ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು, ತಿಂದ್ರೆ ಸಮಸ್ಯೆ ಗ್ಯಾರಂಟಿ!

ನೇಪಾಳದ ಭೀಕರ ಪ್ರವಾಹದಿಂದಾಗಿ ಬಿಹಾರದ ಗಂಡಕ್ ನದಿಗೆ ಅಪರಿಚಿತ ಹಾಗೂ ವಿಚಿತ್ರ ತಳಿಯ ಮೀನುಗಳು ಹರಿದುಬಂದಿವೆ, ಈ ಮೀನುಗಳನ್ನು ಸೇವಿಸಿದ ಕೆಲವರ ಅನಾರೋಗ್ಯಕ್ಕೆ ಒಳಗಾದ ವರದಿಗಳು ಬಂದ ನಂತರ ಬಿಹಾರ ಸರ್ಕರವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ನೇಪಾಳದಲ್ಲಿ ಭೀಕರ ಪ್ರವಾಹ; ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು!

ಬಿಹಾರಕ್ಕೆ ತೇಲಿ ಬಂತು ವಿಚಿತ್ರ ಮೀನುಗಳು -

Vishakha Bhat Heggar
Vishakha Bhat Heggar Sep 1, 2026 4:00 PM

ಪಟನಾ: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹ (Nepal Flood) ಭಾರೀ ಅನಾಹುತವನ್ನು ಸೃಷ್ಟಿಸಿದ್ದು, ಈ ವರೆಗೆ 1000 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡು, 4000 ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೆರೆ ದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ ಬಿಹಾರದ ಗಂಡಕ್ ಹಾಗೂ ಸುತ್ತಮುತ್ತಲಿನ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳಾವಾಗಿದೆ. ಸದ್ಯ ನದಿ ಪಾತ್ರದ ಬಳಿ (Viral News) ಇರುವ ಜನರಿಗೆ ಸೂಕ್ತ ಸ್ಥಳಕ್ಕೆ ತೆರಳಲು ಸರ್ಕಾರ ಆದೇಶಿಸಿದೆ. ಇದರ ನಡುವೆ ಪ್ರವಾಹದ ನೀರಿನಲ್ಲಿ ತೇಲಿ ಬಂದ ರಾಶಿ ರಾಶಿ ಮೀನುಗಳು ಆತಂಕವನ್ನು ಸೃಷ್ಟಿ ಮಾಡಿವೆ.

ಪ್ರವಾಹದ ನೀರಿನ ಮೂಲಕ ಹರಿದುಬಂದ ಅಪರಿಚಿತ ಮೀನುಗಳು ಈಗ ಜನರಲ್ಲಿ ಆತಂಕ ಮೂಡಿಸಿವೆ. ಈ ಮೀನುಗಳನ್ನು ಸೇವಿಸಿದಂತೆ ಬಿಹಾರ ಸರ್ಕಾರದ ಪ್ರಾಣಿ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯ ಮೀನುಗಾರಿಕೆ ವಿಭಾಗ ಸಂದೇಶ ನೀಡಿದೆ. ವರದಿಯ ಪ್ರಕಾರ, ಪ್ರವಾಹದ ನೀರಿನೊಂದಿಗೆ ಅಪರಿಚಿತ ಹಾಗೂ ವಿಚಿತ್ರವಾಗಿ ಕಾಣುವ ಮೀನುಗಳು ಸ್ಥಳೀಯ ಜಲಾಶಯಗಳಿಗೆ ಹರಿದು ಬಂದಿವೆ. ಅಲ್ಲದೆ, ಈ ಮೀನುಗಳನ್ನು ತಿಂದ ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

ವಿಡಿಯೋ ನೋಡಿ



ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪರಿಚಿತ ಮೀನುಗಳು ಕಾಣಿಸಿಕೊಳ್ಳುತ್ತಿರುವುದೇಕೆ?

ಪ್ರವಾಹದ ಸಮಯದಲ್ಲಿ, ಕೊಳಗಳು, ನದಿಗಳು, ಸರೋವರಗಳು ಮತ್ತು ಇತರ ಜಲಾಶಯಗಳಲ್ಲಿದ್ದ ಮೀನುಗಳು ಬಲವಾದ ನೀರಿನ ಹರಿವಿನೊಂದಿಗೆ ತಮ್ಮ ಮೂಲ ಆವಾಸ ಸ್ಥಾನಗಳಿಂದ ಬಹುದೂರಕ್ಕೆ ಹರಿದು ಹೋಗುತ್ತವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಅವು ಕಲುಷಿತ ಚರಂಡಿಗಳು, ಸತ್ತ ಪ್ರಾಣಿಗಳು ಮತ್ತು ಇತರ ಕಸ-ಕಡ್ಡಿಗಳ ಜೊತೆ ಸೇರಿಕೊಳ್ಳುತ್ತವೆ. ಇದರಿಂದಾಗಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲಿಂಧ್ರಗಳ ಸೋಂಕಿಗೆ ಒಳಗಾಗುತ್ತವೆ. ಪ್ರವಾಹದ ನೀರಿನಿಂದ ಹಿಡಿದ ಮೀನೂ ತಿನ್ನಲು ಸುರಕ್ಷಿತವೆಂದು ಭಾವಿಸುವುದು ಸಾರ್ವಜನಿಕರನ್ನು ತೀವ್ರ ಅಪಾಯಕ್ಕೆ ಸಿಲುಕಿಸಬಹುದು ಎಂದು ಆಡಳಿತ ಮಂಡಳಿಯು ಎಚ್ಚರಿಸಿದೆ.

ಈ ಮೀನುಗಳನ್ನು ತಿನ್ನುವುದರಿಂದ ಉಂಟಾಗುವ ಅಪಾಯಗಳೇನು?

ನೀರಿನ ಮಟ್ಟವು ಯಥಾಸ್ಥಿತಿಗೆ ಮರಳಿ ಪರಿಸ್ಥಿತಿಯು ತಿಳಿಯಾಗುವವರೆಗೆ ಪ್ರವಾಹದ ನೀರಿನಿಂದ ಹಿಡಿದ ಮೀನುಗಳನ್ನು ಸೇವಿಸಬಾರದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆ ತಿಳಿಸಿದೆ. ವಿಶೇಷವಾಗಿ ಅಪರಿಚಿತ ಅಥವಾ ವಿಚಿತ್ರವಾಗಿ ಕಾಣುವ ಮೀನುಗಳನ್ನು ಗುರುತಿಸಿರುವ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯು ಅವುಗಳ ಗುರುತು ಮತ್ತು ಸುರಕ್ಷತೆಯನ್ನು ಖಚಿತಪಡಿಸುವವರೆಗೆ ನಿವಾಸಿಗಳು ಅವುಗಳನ್ನು ಹಿಡಿಯುವುದು, ಖರೀದಿಸುವುದು, ಮಾರಾಟ ಮಾಡುವುದು ಅಥವಾ ತಿನ್ನುವುದನ್ನು ಸಂಪೂರ್ಣವಾಗಿ ಬೀಡಬೇಕು ಎಂದು ಮನವಿ ಮಾಡಿದ್ದಾರೆ. ಅಂತಹ ಮೀನುಗಳನ್ನು ಈಗಾಗಲೇ ತೀಂದವರಿಗೆ, ವಾಂತಿ, ಭೇದಿ, ಹೊಟ್ಟೆ ನೋವು, ತಲೆಸುತ್ತು, ಉಸಿರಾಟದ ತೊಂದರೆ ಅಥವಾ ಇನ್ನಿತರ ಯಾವುದೇ ಅಸಹಜ ರೋಗಲಕ್ಷಣಗಳು ಕಂಡುಬಂದರೆ, ಮನೆಯಲ್ಲಿಯೇ ಕಾಯದೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಆಡಳಿತ ಮಂಡಳಿಯು ಸಲಹೆ ನೀಡಿದೆ.