ಲೂಕು ತುಮಲ್ ನಿರ್ದೇಶಕರ ವಿರುದ್ಧ ಎನ್ ಡಿಎ ನೇರ ಆರೋಪ

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ ಪ್ರಮುಖ ಜವಾಬ್ದಾರಿ ನೂತನ ಅಧ್ಯಕ್ಷರ ಹೆಗಲ ಮೇಲಿದೆ. ಅಡಕೆ ವ್ಯವಹಾರ ಜೊತೆ ಪಕ್ಷ ಸಂಘಟನೆ ನಡೆಸಿ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಈ ಡಿಸೆಂಬರ್ ಮಾಹೆಯಲ್ಲಿ ವಿವಿಧ ಮೋರ್ಚಾಗಳಿಗೆ ಕೆಲಸ ಮಾಡುವ ಕಾರ್ಯಕರ್ತರನ್ನು ನೇಮಿಸಲು ಸನ್ನದ್ದರಾಗುವಂತೆ ಸೂಚಿಸಿದರು.

ಪಕ್ಷದ ಚುನಾವಣಾಧಿಕಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಮಾತನಾಡಿ ರಾಜ್ಯದೆಲ್ಲೆಡೆ ತಾಲ್ಲೂಕು ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಕ್ಷೇತ್ರದ 5 ಹೋಬಳಿಯಲ್ಲಿ ಬೂತ್ ಮಟ್ಟದ ಸಮಿತಿ ರಚಿಸಿ ಪಾರದರ್ಶಕ ಘಟಕಗಳು ಕೆಲಸ ಮಾಡಿದರೆ ಚುನಾವಣಾ ಫಲಿತಾಂಶ ತಾನಾಗಿಯೇ ಫಲಪ್ರದ ಆಗಲಿದೆ. ಪುರಾಣ ಕಥೆಯಲ್ಲಿ ಶಕ್ತಿಶಾಲಿ ಬಲರಾಮ ರೀತಿ ನೂತನ ಅಧ್ಯಕ್ಷರು ಪಕ್ಷ ಸಂಘಟನೆ ಮಾಡಲಿ ಎಂದು ಶುಭ ಹಾರೈಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಹಿಂದುಳಿದ ವರ್ಗಗಳ ಸಂಘಟನೆಗೆ ಈ ಬಾರಿ ಪಕ್ಷದ ಸ್ಥಾನ ಬಲರಾಮಣ್ಣ ಅವರಿಗೆ ನೀಡಲಾಗಿದೆ. ಕೈಗೊಂಬೆ ರೀತಿ ವರ್ತಿಸದೆ ಸ್ವಂತ ಆಲೋಚನೆಯಲ್ಲಿ ಎಲ್ಲಾ ಮುಖಂಡರ ಒಮ್ಮತದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಜಿಪಂ ತಾಪಂ ಗ್ರಾಪಂ ಚುನಾವಣೆ ಜೊತೆಗೆ ಪಟ್ಟಣ ಪಂಚಾಯಿತಿ ಚುನಾವಣೆ ಗೆಲುವು ಅಭ್ಯರ್ಥಿಗಳ ಆಯ್ಕೆ ಮಾಡಿದಲ್ಲಿ ಮುಂದಿನ ಶಾಸಕ ಸ್ಥಾನ ಗೆಲ್ಲಲು ಅವಕಾಶ ಸಾಧ್ಯ. ಏಕ ಪಕ್ಷೀಯ ನಿರ್ಧಾರ, ಸಲ್ಲದ ಗೊಂದಲ ಸೃಷ್ಟಿ ಮಾಡುವುದು ಬಿಟ್ಟು ಪಕ್ಷ ಕಟ್ಟಬೇಕು ಎಂದು ಸಲಹೆ ನೀಡಿದರು.

ಅಧಿಕಾರಿ ಪಡೆದ ನೂತನ ಅಧ್ಯಕ್ಷ ಬಲರಾಮಣ್ಣ ಮಾತನಾಡಿ ಪಕ್ಷ ಸಂಘಟನೆಗೆ ಕಾರ್ಯಕರ್ತನಾಗಿ ದುಡಿದು ಪ್ರತಿ ಕಾರ್ಯಕರ್ತರಲ್ಲಿ ಅಧ್ಯಕ್ಷರನ್ನು ಕಾಣುವಂತೆ ಕೆಲಸ ಮಾಡುತ್ತೇನೆ. ಮುಂದಿನ ಸ್ಥಳೀಯ ಚುನಾವಣೆ ಪರ್ವ ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಗೆಲುವಿಗೆ ಪಣ ತೊಡುವುದಾಗಿ ಹೇಳಿ ಅಧ್ಯಕ್ಷ ಸ್ಥಾನ ನೀಡಿದ ಪಕ್ಷದ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ, ಜಿಪಂ ಮಾಜಿ ಸದಸ್ಯರಾದ ವೈ.ಎಚ್.ಹುಚ್ಚಯ್ಯ ಪಿ.ಬಿ.ಚಂದ್ರಶೇಖರಬಾಬು, ಹಿರಿಯ ಮುಖಂಡ ಎಸ್.ನಂಜೇಗೌಡ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ಎಚ್.ಟಿ.ಭೈರಪ್ಪ, ಎಸ್.ವಿಜಯಕುಮಾರ್, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ, ಮುಖಂಡರಾದ ಎನ್.ಸಿ.ಪ್ರಕಾಶ್, ಯತೀಶ್, ಸಿ.ಎಂ.ಹಿತೇಶ್, ಸಿದ್ದರಾಮಯ್ಯ, ಬಸವರಾಜ್, ಜಿಪಂ ಮಾಜಿ ಸದಸ್ಯರಾದ ಯಶೋಧಮ್ಮ, ಡಾ.ನವ್ಯಾಬಾಬು, ಪಪಂ ಮಾಜಿ ಸದಸ್ಯರಾದ ಶಿವಕುಮಾರ್, ಅಣ್ಣಪ್ಪಸ್ವಾಮಿ, ಕೃಷ್ಣಮೂರ್ತಿ ಇತರರು ಇದ್ದರು.