ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು : ಆಹಾರ ತಜ್ಞ ಡಾ.ಖಾದರ್

ಹರಿ ಚಂದನ ಎಂಬ ಮೂಲ ಹೆಸರಿನ ಶ್ರೀಗಂಧ ಬೆಳೆಯನ್ನು ವಾಣಿಜ್ಯಕರವಾಗಿ ಬೆಳಯದೆ, ಪ್ರತಿಯೊಬ್ಬರು ಒಂದೂಂದು ಶ್ರೀಗಂಧ ಗಿಡವನ್ನು ಬೆಳೆದು ಅವರಿಂದ ದೊರೆಯುವ ಆರೋಗ್ಯಕರ ವಾತಾವರಣ ಗಮನಿಸಬಹುದಾಗಿದೆ. ಶ್ರೀಗಂಧ ಲೇಪನ ಸೇವಿಸುವುದರಿಂದ ಮನುಷ್ಯನಿಗೆ ಹರಡುವ ಕಾಯಿಲೆಗಳನ್ನು ತಡೆಗಟ್ಟಬಹುದು.

ಗುಬ್ಬಿ: ಆರೋಗ್ಯಪೂರ್ಣ ಸಿರಿ ಧಾನ್ಯ(Millets)ಗಳು ಶತಮಾನಗಳ ಹಿಂದೆ ಬೆಳೆದು ತಿಂದ ನಮ್ಮ ಹಿರಿಯರ ಆರೋಗ್ಯ ಪ್ರಸ್ತುತ ಆಹಾರ ಪದ್ಧತಿಯಲ್ಲಿ ಕಾಣುತ್ತಿಲ್ಲ. ಕೊರ್ಲೆ, ಸಾಮೆ, ನವಣೆ, ಉದಲು, ಆರ್ಕಾ, ಸಜ್ಜೆ ಸೇರಿದಂತೆ ಹಲವು ಸಿರಿಧಾನ್ಯಗಳನ್ನು ಸೇವಿಸುವುದರಿಂದ ಸರ್ವ ರೋಗಕ್ಕೂ ಮದ್ದು ಸಿಗುತ್ತಿತ್ತು ಎಂದು ಆಹಾರತಜ್ಞ ಡಾ.ಖಾದರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೇರೂರು ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೈಸರ್ಗಿಕ ಆಹಾರ ಪದ್ದತಿಯ ಕುರಿತು ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು‌ ಅಕ್ಕಿ ಗೋಧಿ ಆರೋಗ್ಯಕ್ಕೆ ಉಪಯುಕ್ತವಲ್ಲ ಎಂಬ ಅರಿವು ಈಗ ಮೂಡುತ್ತಿದೆ. ಸಿರಿಧಾನ್ಯ ಗಳ ಬಗ್ಗೆ ದೇಶದ ಪ್ರಧಾನಿಗಳು ಈಚೆಗೆ ಮಾತನಾಡಲು ಆರಂಭಿಸಿದ್ದಾರೆ. ಆದರೆ ಅಕ್ಕಿ ಗೋಧಿ ಬೆಳೆಗೆ ಶೇ.4 ರಷ್ಟು ಸಬ್ಸಿಡಿ ನೀಡಿದ್ದು, ಸಿರಿಧಾನ್ಯಗಳಿಗೆ ಜಿಎಸ್ಟಿ ತೆರಿಗೆ ಹಾಕಿರುವುದು ದೊಡ್ಡ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಹರಿ ಚಂದನ ಎಂಬ ಮೂಲ ಹೆಸರಿನ ಶ್ರೀಗಂಧ ಬೆಳೆಯನ್ನು ವಾಣಿಜ್ಯಕರವಾಗಿ ಬೆಳಯದೆ, ಪ್ರತಿಯೊಬ್ಬರು ಒಂದೂಂದು ಶ್ರೀಗಂಧ ಗಿಡವನ್ನು ಬೆಳೆದು ಅವರಿಂದ ದೊರೆಯುವ ಆರೋಗ್ಯಕರ ವಾತಾವರಣ ಗಮನಿಸಬಹುದಾಗಿದೆ. ಶ್ರೀಗಂಧ ಲೇಪನ ಸೇವಿಸುವುದರಿಂದ ಮನುಷ್ಯನಿಗೆ ಹರಡುವ ಕಾಯಿಲೆಗಳನ್ನು ತಡೆಗಟ್ಟಬಹುದು. ಜನರು ತಮ್ಮ ವ್ಯವಸಾಯದಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಹಾಗೂ ನಮ್ಮ ಆಹಾರ ಪದ್ಧತಿಯಿಂದಾಗಿ ಐವಿಎಫ್ ಕೇಂದ್ರಗಳು ಹೆಚ್ಚಾಗುತ್ತಿವೆ. ಅರಳಿಮರ, ಸೀಬೆ ಎಲೆ, ಪಾರಿಜಾತ ಎಲೆಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ರಕ್ತ ಕ್ಯಾನ್ಸರ್ ವಾಸಿ ಮಾಡಿಕೊಳ್ಳಬಹುದು ಎಂದರು.

ಇದನ್ನೂ ಓದಿ: Gubbi News: ಧರ್ಮಸ್ಥಳ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಿಂದೆ ಅಕ್ಕಿ ಗೋಧಿ ಬೆಳೆಯುವ ಸಂಖ್ಯೆ ಶೇ.2 ರಷ್ಟು ಇತ್ತು. ಉಳಿದ 98 ಸಿರಿಧಾನ್ಯಗಳು ಬೆಳೆಯ ಲಾಗುತ್ತಿತ್ತು. ಆದರೆ ಅಕ್ಕಿ ಗೋಧಿ ಹೊರತಾದ ಎಲ್ಲಾ ದವಸ ಧಾನ್ಯ, ಕಾಳು ಸರ್ವನಾಶ ಮಾಡಿ ದ್ದೇವೆ. ಪ್ರಸ್ತುತ ಆಹಾರ ಪದ್ಧತಿಯಿಂದ ಅನಾರೋಗ್ಯ ಜೊತೆಗೆ ಮುಂದಿನ 105 ವರ್ಷಗಳ ನಂತರ ಮಕ್ಕಳ ಜನನ ಅಂಶ ಕ್ಷೀಣಿಸಲಿದೆ. ಈ ಆಘಾತಕಾರಿ ಸಂಶೋಧನೆ ಈಗಾಗಲೇ ನಡೆದಿದೆ. ರಾಸಾಯನಿಕ ಮುಕ್ತ ದವಸ ಧಾನ್ಯ, ತರಕಾರಿ ಬೆಳೆಯುವವರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ನಾರಿನಾಂಶ ಇರುವ ಆಹಾರಗಳನ್ನು ಸೇವಿಸಬೇಕು ಆಗ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳ ಬಹುದು. ಪ್ರತಿಯೊಬ್ಬರು ನೈಸರ್ಗಿಕ ಕೃಷಿಯಲ್ಲಿ ತೊಡಗಿದರೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ‌ ಎಂದರು.

ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ರಾಜ್ಯಾಧ್ಯಕ್ಷ ರಘುರಾವ್ ಮಾತನಾಡಿ ಕೃಷಿ ಪ್ರಧಾನ ದೇಶದಲ್ಲಿ ಸಾವಯವ ಬೇಸಾಯ ಮಾಡುತ್ತಿಲ್ಲ. ಉತ್ತಮ ಬೆಲೆ ಇರುವ ಶ್ರೀಗಂಧ ಬೆಳೆ ಮಾಡಲು ಉತ್ತೇಜನ ಸಿಗಬೇಕು. ರಾಸಾಯನಿಕ ಬಳಕೆ ರೈತರಲ್ಲಿ ಆತಂಕ ತಂದಿದೆ. ಜೊತೆಗೆ ಅನಿವಾರ್ಯ ಸೃಷ್ಟಿಯಾಗಿದೆ. ನೈಸರ್ಗಿಕ ಆಹಾರ ಪದ್ಧತಿ ಅಳವಡಿಕೆ ಬಗ್ಗೆ ತಿಳಿಯಬೇಕಿದೆ. ರಾಸಾಯನಿಕ ಜ್ಯೂಸ್ ಕುಡಿಯುವ ಜನ ರೈತರ ಎಳನೀರು ಕುಡಿಯಲು ಯೋಚನೆ ಮಾಡುತ್ತಾರೆ. ಮುಂದಿನ ಪೀಳಿಗೆ ಉಳಿಸಲು ನೈಸರ್ಗಿಕ ಕೃಷಿ, ಪ್ಲಾಸ್ಟಿಕ್ ಮುಕ್ತ ಸಮಾಜ ಹಾಗೂ ಸಿರಿಧಾನ್ಯ ಮಹತ್ವ ಟೀಕಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಾಲಿಂಗಯ್ಯ, ಚೇಳೂರು ವೆಂಕಟೇಶ್, ಅಮ್ಮನಘಟ್ಟ ಮಹೇಶ್, ವೈದ್ಯ ಅರುಣ್, ಮೃತ್ಯುಂಜಯಪ್ಪ, ಪುಟ್ಟಕಾಮಣ್ಣ, ಮಂಜಣ್ಣ, ಬಿ.ವಿ.ರಾಜೀವ್ ಸೇರಿದಂತೆ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.

image

ಕ್ಯಾನರ್ ಪೀಡಿತನಾಗಿ ವೈದ್ಯರ ಬಳಿಯಲ್ಲಿ ಪರೀಕ್ಷಿಸಿದಾಗ ಇನ್ನೆರೆಡು ತಿಂಗಳ ಆಯಸ್ಸು ಹೇಳಿ ದ್ದರು. ಆದರೆ ಆಹಾರತಜ್ಞ ಡಾ.ಖಾದರ್ ಅವರ ಮಾರ್ಗದರ್ಶನದಂತೆ ಸಿರಿಧಾನ್ಯ ಬಳಕೆ ಆರಂಭಿಸಿ ನಾಲ್ಕು ವರ್ಷದಿಂದ ಕ್ಯಾನ್ಸರ್ ರೋಗದಿಂದ ಹೋರಾಟ ನಡೆಸಿ ಆರೋಗ್ಯ ಸುಧಾರಣೆ ಆಗುತ್ತಿದ್ದೇನೆ. ಸಿರಿ ಧಾನ್ಯಗಳ ಮಹತ್ವಕ್ಕೆ ನಾನೇ ಖುದ್ದು ಉದಾಹರಣೆ.

-ಅಮ್ಮನಘಟ್ಟ ಶಂಕರಪ್ಪ, ನೈಸರ್ಗಿಕ ಕೃಷಿಕ, ಗುಬ್ಬಿ.