ಚಿಕ್ಕನಾಯಕನಹಳ್ಳಿ: ಮುಂದಿನ ಪೀಳಿಗೆಗೆ ನೀರನ್ನುಳಿಸುವ ಸಲುವಾಗಿ ಪ್ರತಿಯೊಬ್ಬರೂ ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಶ್ರೀಮತಿ ಎಂ.ಎಸ್. ಕುಸುಮ ತಿಳಿಸಿದರು. ಪಟ್ಟಣದ ನವೋದಯ ಪದವಿ ಕಾಲೇಜಿನಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆ ಹಾಗೂ ಎನ್‌ಎಸ್‌ಎಸ್ ವತಿಯಿಂದ ನಡೆದ ಅಟಲ್ ಭೂಜಲ್ ಯೋಜನೆ ಯಡಿ ಅಂತರ್ಜಲ ಅಭಿವೃದ್ದಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಾವು ಬಳಸುವ ನೀರಿನ ಬಗ್ಗೆ ನಮಗೆ ಅರಿವಿರಬೇಕು, ನಿತ್ಯ ಜೀವನದಲ್ಲಿ ವೃಥಾ ಹೆಚ್ಚುವರಿ ನೀರಿನ ಬಳಕೆ ಮಾಡುತ್ತಿರುತ್ತೇವೆ, ಇದಕ್ಕೆ ಪ್ರತಿಯೊಬ್ಬರೂ ಕಡಿವಾಣ ಹಾಕಿದಾಗ ಜಲಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಲಿದೆ.
ಇದನ್ನೂ ಓದಿ: Chikkaballapur News: ಮಕ್ಕಳು ಬೇಸಿಗೆ ಶಿಬಿರ ಪ್ರಯೋಜನ ಪಡೆದುಕೊಳ್ಳಿ: ಡಿಡಿಪಿಐ ವೆಂಕಟೇಶ್ ರೆಡ್ಡಿ
ನೀರಿನ ಪೋಲಿನಿಂದ ಪರಿಸರದ ಮೇಲೆ ಪರಿಣಾಮವಾಗಲಿದೆ. ಸರ್ಕಾರದ ಉಪಯುಕ್ತ ಯೋಜನೆ ಗಳಿಗೆ ಸಮೂಹ ಕೈ ಜೋಡಿಸಿದಾಗ ಅದರ ಆಶಯಗಳು ಈಡೇರಲಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ಐಇಸಿ ತಜ್ಞ ರಾಘವೇಂದ್ರ ಮಾತನಾಡಿ ನೀರಿನ ಮಿತವ್ಯಯದ ಬಳಕೆ ಹಾಗೂ ಸಂರಕ್ಷಣೆ ಎಲ್ಲರ ಸ್ವಭಾವವಾಗಬೇಕು, ಮಳೆ ನೀರನ್ನು ತಡೆದು ನಿಲ್ಲಿಸುವುದು, ಅಂತರ್ಜಲ ಮರು ಪೂರಣ ಗೊಳಿಸುವುದು, ಹರಿಯುವ ನೀರನ್ನು ತಡೆದು ಕಟ್ಟೆ, ಚೆಕ್‌ಡ್ಯಾಂ, ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿ ದರೆ ಬೇಸಿಗೆ ಹಾಗೂ ಇನ್ನಿತರ ಸಂದರ್ಭದಲ್ಲಿ ನೀರಿನ ಕೊರತೆ ಇಲ್ಲವಾಗಲಿದೆ.
ಕೃಷಿಯಲ್ಲಿ ಹನಿನೀರಾವರಿ ಅಳವಡಿಕೆಯಂತಹ ಕ್ರಮಗಳನ್ನು ಅನುಸರಿಸಬೇಕಿದೆ. ಹಳ್ಳಿಗಳಲ್ಲಿ ಅಟಲ್ ಭೂಜಲ್ ಯೋಜನೆ ಪರಿಣಾಮಕಾರಿಯಾಗಿ ನಡೆದಿದೆ, ಇದರಲ್ಲಿ ಪ್ರತಿಯೊಬ್ಬರ ಸಹಭಾಗಿತ್ವವಿದ್ದರೆ ಯೋಜನೆ ಕಾರ್ಯಗತವಾಗಲಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ಡಾ. ರವಿಕುಮಾರ್ ಮಾತನಾಡಿ ಜೀವಜಲ ಎಲ್ಲರಿಗೂ ಮುಖ್ಯ, ನಗರಗಳ ಅಭಿವೃದ್ದಿ ಹಾಗೂ ಆಧುನಿಕ ಜೀವನ ನೀರಿನ ಬಳಕೆಯ ಮೇಲೆ ಪರಿಣಾಮ ಬೀರಲಿದೆ, ಈ ಹಿನ್ನಲೆ ಯಲ್ಲಿ ನೀರನ್ನು ಬಳಸುವ ಹಾಗೂ ಉಳಿಸುವ ಕಾರ್ಯತಂತ್ರವನ್ನು ಎಲ್ಲರೂ ಅನುಸರಿಸ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟಿçಯ ಯೋಜನಾಧಿಕಾರಿ ಪ್ರೊ. ಸದಾನಂದಸ್ವಾಮಿ, ಮುಖ್ಯ ಶಿಕ್ಷಕ ಹರ್ಷ, ಉಪನ್ಯಾಸಕರಾದ ಸಿದ್ದಲಿಂಗಮೂರ್ತಿ, ಸತೀಶ್, ಬಸವರಾಜು, ಅನಿತ ಲಕ್ಷ್ಮೀ, ನಂದನ್, ಆಶಾ, ಗೋಪಾಲ್ ಮುಂತಾದವರಿದ್ದರು. ನವೋದಯ ಯುವ ಬಳಗದಿಂದ ಪರಿಸರ ಗೀತೆ ಹಾಡಲಾ ಯಿತು. ಕುಮಾರಿ ಯಶಸ್ವನಿ ನಿರೂಪಿಸಿದರು. ಅನಿತ ಸ್ವಾಗತಿಸಿ ಲಕ್ಷ್ಮೀ ವಂದಿಸಿದರು.