ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ

Tumkur News: ತುಮಕೂರು ನಗರದ ಎಂ.ಜಿ. ರಸ್ತೆ ಮತ್ತು ವಿವೇಕಾನಂದ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇದು ಅವರ ಜೀವನೋಪಾಯಕ್ಕೆ ಮಹಾನಗರ ಪಾಲಿಕೆ ನೀಡಿದ ಸಹಕಾರ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶುಭ ತಿಳಿಸಿದ್ದಾರೆ.

ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ

-

Profile
Siddalinga Swamy Sep 4, 2026 6:33 PM

ತುಮಕೂರು, ಸೆ.04: ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗ (Tumkur News) ಫುಟ್‌ಪಾತ್‌ನಲ್ಲಿ ಮಾರಾಟ ವಲಯ ಸ್ಥಾಪಿಸಿ, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಶುಭ, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಆಸರೆ: ನಗರದ ಎಂ.ಜಿ. ರಸ್ತೆ ಮತ್ತು ವಿವೇಕಾನಂದ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇದು ಅವರ ಜೀವನೋಪಾಯಕ್ಕೆ ಮಹಾನಗರ ಪಾಲಿಕೆ ನೀಡಿದ ಸಹಕಾರ ಎಂದು ಆಯುಕ್ತೆ ಶುಭ ತಿಳಿಸಿದರು.

ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ

ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ 'ಫುಡ್ ಸ್ಟ್ರೀಟ್' ಆರಂಭಿಸಲಾಗುವುದು. ಇದರಿಂದ ಜನಸಂದಣಿ ಹೆಚ್ಚಾಗಿ ವ್ಯಾಪಾರ ವೃದ್ಧಿಯಾಗುವ ನಿರೀಕ್ಷೆಯಿದೆ ಎಂದರು.

ಅಭಿವೃದ್ಧಿ ಕಾರ್ಯಗಳು: ಈ ರಸ್ತೆಯ ಎರಡು ಕಡೆಗಳಲ್ಲಿ ಆಟೋ ನಿಲ್ದಾಣ ಸ್ಥಾಪನೆ ಹಾಗೂ ಜಗಜೀವನ್‌ರಾಮ್ ಭವನ ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಓಡಾಟದಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.

ಶಾಶ್ವತ ಯುಜಿಡಿ ಸಮಸ್ಯೆ ಪರಿಹಾರ: ಈ ರಸ್ತೆಯನ್ನು ಪಾಲಿಕೆಯಿಂದ 'ಮಾರಾಟ ವಲಯ'ವೆಂದು ಘೋಷಿಸಲಾಗಿದ್ದು, ಇಲ್ಲಿನ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

Tumkur News: ತುಮಕೂರಿನಲ್ಲಿ ಧ್ವಜ ಪೂಜೆಯೊಂದಿಗೆ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ಚಾಲನೆ

ಕೌಶಲ್ಯಾಭಿವೃದ್ಧಿ ಸಾಲ ಸೌಲಭ್ಯ: ಒಂದು ವೇಳೆ ಈ ರಸ್ತೆಯಲ್ಲಿ ವ್ಯಾಪಾರ ಕಡಿಮೆಯಿದ್ದರೆ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸಾಲ ಸೌಲಭ್ಯವಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಬೇರೆ ರೀತಿಯ ವ್ಯಾಪಾರವನ್ನೂ ಆರಂಭಿಸಬಹುದಾಗಿದೆ ಎಂದು ಆಯುಕ್ತರು ಸಲಹೆ ನೀಡಿದರು. ಈ ಪರಿಶೀಲನಾ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಬಸ್ಸುಮ್ ಜಹೀರಾ, ಕೌನ್ಸಿಲ್ ಸೆಕ್ರೆಟರಿ ನಜ್ಮಾ ಹಾಗೂ ಬೀದಿಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.