ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

POCSO case: ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಜೀವನಪೂರ್ತಿ ಜೈಲು ಶಿಕ್ಷೆ

ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ನಿವಾಸಿ ಆರೋಪಿ ಸೋಮನಿಂಗ ಕಳಸದವರ ಶಿಕ್ಷೆಗೆ ಗುರಿಯಾಗಿದ್ದಾನೆ.

ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಜೀವನಪೂರ್ತಿ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Mar 7, 2026 1:13 PM

ವಿಜಯಪುರ, ಮಾರ್ಚ್​ 06: ಐದು ವರ್ಷದ ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ (POCSO case) ಎಸಗಿದ್ದ ಕಾಮುಕ ತಂದೆಗೆ (Father) ವಿಜಯಪುರದ (vijayapura news) ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ (life imprisoment) ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ತಂದೆಯೇ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ (physical Abuse) ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ನಿವಾಸಿ ಆರೋಪಿ ಸೋಮನಿಂಗ ಕಳಸದವರ ಶಿಕ್ಷೆಗೆ ಗುರಿಯಾಗಿದ್ದಾನೆ.

ಸೋಮನಿಂಗ ತನ್ನದೇ ಅಪ್ರಾಪ್ತ ಐದು ವರ್ಷದ ಮಗಳಿಗೆ ಕಳೆದ ಗಣೇಶ ಚತುರ್ಥಿ ವೇಳೆ ಗಣೇಶನ ಮೂರ್ತಿಗಳನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ವಿಜಯಪುರ ನಗರದ ಆಲಕುಂಟೆ ನಗರದಲ್ಲಿನ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ 2025 ಆಗಸ್ಟ್ 30ರಂದು ಸಾಯಂಕಾಲ ಅತ್ಯಾಚಾರ ಎಸಗಿದ್ದ. ಈ‌ ಕುರಿತು ಅಪ್ರಾಪ್ತೆಯ ತಾಯಿ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 65(2) ಬಿ ಎನ್ ಎಸ್ – 2023 ಹಾಗೂ 5(ಎಂ) 6 ಪೋಕ್ಸೋ ಕಾಯ್ದೆ 2012ರಂತೆ ದೂರು ದಾಖಲಿಸಿದ್ದರು.

ಬೆಂಗಳೂರಿನ ಐಐಎಸ್‌ಸಿ ನಿವೃತ್ತ ಪ್ರೊಫೆಸರ್ ಕುಟುಂಬದ ತ್ರಿವಳಿ ಕೊಲೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ವಿಚಾರಣೆಯಲ್ಲಿ ಸಾಕ್ಷಿಗಳನ್ನು ಪರಿಶೀಲಿಸಿದ ವಿಜಯಪುರದ ವಿಶೇಷ ಪೋಕ್ಸೋ ನ್ಯಾಯಾಧೀಶೆ ಕು. ಸಿಂದು ಪೋತದಾರ ಅವರು ಆರೋಪಿ ಸೋಮನಿಂಗ ಕಳಸದಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮಹಿಳಾ ಠಾಣೆ ಪೊಲೀಸ್ ಠಾಣೆಯ ಅಧಿಕಾರಿಗಳಾದ ಜಯವಂತ ದುಲಾರಿ, ಆ‌ರ್ ಎ ದಿನ್ನಿ, ಪಿ ವೈ ಅಂಬಿಗೇರ, ಸಿಬ್ಬಂದಿಗಳಾದ ವಿಜಯ ಕೋಟ್ಯಾಳ, ಆರ್ ಜಿ ದೇವೂರ, ಎಸ್ ಎಂ ಕೋಳುರಗಿ, ಎಸ್ ಕೆ ಬಡಚಿ, ಕುಮಾರ ದೇಸಾಯಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಅಭಿಯೋಜಕ ವಿ ಜಿ ಹಗರಗೊಂಡ ಸರ್ಕಾರದ ಪರವಾಗಿ ವಾದ ಮಂಡಿಸಿದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿದೇಶಕ್ಕೆ ವಿಡಿಯೋ ಮಾರಾಟ; ಜೂನಿಯರ್ ಎಂಜಿನಿಯರ್, ಪತ್ನಿಗೆ ಮರಣದಂಡನೆ ಶಿಕ್ಷೆ