ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S.R. Srinivas: ಕಂದಾಯ ಗ್ರಾಮ ರಚನೆಗೆ ದಾಖಲಾತಿ ಸಿದ್ದ: ಶಾಸಕ ಎಸ್.ಆರ್.ಶ್ರೀನಿವಾಸ್

ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಹತ್ತಿರವಾಗಿ ಸಿಗುವ ನಾನು ಅಧಿಕಾರಿಗಳ ಸಂಪರ್ಕ ದಲ್ಲಿದ್ದೇನೆ. ಕಟ್ಟಕಡೆಯ ವ್ಯಕ್ತಿಗೂ ನೇರ ಸಿಗುವ ಮೂಲಕ ಅವರ ಸಮಸ್ಯೆ ಆಲಿಸಿದ್ದೇನೆ. ಅಧಿಕಾರಿಗಳು ಹಾಗೂ ಇಲಾಖೆಯ ದಾಖಲೆಗಳು ರೈತರಿಗೆ ಮನೆ ಬಾಗಿಲಿಗೆ ಸಿಗುವಂತೆ ಮಾಡಲು ನಾಡ ಕಚೇರಿ ಕಟ್ಟಲಾಗಿದೆ.

ಗುಬ್ಬಿ: ಸರ್ಕಾರಿ ಜಮೀನು ಹಾಗೆಯೇ ಇಡುವಳಿ ಜಮೀನಿನಲ್ಲೂ ಸೃಷ್ಟಿಯಾಗಿದ್ದ ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ರಚನೆ ಮಾಡಲು ಕಂದಾಯ ಇಲಾಖೆಯ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಪಟ್ಟ ಎರಡು ತಿಂಗಳ ಶ್ರಮದ ಫಲವಾಗಿ 300 ಕ್ಕೂ ಅಧಿಕ ಕಂದಾಯ ಗ್ರಾಮ ರಚನೆಯಾಗಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S.R. Srinivas) ತಿಳಿಸಿದರು.

ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ಕಟ್ಟಿದ ನೂತನ ನಾಡ ಕಚೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ದಾಖಲೆಗಳ ಸಂಗ್ರಹಕ್ಕೆ ಕಂದಾಯ ಇಲಾಖೆ ಎಲ್ಲಾ ಸಿಬ್ಬಂದಿಗಳು ಪಟ್ಟ ಶ್ರಮ ಸಾಕಷ್ಟಿದೆ. ರೈತರು ದಾಖಲೆ ಒದಗಿಸುವಲ್ಲಿ ವಿಳಂಬ ಮಾಡಿದರು. ಮಜರೆ ಗ್ರಾಮಗಳು, ಕಾಲೋನಿಗಳು ದಾಖಲೆ ಒದಗಿಸುವಲ್ಲಿ ಸಹಕಾರ ನೀಡಬೇಕು ಎಂದರು.

ಇದನ್ನೂ ಓದಿ: Gubbi News: ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು : ಶಾಸಕ ಎಸ್.ಆರ್.ಶ್ರೀನಿವಾಸ್

ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಹತ್ತಿರವಾಗಿ ಸಿಗುವ ನಾನು ಅಧಿಕಾರಿಗಳ ಸಂಪರ್ಕ ದಲ್ಲಿದ್ದೇನೆ. ಕಟ್ಟಕಡೆಯ ವ್ಯಕ್ತಿಗೂ ನೇರ ಸಿಗುವ ಮೂಲಕ ಅವರ ಸಮಸ್ಯೆ ಆಲಿಸಿದ್ದೇನೆ. ಅಧಿಕಾರಿಗಳು ಹಾಗೂ ಇಲಾಖೆಯ ದಾಖಲೆಗಳು ರೈತರಿಗೆ ಮನೆ ಬಾಗಿಲಿಗೆ ಸಿಗುವಂತೆ ಮಾಡಲು ನಾಡ ಕಚೇರಿ ಕಟ್ಟಲಾಗಿದೆ. ಉಳಿದಂತೆ ಕಡಬ, ನಿಟ್ಟೂರು ಹಾಗೂ ಕಸಬ ಹೋಬಳಿಗೆ ಕಟ್ಟಡಕ್ಕೆ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ ಎಂದರು.

ವಸತಿ ಯೋಜನೆಯು ಕಳೆದ 7 ವರ್ಷದಿಂದ ಮನೆಗಳನ್ನು ನೀಡಿಲ್ಲ. ಈ ಬಾರಿ 4 ಸಾವಿರ ಮನೆಗಳು ಮಂಜೂರು ಆಗಲಿದೆ. ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗುವುದು ಎಂದ ಅವರು ಚೇಳೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 30 ಹಾಸಿಗೆಯ ಹೈಟೆಕ್ ಆಸ್ಪತ್ರೆಗೆ ಮಂಜೂರಾತಿ ಸಿಗಲಿದೆ. ಈ ಜೊತೆಗೆ ಜಲ ಜೀವನ್ ಮಿಶನ್ ಯೋಜನೆ ಕೂಡಾ ಕಾಮಗಾರಿ ನಡೆಯಲಿದೆ. ಫುಟ್ ಪಾತ್ ಅಂಗಡಿಗಳ ತೆರವು ಮಾಡಲು ಸಾರ್ವ ಜನಿಕರಿಗೆ ತೊಂದರೆ ಆಗಿದ್ದಲ್ಲಿ ಮಾತ್ರ ಮಾಡಲು ಸೂಚಿಸಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ನಾಡ ಕಚೇರಿಗೆ ಸ್ಥಳ ನೀಡಿದ ಗ್ರಾಮ ಪಂಚಾಯಿತಿ ಹಾಗೂ ಶ್ರಮಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ತಹಶೀಲ್ದಾರ್ ಆರತಿ.ಬಿ, ಗ್ರಾಪಂ ಉಪಾಧ್ಯಕ್ಷೆ ಸುಜಾತ, ಸದಸ್ಯೆ ಪದ್ಮ, ಉಪ ತಹಶೀಲ್ದಾರ್ ಆರ್.ಜಿ.ನಾಗಭೂಷಣ್, ಕಂದಾಯ ನಿರೀಕ್ಷಕ ಬಸವರಾಜ್, ಗ್ರಾಮ ಲೆಕ್ಕಾಧಿ ಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷೆ ಸುಮತಿ, ಗ್ರಾಮ ಲೆಕ್ಕಾಧಿಕಾರಿಗಳಾದ ಭಾನು, ಮಹೇಶ್, ತಾತಾನಾಯಕ್, ನಾಗಭೂಷಣ್, ಅನ್ಸರ್, ಶಿವಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.