ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಯಿ ಕೊಂದು ಬಸ್‌ ತಂಗುದಾಣದಲ್ಲಿ ನೇತು ಹಾಕಿದ ಕಿಡಿಗೇಡಿಗಳು!

Tiptur News: ತಿಪಟೂರಿನಲ್ಲಿ ಘಟನೆ ನಡೆದಿದೆ. ನಾಯಿಯನ್ನು ಕೊಂದು ತಂಗುದಾಣದಲ್ಲಿ ನೇತು ಹಾಕಿದ್ದು, 4- 5 ದಿನಗಳ ಹಿಂದೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೃತ್ಯ ಹೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ನಾಯಿ ಕೊಂಡು ಬಸ್‌ ತಂಗುದಾಣದಲ್ಲಿ ನೇತು ಹಾಕಿರುವುದು.

ತಿಪಟೂರು: ನಗರದ (Tiptur) ಬೈಪಾಸ್ ರಸ್ತೆಯಲ್ಲಿ ನೂರಾರು ಜನ ಕುಳಿತು ಹೋಗುವ ತಂಗುತಾಣದಲ್ಲಿ ಅಮಾನುಷ ಕೃತ್ಯ ನಡೆದಿರುವುದು ಕಂಡುಬಂದಿದೆ. ನಾಯಿಯನ್ನು ಕೊಂದು ತಂಗುದಾಣದಲ್ಲಿ ನೇತು ಹಾಕಿದ್ದು, 4- 5 ದಿನಗಳ ಹಿಂದೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಸರ್ವಿಸ್ ರಸ್ತೆಗೆ ಹೊಂದಿಕೊಂಡಂತಿರುವ ಈ ತಂಗುದಾಣದ ಪಕ್ಕ ಪಕ್ಕ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ. ಪ್ರತಿದಿನ ಗಸ್ತು ಹಾಕುವ ಸಂಚಾರಿ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಗಸ್ತು ಹಾಕುವವರು ಇಂತಹ ಘಟನೆ ಕಂಡರೂ ಕಾಣದಂತೆ ಇದ್ದಾರೆ. ಇನ್ನು ಬೈಪಾಸ್ ರಸ್ತೆಯು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೃತ್ಯ ಹೆಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಒಂದೇ ವಾರದಲ್ಲಿ 2 ಚಿರತೆ ಸೆರೆ

ಹಾಸನ: ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದಲ್ಲಿ ಒಂದು ವಾರದ ಅಂತರದಲ್ಲಿ ಎರಡು ಚಿರತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ದಿಂಡಗೂರು ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮದೊಳಗೆ ನಾಯಿ, ಜಾನುವಾರುಗಳನ್ನು ತಿಂದು ಹಾಕುತ್ತಿದ್ದವು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿ ಎರಡು ಚಿರತೆಗಳನ್ನೂ ಸೆರೆಹಿಡಿದಿದ್ದಾರೆ.

ಕಳೆದ ಫೆಬ್ರವರಿ 26 ರಂದು ರೈತ ಆನಂದ್ ಅವರಿಗೆ ಸೇರಿದ್ದ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಮಾ.6ರಂದು ಸಹ ಒಂದು ಚಿರತೆ ಸೆರೆಯಾಗಿದೆ. ಒಂದು ವಾರದ ಅಂತರದಲ್ಲಿ ಅದೇ ಜಾಗದಲ್ಲಿ ಎರಡನೇ ಚಿರತೆ ಸೆರೆಯಾಗಿದ್ದು ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಗ್ರಾಮದ ಸುತ್ತಮುತ್ತಾ ಚಿರತೆಗಳಿದ್ದು ಅವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

POCSO case: ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಜೀವನಪೂರ್ತಿ ಜೈಲು ಶಿಕ್ಷೆ