ಗುಬ್ಬಿ: ಬಿಡದಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಬಂಡವಾಳ ಹಾಕಿಕೊಂಡು ಪಾಲುದಾರಿಕೆ ಪಡೆದಿರುವಂತೆ ಕಾಣುತ್ತಿದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ(Thiruvekere MLA MT Krishnappa) ಛೇಡಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ಜಲ ಜೀವನ್ ಮಿಶನ್ ಯೋಜನೆ(Jal Jeevan Mission Scheme)ಯ 1.35 ಕೋಟಿ ರೂಗಳ ಮನೆಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಬಿಡದಿ ಟೌನ್ ಶಿಪ್(Bidadi Township) ನಿರ್ಮಾಣ ಯೋಜನೆಗೆ ಕುಮಾರಸ್ವಾಮಿ ಆಲೋಚನೆ ಮಾಡಿದ್ದರು. ಆದರೆ ಅಲ್ಲಿನ ರೈತರ ಒತ್ತಡಕ್ಕೆ ಮಣಿದು ಯೋಜನೆ ಕೈಬಿಟ್ಟಿದ್ದರು. ಆದರೆ ಈಗ ಕಾಂಗ್ರೆಸ್ ರೈತರ ಬೀದಿ ಪಾಲು ಮಾಡಿಯಾದರೂ ಯೋಜನೆಗೆ ಚಾಲನೆ ನೀಡಿದ್ದಾರೆ. ಇಲ್ಲೇ ತಿಳಿಯುತ್ತೆ ಕಾಂಗ್ರೆಸ್ ಪಾರ್ಟನರ್ ಶಿಪ್ ಇದೆ ಎಂದು ಟೀಕಿಸಿದರು.
ಇದನ್ನೂ ಓದಿ: Bidadi township: ಶಾಸಕರಿಗೆ ನಿವೇಶನ ಆರೋಪ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿಗೆ ಶಾಸಕ ಬಾಲಕೃಷ್ಣ ಸವಾಲು
ಬಿಡದಿ ಬಳಿಯ ಟೌನ್ ಶಿಪ್ ಯೋಜನೆಯ ಭಾಗದ ರೈತರು ಕೇವಲ ಅರ್ಧ ಎಕರೆ ಜಮೀನನ್ನು ಹೊಂದಿದ್ದಾರೆ. ಹಸು ಕಟ್ಟಿಕೊಂಡು ಬದುಕು ನಡೆಸಿದ್ದಾರೆ. ಅಂತಹ ಸಣ್ಣ ರೈತರ ತಲೆ ಹೊಡೆ ಯುವ ಕೆಲಸ ಕಾಂಗ್ರೆಸ್ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದ ಅವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಬಿಡದಿ ಭಾಗದ ಯುವಕರಿಗೆ ಕೃಷಿ ಮತ್ತು ಹೈನುಗಾರಿಕೆ ಜೀವನ ಕಟ್ಟಿಕೊಂಡಿದ್ದಾರೆ. ಇಂತಹ ಯುವಕರ ಬದುಕಿನ ಜೊತೆ ಚೆಲ್ಲಾಟ ಸರಿಯಲ್ಲ. ದುಡ್ಡು ಹೊಡೆ ಯುವ ಸ್ಕೀಂ ಮಾಡುವ ಕೆಲಸ ಬಿಟ್ಟು ರೈತಪರ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿ ಮಾತನಾಡಿ ಜೆಜೆಎಂ ಯೋಜನೆ ಎಲ್ಲಾ ಗ್ರಾಮಕ್ಕೂ ವಿಸ್ತರಿಸಲಾಗಿದೆ ಎಂದರು.
ಅಡ್ಡ ಮತದಾನ ಎಂಬುದು ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸವಾಗಿದೆ. ಪಕ್ಷ ನಂಬಿ ಶಾಸಕರಾಗಿ ಪಕ್ಷಕ್ಕೆ ನಿಯತ್ತು ಇರಬೇಕು. ಜೆಡಿಎಸ್ ಅಭ್ಯರ್ಥಿ ಹಾಕುವ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸಭೆ ನಡೆಸಿ ಎಲ್ಲಾ ಶಾಸಕರ ಸಮ್ಮತಿ ನಂತರವೇ ಅಭ್ಯರ್ಥಿ ನಿಲ್ಲಿಸಿದ್ದರು. ಕ್ರಾಸ್ ಮತ ನಾಲ್ಕು ಮಂದಿ ಎನ್ನಲಾಗುತ್ತಿದೆ. ಇದು ನಂಬಿಕೆ ದ್ರೋಹ ಎಂದ ಅವರು ಹೇಮಾವತಿ ನೀರು ಹಂಚಿಕೆಗಿಂತ ಹೆಚ್ಚು ಅಂದರೆ 7.5 ಟಿಎಂಸಿ ಕುಣಿಗಲ್ ತಾಲ್ಲೂಕಿಗೆ ಹರಿದಿದೆ. ಈಗಾಗಲೇ ಮಾಗಡಿಗೂ ನೀರು 0.65 ಎಂಸಿಟಿಎಫ್ ಹರಿದಿದೆ. ಪೈಪ್ ಲೈನ್ ಮಾಡುತ್ತಿರುವ ಕಾರಣ ಮಾತ್ರ ಮುಚ್ಚಿಟ್ಟು ಕೆಲಸ ಮಾಡಲು ಮುಂದಾಗುತ್ತಾರೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮುಖ್ಯ ನಾಲೆಯಲ್ಲಿ ಹರಿಯಬೇಕು. ಪೈಪ್ ಲೈನ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಜಿಲ್ಲೆಯ 24 ಲಕ್ಷ ರೈತರ ಬದುಕಿನ ಪ್ರಶ್ನೆ ಈ ನೀರಿನ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ನವೀನ್ ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ಈಶ್ವರ್ ಗೌಡ, ಮಹಾಲಕ್ಷ್ಮಮ್ಮ, ಮುಖಂಡರಾದ ಲಕ್ಷ್ಮೀನಾರಾಯಣ್ (ಅಣ್ಣಿ), ಚನ್ನಿಗಪ್ಪ, ದೇವರಾಜ್, ರಮೇಶ್, ಗುತ್ತಿಗೆದಾರ ನಾಗರಾಜು ಇತರರು ಇದ್ದರು.