ಪಾವಗಡ, ಸೆ.04: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗುಲ್ಜಾರ್ ಬಾನು ಅವರಿಗೆ ತಾಲೂಕಿನ (Pavagada News) ಅಂಗನವಾಡಿ ಕಾರ್ಯಕರ್ತೆಯರ ವತಿಯಿಂದ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಪೌಷ್ಟಿಕತೆ, ಶಿಕ್ಷಣ ಹಾಗೂ ಆರೈಕೆಯಲ್ಲಿ ಗುಲ್ಜಾರ್ ಬಾನು ಅವರು ಸಲ್ಲಿಸಿದ ಸೇವೆಯನ್ನು ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು. ಮಕ್ಕಳ ಹಿತಕ್ಕಾಗಿ ಅವರು ತೋರಿದ ಕಾಳಜಿ ಹಾಗೂ ಹಲವು ವರ್ಷಗಳ ಸೇವೆಯನ್ನು ಕಾರ್ಯಕರ್ತೆಯರು ಶ್ಲಾಘಿಸಿದರು.
ಸಹೋದ್ಯೋಗಿಗಳಿಂದ ಸನ್ಮಾನ
ದೀರ್ಘಕಾಲದ ಸೇವೆಯ ಬಳಿಕ ನಿವೃತ್ತಿ ಹೊಂದಿದ ಗುಲ್ಜಾರ್ ಬಾನು ಅವರನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸಹೋದ್ಯೋಗಿಗಳು ಅವರ ಮುಂದಿನ ಜೀವನ ಸುಖ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಇದೀಗ ನಿವೃತ್ತಿ ಜೀವನಕ್ಕೆ ಕಾಲಿಟ್ಟಿದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸದಾಕಾಲವೂ ಹೀಗೆ ಇರಬೇಕು ಎಂದು ನಿವೃತ್ತಿ ಹೊಂದಿದ ಗುಲ್ಜಾರ್ ಬಾನು ತಿಳಿಸಿದರು.
Tumkur News: ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ
ಬೀಳ್ಕೊಡುಗೆ ಸಮಾರಂಭದಲ್ಲಿ ಹಲವು ವರ್ಷಗಳ ಸೇವಾ ನೆನಪುಗಳನ್ನು ಮೆಲುಕು ಹಾಕಲಾಯಿತು. ಸಹೋದ್ಯೋಗಿಗಳ ಆತ್ಮೀಯ ಮಾತುಗಳಿಂದ ಕಾರ್ಯಕ್ರಮವು ಭಾವನಾತ್ಮಕ ವಾತಾವರಣಕ್ಕೆ ಸಾಕ್ಷಿಯಾಯಿತು. ಈ ವೇಳೆ ಎಸಿಡಿಪಿಒ ಆದ ರಾಕೀಭ್ ಉಲ್ಲಾ. ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಹನುಮಕ್ಕ, ಸೂಪರ್ ವೈಜರ್‌ಗಳಾದ ಜಯಲಕ್ಷ್ಮೀ, ವಿಜಯಲಕ್ಷ್ಮೀ ಹಾಗೂ ಕಾರ್ಯಕರ್ತೆಯರಾದ ಸುಶೀಲಮ್ಮ, ಸಿದ್ದಗಂಗಮ್ಮ, ಪ್ರೀತಿ ಹಾಗೂ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.