ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಮಾಜಿ ಉಗ್ರನ ವಿಚಾರಣೆ

Tumakuru news: ಮಾಜಿ ಉಗ್ರನನ್ನು 2016ರಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಖಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ.

ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಮಾಜಿ ಉಗ್ರನ ವಿಚಾರಣೆ

ತುಮಕೂರಿನ -

ಹರೀಶ್‌ ಕೇರ
ಹರೀಶ್‌ ಕೇರ Nov 13, 2025 12:31 PM

ತುಮಕೂರು: ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಬೀಕರ ಕಾರು ಸ್ಫೋಟ (Delhi Blast), Delhi red fort car blast) ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ತುಮಕೂರಿನಲ್ಲಿ (Tumakuru) ಮಾಜಿ ಉಗ್ರನೊಬ್ಬನನ್ನು ವಿಚಾರಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಮಾಜಿ ಉಗ್ರ ಮುಜಾಹಿದ್ಧೀನ್ ಎಂಬಾತನನ್ನು ಎಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮಾಡಿದ್ದಾರೆ.

ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟ ಸಂಬಂಧ ಎನ್‌ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆ ದೇಶದೆಲ್ಲಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಕರ್ನಾಟಕದಲ್ಲೂ ಟೆರರ್‌ ಸೆಲ್‌ಗಳ ಮೇಲೆ ಒಂದು ಕಣ್ಣಿಡಲಾಗಿದೆ.

ಮಾಜಿ ಉಗ್ರನನ್ನು 2016ರಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಖಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ.

ಇದನ್ನೂ ಓದಿ: Delhi Blast: ಕಾಲೇಜಿನಲ್ಲಿ ಟಾಪರ್‌ ಆಗಿದ್ದ ಡಾ. ಶಾಹೀನ್‌ ಸಯೀದ್ ಭಯೋತ್ಪಾದಕಿ ಆಗಿದ್ದು ಹೇಗೆ?

ಡಾ. ಉಮರ್‌ ಡಿಎನ್‌ಎ ಮ್ಯಾಚಿಂಗ್‌

ನವದೆಹಲಿ, ನ.13: ದೆಹಲಿಯ ಕೆಂಪು ಕೋಟೆಯ ಬಳಿ (delhi red fort car blast) ನಡೆದ ಕಾರು ಸ್ಫೋಟ (Delhi Blast) ಪ್ರಕರಣದಲ್ಲಿ ಕಾರು ಚಲಾಯಿಸುತ್ತಿದ್ದವನು ಡಾ. ಉಮರ್‌ ಎಂಬುದು ಖಚಿತವಾಗಿದೆ. ಸ್ಫೋಟಗೊಂಡ ಐ20 ಕಾರಿನಲ್ಲಿ ಪತ್ತೆಯಾಗಿರುವ ಪತ್ತೆಯಾದ ಛಿದ್ರಗೊಂಡ ಶವದ ಡಿಎನ್ಎ ಪರೀಕ್ಷಾ (DNA test) ವರದಿ ಬಂದಿದ್ದು, ಶವ ಉಮರ್​​ನದ್ದು ಎಂದು ತಿಳಿದುಬಂದಿದೆ. ಈತ ಫರೀದಾಬಾದ್‌ನಲ್ಲಿ ತನ್ನ ಸಹಚರರ ಬಂಧನದ ಬಳಿಕ ಕಾರ್‌ ತೆಗೆದುಕೊಂಡು ಪರಾರಿಯಾಗಿದ್ದ.

ಡಾ. ಉಮರ್ ಬಿಳಿ ಬಣ್ಣದ ಹುಂಡೈ ಐ20 ಕಾರನ್ನು ಖರೀದಿಸಿದ್ದ ಮತ್ತು ಸ್ಫೋಟದ ಸಮಯದಲ್ಲಿ ಕಾರಿನಲ್ಲಿದ್ದ ಎಂದು ಭಾರತೀಯ ತನಿಖಾ ಸಂಸ್ಥೆಗಳು ಕಂಡುಹಿಡಿದಿವೆ. ಆತ ಫರಿದಾಬಾದ್‌ನಲ್ಲಿ ಬಂಧಿಸಲಾದ ಭಯೋತ್ಪಾದಕ ಘಟಕದ ಸದಸ್ಯನೂ ಆಗಿದ್ದ. ಪುಲ್ವಾಮಾದ ಸಂಬುರಾ ಗ್ರಾಮದ ನಿವಾಸಿಗಳಾದ ಉಮರ್‌ನ ತಾಯಿ ಮತ್ತು ಸಹೋದರರಿಂದ ಡಿಎನ್‌ಎ ಮಾದರಿಗಳನ್ನು ತೆಗೆದುಕೊಂಡು ಕಾರಿನಲ್ಲಿ ಕಂಡುಬಂದ ದೇಹದ ಅವಶೇಷಗಳೊಂದಿಗೆ ಹೋಲಿಸಿದಾಗ, ಅವು ಶೇ. 100 ಹೊಂದಿಕೆಯಾಗುತ್ತವೆ ಎಂದು ಕಂಡುಬಂದಿದೆ. ಮೃತನ ಹಲ್ಲುಗಳು, ಮೂಳೆಗಳು ಮತ್ತು ಇತರ ಅವಶೇಷಗಳು ತಾಯಿ ಮತ್ತು ಸಹೋದರನ ಮಾದರಿಗಳೊಂದಿಗೆ ಹೊಂದಿಕೆಯಾಗಿವೆ.