ತಿಪಟೂರು, ಸೆ.01: ಆಕಸ್ಮಿಕ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟಗೊಂಡ ( gas cylinder blast) ಪರಿಣಾಮ ದಂಪತಿಗೆ ಸುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ (Tiptur) ಗೆದ್ಲಹಳ್ಳಿ ವ್ಯಾಪ್ತಿಯ ಕಾಯಿ ಫ್ಯಾಕ್ಟರಿ ಬಳಿಯ ಶೆಡ್‌ವೊಂದರಲ್ಲಿ ಬೆಳಗಿನಜಾವ ಜರುಗಿದೆ. ತಾಲೂಕಿನ ಗೆದ್ಲಹಳ್ಳಿ ವ್ಯಾಪ್ತಿಯ ತಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ್ ಮೂಲದ ಮನೋಜ್ (37) ಮತ್ತು ಮಾಲಾದೇವಿ(35) ಎಂಬುವವರೇ ಗಾಯಗೊಂಡ ದಂಪತಿ.
ಕಾಯಿ ಫ್ಯಾಕ್ಟರಿಯ ಶೆಡ್ ಒಂದರಲ್ಲಿ ಈ ದಂಪತಿ ವಾಸವಾಗಿದ್ದರು, ಬೆಳಗಿನಜಾವ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಂಪತಿಗಳಿಬ್ಬರಿಗೂ ಸುಟ್ಟ ಗಾಯಗಳಾಗಿವೆ.
ಸ್ಥಳೀಯರ ಹೇಳಿಕೆ ಪ್ರಕಾರ ಇವರು ತೆಂಗಿನ ಚಿಪ್ಪು ಸುಡುವ ಕೆಲಸವನ್ನು ಮಾಡುತ್ತಿದ್ದರು. ಇಬ್ಬರೂ ಕೂಡ ಪಾನಮತ್ತರಾಗಿ ಮಲಗಿದ್ದರು, ಪತಿ ಮುಂಜಾನೆ ವೇಳೆ ಮನೋಜ್ ಬೀಡಿ ಸೇದಲು ಬೆಂಕಿ ಕಡ್ಡಿ ಗೀರಿದಾಗ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಂಪತಿಗಳಿಬ್ಬರಿಗೂ ಸುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಶೆಡ್‌ನ ಮೇಲ್ಚಾವಣಿ ಚಿದ್ರವಾಗಿದ್ದು,ವಸ್ತುಗಳು, ಬಟ್ಟೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ, ಗಾಯಗೊಂಡ ದಂಪತಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮನೋಜ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಮಾಲದೇವಿ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬಂಡೆಯಿಂದ ಕೆಳಗೆ ಬಿದ್ದು ಮೂರು ವರ್ಷದ ಹೆಣ್ಣು ಕರಡಿಗೆ ಗಂಭೀರ ಗಾಯ
ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಬಿದರೆಕೆರೆ ಗ್ರಾಮದಲ್ಲಿ (Madhugiri News) ಪರಸ್ಪರ ಕಾದಾಟ ನಡೆಸುತ್ತಿದ್ದ ಎರಡು ಕರಡಿಗಳು ಬಂಡೆಯಿಂದ ಕೆಳಗೆ ಬಿದ್ದ ಪರಿಣಾಮ, ಮೂರು ವರ್ಷದ ಹೆಣ್ಣು ಕರಡಿಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರಾಮದ ಜಮೀನೊಂದರಲ್ಲಿ ದೊಡ್ಡ ಗಾತ್ರದ ಬಂಡೆಯ ಮೇಲೆ ಎರಡು ಕರಡಿಗಳು ಉಗ್ರವಾಗಿ ಕಾದಾಡುತ್ತಿದ್ದವು. ಕಾದಾಟದ ರಭಸ ತಾಳಲಾರದೆ ಎರಡೂ ಕರಡಿಗಳು ಬಂಡೆಯಿಂದ ಕೆಳಗೆ ಉರುಳಿಬಿದ್ದಿದ್ದು, ಮೂರು ವರ್ಷದ ಹೆಣ್ಣು ಕರಡಿಯ ಮುಂಭಾಗದ ಕಾಲಿಗೆ ತೀವ್ರ ಪೆಟ್ಟಾಗಿದೆ.
ಕರಡಿಯು ತೀವ್ರ ನೋವಿನಿಂದ ಕಿರುಚಾಡುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರ ಈ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಸುರೇಶ್ ಎಚ್.ಎಂ. ಹಾಗೂ ಡಿಆರ್‌ಎಫ್‌ಒ ಶಾಲಿನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ರಕ್ಷಕರಾದ ಮಹೇಶ್ ಮತ್ತು ಶ್ರೀಧರ್ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ರಕ್ಷಿಸಿದರು.
ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು, ತಿಂದ್ರೆ ಸಮಸ್ಯೆ ಗ್ಯಾರಂಟಿ!
ಬಂಡೆಯಿಂದ ಬಿದ್ದ ರಭಸಕ್ಕೆ ಕರಡಿಯ ಮುಂಭಾಗದ ಕಾಲು ಮುರಿದಿರುವುದು ದೃಢಪಟ್ಟಿದೆ. ತಕ್ಷಣವೇ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕರಡಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿಕೊಡಲಾಗಿದೆ.